IPL 2024: ಆ ಆಟಗಾರನಿಂದಲೇ ನಾವು ಸೋತಿದ್ದೇವೆ.. ಹಾರ್ದಿಕ್ ಪಾಂಡ್ಯ ಕಾಮೆಂಟ್ ವೈರಲ್!!

Hardik Pandya: ಭಾನುವಾರ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ‌ CSK 20 ರನ್‌ಗಳಿಂದ ಜಯಗಳಿಸಿದೆ..   

Written by - Savita M B | Last Updated : Apr 15, 2024, 02:46 PM IST
  • ಭಾನುವಾರ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್ ಪಂದ್ಯ
  • ಮುಂಬೈ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಪಂದ್ಯದ ನಂತರ ಧೋನಿಯನ್ನು ಹೊಗಳಿದರು.
IPL 2024: ಆ ಆಟಗಾರನಿಂದಲೇ ನಾವು ಸೋತಿದ್ದೇವೆ.. ಹಾರ್ದಿಕ್ ಪಾಂಡ್ಯ ಕಾಮೆಂಟ್ ವೈರಲ್!!  title=

Hardik Pandya Comments: ಭಾನುವಾರ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ CSK 20 ರನ್‌ಗಳಿಂದ ಜಯಗಳಿಸಿತ್ತು. ಮುಂಬೈ ಆರಂಭಿಕ ಆಟಗಾರ ರೋಹಿತ್ ಶರ್ಮಾ ಶತಕ ಸಿಡಿಸಿದರೂ ತಂಡ ಸೋಲನುಭವಿಸಿತು... ಈ ಪಂದ್ಯದ ಕೊನೆಯಲ್ಲಿ ಬ್ಯಾಟಿಂಗ್ ಗೆ ಬಂದ ಧೋನಿ 4 ಎಸೆತಗಳಲ್ಲಿ 20 ರನ್ ಗಳಿಸಿ ಭರ್ಜರಿ ಬ್ಯಾಟಿಂಗ್ ಮಾಡಿದರು. ಮುಂಬೈ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಪಂದ್ಯದ ನಂತರ ಧೋನಿಯನ್ನು ಹೊಗಳಿದರು.

ಇದನ್ನೂ ಓದಿ-IPL 2024: ಲಾಸ್ಟ್ ಓವರ್‌ನಲ್ಲಿ ಯುದ್ದೋಪಾದಿಯಲ್ಲಿ ಆಡುವ ಎಂ ಎಸ್ ಧೋನಿ ವಿಶೇಷ ದಾಖಲೆ

"CSK ಗೆಲುವಿನ ಹಿಂದಿರುವ ಸೂತ್ರಧಾರ ಧೋನಿಯವರು.. ಅವರಿಗೆ ಆಟವನ್ನು ಹೇಗೆ ಆಡಬೇಕು ಎನ್ನುವುದು ತುಂಬಾ ಚೆನ್ನಾಗಿ ಗೊತ್ತು.. ಅಲ್ಲದೇ ಅವರು ತಮ್ಮ ತಂಡದವರಿಗೂ ಅದನ್ನು ಹೇಳಿಕೊಡುತ್ತಾರೆ.. ಅದೇ ರೀತಿ ಈ ಪಂದ್ಯದಲ್ಲಿ ಚೆನ್ನೈ ತಂಡ ಯೋಜನೆ ಪ್ರಕಾರ ಆಡಿದೆ.. ನಾವು ಈ ಭಾರೀ ಬೃಹತ್‌ ಗುರಿಯನ್ನು ಬೆನ್ನಟ್ಟಿ ಆಕ್ರಮಣಕಾರಿ ಆಟ ಆರಂಭಿಸಿದವು.. ಆದರೆ ಪತಿರಾನ್‌ ಸತತ ವಿಕೆಟ್‌ ಪಡೆದಿದ್ದರಿಂದ ನಾವು ಅದೇ ಆಟವನ್ನು ಮುಂದುವರೆಸಿಕೊಳ್ಳಲು ಸಾಧ್ಯವಾಗಲಿಲ್ಲ.. ಈ ಸೋಲಿನಿಂದ ಪಾಠ ಕಲಿತು ಮುಂದಿನ ಪಂದ್ಯಕ್ಕೆ ಸಿದ್ಧರಾಗುತ್ತೇವೆ" ಎಂದು ಮುಂಬೈ ತಂಡದ ನಾಯಕ ಹಾರ್ದಿಕ್‌ ಪಾಂಡ್ಯ ಹೇಳಿದ್ದಾರೆ.. 

ಇದನ್ನೂ ಓದಿ-Virat Kohli: ಜೈಪುರದಲ್ಲಿ ಅನಾವರಣಗೊಳ್ಳಲಿದೆ ʼಕಿಂಗ್‌ ಕೊಹ್ಲಿʼ ಪ್ರತಿಮೆ! ಫಸ್ಟ್ ಲುಕ್ ಹೇಗಿದೆ ನೀವೇ ನೋಡಿ!!

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಸಿಎಸ್ ಕೆ 20 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 206 ರನ್ ಗಳಿಸಿತು. ಈ ವೇಳೆ ಆರಂಭಿಕರಾಗಿ ಬಂದ ರಹಾನೆ ವಿಫಲರಾದರು. ಮತ್ತೋರ್ವ ಆರಂಭಿಕ ಆಟಗಾರ ರಚಿನ್ ರವೀಂದ್ರ 21 ರನ್ ಗಳಿಸಿ ಉತ್ತಮ ಪ್ರದರ್ಶನ ತೋರಲಿಲ್ಲ. ನಾಯಕ ರುತುರಾಜ್ ಗಾಯಕ್ವಾಡ್ 40 ಎಸೆತಗಳಲ್ಲಿ 5 ಬೌಂಡರಿ ಹಾಗೂ 5 ಸಿಕ್ಸರ್ ನೆರವಿನಿಂದ 69 ರನ್ ಗಳಿಸಿದರು. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಶಿವಂ ದುಬೆ ಕೂಡ ಅರ್ಧಶತಕ ಸಿಡಿಸಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News