IND vs AUS: ಟೀಂ ಇಂಡಿಯಾದಲ್ಲಿ ಭಾರೀ ಬದಲಾವಣೆ: ಟೆಸ್ಟ್ ಸರಣಿಗೆ ಎಂಟ್ರಿ ಕೊಟ್ಟ ಈ ಮಾರಕ ಬೌಲರ್!

India vs Australia 3rd Test: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸರಣಿಯ ಎರಡನೇ ಟೆಸ್ಟ್ ಪಂದ್ಯ ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಿತು. ಈ ಪಂದ್ಯಕ್ಕೂ ಮುನ್ನವೇ ಬಿಸಿಸಿಐ 31ರ ಹರೆಯದ ವೇಗದ ಬೌಲರ್ ಜಯದೇವ್ ಉನದ್ಕತ್ ಅವರನ್ನು ತಂಡದಿಂದ ಬಿಡುಗಡೆ ಮಾಡಲು ನಿರ್ಧರಿಸಿತ್ತು. ರಣಜಿ ಟ್ರೋಫಿ ಫೈನಲ್‌ನಲ್ಲಿ ಸೌರಾಷ್ಟ್ರ ಪರ ಆಡಲು ಜಯದೇವ್ ಬಿಡುಗಡೆಯಾಗಿದ್ದರು. ಜಯದೇವ್ ಉನದ್ಕತ್ ಈಗ ಮುಂದಿನ ಎರಡು ಪಂದ್ಯಗಳಿಗೆ ತಂಡದಲ್ಲಿ ಸೇರ್ಪಡೆಗೊಂಡಿದ್ದಾರೆ.

Written by - Bhavishya Shetty | Last Updated : Feb 20, 2023, 04:09 PM IST
    • ಟೆಸ್ಟ್ ಸರಣಿಯ ಕೊನೆಯ ಎರಡು ಪಂದ್ಯಗಳು ಟೀಮ್ ಇಂಡಿಯಾಕ್ಕೆ ಬಹಳ ಮಹತ್ವದ್ದಾಗಿವೆ
    • ಫೈನಲ್‌ಗೆ ಲಗ್ಗೆ ಇಡಲು ಕೊನೆಯ ಎರಡು ಪಂದ್ಯಗಳಲ್ಲಿ ಒಂದನ್ನಾದರೂ ಗೆಲ್ಲಲೇಬೇಕು
    • ಮುಂದಿನ ಎರಡು ಪಂದ್ಯಗಳಿಗೆ ಭಾರತೀಯ ಆಯ್ಕೆಗಾರರು ಟೀಂ ಇಂಡಿಯಾವನ್ನು ಕೂಡ ಘೋಷಿಸಿದ್ದಾರೆ
IND vs AUS: ಟೀಂ ಇಂಡಿಯಾದಲ್ಲಿ ಭಾರೀ ಬದಲಾವಣೆ: ಟೆಸ್ಟ್ ಸರಣಿಗೆ ಎಂಟ್ರಿ ಕೊಟ್ಟ ಈ ಮಾರಕ ಬೌಲರ್!  title=
Jaydev Unadkat

India vs Australia 3rd Test: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂತಿಮ ಪಂದ್ಯವನ್ನು ನೋಡುವುದಾದರೆ, ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಕೊನೆಯ ಎರಡು ಪಂದ್ಯಗಳು ಟೀಮ್ ಇಂಡಿಯಾಕ್ಕೆ ಬಹಳ ಮಹತ್ವದ್ದಾಗಿವೆ. ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಫೈನಲ್‌ಗೆ ಲಗ್ಗೆ ಇಡಲು ಕೊನೆಯ ಎರಡು ಪಂದ್ಯಗಳಲ್ಲಿ ಒಂದನ್ನಾದರೂ ಗೆಲ್ಲಲೇಬೇಕು. ಇನ್ನು ಮುಂದಿನ ಎರಡು ಪಂದ್ಯಗಳಿಗೆ ಭಾರತೀಯ ಆಯ್ಕೆಗಾರರು ಟೀಂ ಇಂಡಿಯಾವನ್ನು ಕೂಡ ಘೋಷಿಸಿದ್ದಾರೆ. ಈ ತಂಡದಲ್ಲಿ ಮಾರಕ ಬೌಲರ್ ಕೂಡ ಇದ್ದಾರೆ.

ಇದನ್ನೂ ಓದಿ: KL Rahul : ರಾಹುಲ್ ಉಪನಾಯಕತ್ವ ಕಿತ್ತುಕೊಂಡ ಬಿಸಿಸಿಐ, ಈ ಸ್ಥಾನಕ್ಕೆ 3 ಆಟಗಾರರು ಸ್ಪರ್ಧಿಗಳು

ಟೀಂ ಇಂಡಿಯಾದಲ್ಲಿ ದೊಡ್ಡ ಬದಲಾವಣೆ:

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸರಣಿಯ ಎರಡನೇ ಟೆಸ್ಟ್ ಪಂದ್ಯ ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಿತು. ಈ ಪಂದ್ಯಕ್ಕೂ ಮುನ್ನವೇ ಬಿಸಿಸಿಐ 31ರ ಹರೆಯದ ವೇಗದ ಬೌಲರ್ ಜಯದೇವ್ ಉನದ್ಕತ್ ಅವರನ್ನು ತಂಡದಿಂದ ಬಿಡುಗಡೆ ಮಾಡಲು ನಿರ್ಧರಿಸಿತ್ತು. ರಣಜಿ ಟ್ರೋಫಿ ಫೈನಲ್‌ನಲ್ಲಿ ಸೌರಾಷ್ಟ್ರ ಪರ ಆಡಲು ಜಯದೇವ್ ಬಿಡುಗಡೆಯಾಗಿದ್ದರು. ಜಯದೇವ್ ಉನದ್ಕತ್ ಈಗ ಮುಂದಿನ ಎರಡು ಪಂದ್ಯಗಳಿಗೆ ತಂಡದಲ್ಲಿ ಸೇರ್ಪಡೆಗೊಂಡಿದ್ದಾರೆ.

ಬಾಂಗ್ಲಾದೇಶ ಪ್ರವಾಸದಲ್ಲಿದ್ದ ಭಾರತ ಟೆಸ್ಟ್ ತಂಡದಲ್ಲಿ ಜಯದೇವ್ ಉನದ್ಕತ್ ಸ್ಥಾನ ಪಡೆದಿದ್ದರು. ಈ ಸರಣಿಯಲ್ಲಿ ಅವರು ಪಂದ್ಯ ಪ್ಲೇಯಿಂಗ್ ಇಲೆವೆನ್ ರಲ್ಲೂ ಅವಕಾಶವನ್ನೂ ಪಡೆದರು. ಬಾಂಗ್ಲಾದೇಶ ವಿರುದ್ಧದ ಸರಣಿಯ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಜಯದೇವ್ ಉನದ್ಕತ್ 50 ರನ್‌ಗಳಿಗೆ 2 ವಿಕೆಟ್ ಪಡೆದರೆ, ಎರಡನೇ ಇನ್ನಿಂಗ್ಸ್‌ನಲ್ಲಿ ಒಂದು ವಿಕೆಟ್ ಪಡೆದರು. ಇದಕ್ಕೂ ಮುನ್ನ 2010ರಲ್ಲಿ ಸೆಂಚುರಿಯನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಪರ ಟೆಸ್ಟ್ ಪಂದ್ಯ ಆಡಿದ್ದರು.

ರಣಜಿ ಟ್ರೋಫಿಯಲ್ಲೂ ಇತಿಹಾಸ ಸೃಷ್ಟಿ:

ಜಯದೇವ್ ಉನದ್ಕತ್ ಅವರು ಬಾಂಗ್ಲಾದೇಶ ಪ್ರವಾಸದಿಂದ ಹಿಂದಿರುಗಿದ ತಕ್ಷಣ ರಣಜಿ ಟ್ರೋಫಿಯಲ್ಲಿ ಸೌರಾಷ್ಟ್ರ ತಂಡವನ್ನು ಸೇರಿಕೊಂಡರು. ಬಳಿಕ ದೆಹಲಿ ವಿರುದ್ಧ ಆಡಿದರು. ಈ ಪಂದ್ಯದಲ್ಲಿ ಜಯದೇವ್ ಉನದ್ಕತ್ ಮೊದಲ ಓವರ್ ನಲ್ಲೇ ಹ್ಯಾಟ್ರಿಕ್ ಸಾಧನೆ ಮಾಡಿ ಇತಿಹಾಸ ನಿರ್ಮಿಸಿದ್ದರು. ರಣಜಿ ಟ್ರೋಫಿ ಪಂದ್ಯವೊಂದರಲ್ಲಿ ಮೊದಲ ಓವರ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಮೊದಲ ಬೌಲರ್ ಇವರು. ಜಯದೇವ್ ಉನದ್ಕತ್ ಭಾರತ ಪರ 7 ಏಕದಿನ ಪಂದ್ಯಗಳಲ್ಲಿ 8 ವಿಕೆಟ್ ಹಾಗೂ 10 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 14 ವಿಕೆಟ್ ಪಡೆದಿದ್ದಾರೆ.

ಅಂತಿಮ ಪಂದ್ಯದಲ್ಲಿ ಪಂದ್ಯಶ್ರೇಷ್ಠ

ರಣಜಿ ಟ್ರೋಫಿ 2023 ರ ಅಂತಿಮ ಪಂದ್ಯವು ಬಂಗಾಳ ಮತ್ತು ಸೌರಾಷ್ಟ್ರ ತಂಡಗಳ ನಡುವೆ ನಡೆಯಿತು. ಈ ಪಂದ್ಯದಲ್ಲಿ ಎಡಗೈ ವೇಗದ ಬೌಲರ್ ಜಯದೇವ್ ಉನದ್ಕತ್ ಎರಡನೇ ಇನ್ನಿಂಗ್ಸ್‌ನಲ್ಲಿ 85 ರನ್‌ಗಳಿಗೆ ಆರು ವಿಕೆಟ್‌ಗಳನ್ನು ಕಬಳಿಸಿದರು. ಸೌರಾಷ್ಟ್ರ ರಣಜಿ ಟ್ರೋಫಿ ಫೈನಲ್‌ನ ನಾಲ್ಕನೇ ದಿನದಂದು ಬಂಗಾಳವನ್ನು ಒಂಬತ್ತು ವಿಕೆಟ್‌ಗಳಿಂದ ಸೋಲಿಸಲು ಸಹಾಯ ಮಾಡಿದರು. ಪಂದ್ಯದಲ್ಲಿ ಒಟ್ಟು ಒಂಬತ್ತು ವಿಕೆಟ್ ಕಬಳಿಸಿದ ಸೌರಾಷ್ಟ್ರ ನಾಯಕ ಜಯದೇವ್ ಉನದ್ಕತ್ ಪಂದ್ಯ ಶ್ರೇಷ್ಠರಾಗಿ ಆಯ್ಕೆಯಾದರು. ಅವರ ಅದ್ಭುತ ಆಟದ ಆಧಾರದ ಮೇಲೆ, ಅವರು ತಮ್ಮ ತಂಡವನ್ನು ಎರಡನೇ ಬಾರಿಗೆ ರಣಜಿ ಟ್ರೋಫಿ ಚಾಂಪಿಯನ್ ಮಾಡಿದ್ದಾರೆ.

ಇದನ್ನೂ ಓದಿ: IND vs AUS: ಜಡೇಜಾ ಅಲ್ಲ, ಈ ಆಟಗಾರ ನಿಜವಾದ 'ಮ್ಯಾನ್ ಆಫ್ ದಿ ಮ್ಯಾಚ್'.!

ಕೊನೆಯ ಎರಡು ಪಂದ್ಯಗಳಿಗೆ ಟೀಂ ಇಂಡಿಯಾ:

ರೋಹಿತ್ ಶರ್ಮಾ (ನಾಯಕ), ಲೋಕೇಶ್ ರಾಹುಲ್, ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಶ್ರೇಯಸ್ ಐ. , ಸೂರ್ಯಕುಮಾರ್ ಯಾದವ್, ಉಮೇಶ್ ಯಾದವ್ ಮತ್ತು ಜಯದೇವ್ ಉನದ್ಕತ್.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News