ಧೋನಿ, ಯುವಿ, ಅಫ್ರಿದಿ ಅಲ್ಲ... ಈ ಆಟಗಾರನೇ ಕ್ರಿಕೆಟ್ ಇತಿಹಾಸದಲ್ಲಿ ಅತಿ ಉದ್ದದ ಸಿಕ್ಸರ್ ಬಾರಿಸಿರೋದು! ಅದೂ 100 ವರ್ಷಗಳ ಹಿಂದೆ...

Longest Six Record in Cricket History: ಕ್ರಿಕೆಟ್ ಇತಿಹಾಸದಲ್ಲಿ ಅತಿ ಉದ್ದದ ಸಿಕ್ಸರ್ ಅನ್ನು 19 ನೇ ಶತಮಾನದಲ್ಲಿ ಆಲ್ಬರ್ಟ್ ಟ್ರಾಟ್ ಎಂಬವರು ಬಾರಿಸಿದ್ದರು. ಅಂದು ಅವರು ಬಾರಿಸಿದ ಸಿಕ್ಸರ್, ಲಾರ್ಡ್ಸ್ ಕ್ರಿಕೆಟ್ ಮೈದಾನದ ಪೆವಿಲಿಯನ್ ದಾಟಿ ಹೊರಹೋಗಿತ್ತು.

Written by - Bhavishya Shetty | Last Updated : Aug 4, 2024, 04:20 PM IST
    • ಕ್ರಿಕೆಟ್‌ʼನಲ್ಲಿ ಅತಿ ಉದ್ದದ ಸಿಕ್ಸರ್‌ ಬಾರಿಸಿ ವಿಶ್ವದಾಖಲೆ ಮಾಡಲಾಗಿತ್ತು,
    • ಇಲ್ಲಿಯವರೆಗೆ ಯಾರೂ ಈ ದಾಖಲೆಯ ಸಮೀಪಕ್ಕೆ ಬರಲು ಸಾಧ್ಯವಾಗಿಲ್ಲ.
    • ಆಲ್ಬರ್ಟ್ ಟ್ರಾಟ್ 19 ನೇ ಶತಮಾನದ ಅತ್ಯಂತ ಅದ್ಭುತ ಬ್ಯಾಟ್ಸ್‌ಮನ್‌ʼಗಳಲ್ಲಿ ಒಬ್ಬರು
ಧೋನಿ, ಯುವಿ, ಅಫ್ರಿದಿ ಅಲ್ಲ... ಈ ಆಟಗಾರನೇ ಕ್ರಿಕೆಟ್ ಇತಿಹಾಸದಲ್ಲಿ ಅತಿ ಉದ್ದದ ಸಿಕ್ಸರ್ ಬಾರಿಸಿರೋದು! ಅದೂ 100 ವರ್ಷಗಳ ಹಿಂದೆ... title=
File Photo

Longest Six Record in Cricket History: ಕ್ರಿಕೆಟ್ʼನಲ್ಲಿ ಅತಿ ಉದ್ದದ ಸಿಕ್ಸರ್ ಬಾರಿಸಿದ ದಾಖಲೆ ಶಾಹಿದ್ ಅಫ್ರಿದಿ ಹೆಸರಲ್ಲಾಗಲೀ, ಮಹೇಂದ್ರ ಸಿಂಗ್ ಧೋನಿ ಮತ್ತು ಯುವರಾಜ್ ಸಿಂಗ್ ಹೆಸರಲ್ಲಾಗಲೀ ಇಲ್ಲ. 100 ವರ್ಷಗಳ ಹಿಂದೆ, ಕ್ರಿಕೆಟ್‌ʼನಲ್ಲಿ ಅತಿ ಉದ್ದದ ಸಿಕ್ಸರ್‌ ಬಾರಿಸಿ ವಿಶ್ವದಾಖಲೆ ಮಾಡಲಾಗಿತ್ತು, ಆದರೆ ಇಲ್ಲಿಯವರೆಗೆ ಯಾರೂ ಈ ದಾಖಲೆಯ ಸಮೀಪಕ್ಕೆ ಬರಲು ಸಾಧ್ಯವಾಗಿಲ್ಲ.

ಇದನ್ನೂ ಓದಿ: ಒಲಂಪಿಕ್ಸ್ ನಲ್ಲಿ ಪೆನಾಲ್ಟಿ ಶೂಟ್ ನಲ್ಲಿ ಬ್ರಿಟನ್ ಸೋಲಿಸಿ ಸೆಮಿಫೈನಲ್ ಗೆ ಲಗ್ಗೆ ಚೆಕ್ ದೇ ಇಂಡಿಯಾ

ಕ್ರಿಕೆಟ್ ಇತಿಹಾಸದಲ್ಲಿ ಅತಿ ಉದ್ದದ ಸಿಕ್ಸರ್ ಅನ್ನು 19 ನೇ ಶತಮಾನದಲ್ಲಿ ಆಲ್ಬರ್ಟ್ ಟ್ರಾಟ್ ಎಂಬವರು ಬಾರಿಸಿದ್ದರು. ಅಂದು ಅವರು ಬಾರಿಸಿದ ಸಿಕ್ಸರ್, ಲಾರ್ಡ್ಸ್ ಕ್ರಿಕೆಟ್ ಮೈದಾನದ ಪೆವಿಲಿಯನ್ ದಾಟಿ ಹೊರಹೋಗಿತ್ತು. ಆ ಸಿಕ್ಸ್‌ʼನ ಉದ್ದ 164 ಮೀಟರ್. ಇದು ಕ್ರಿಕೆಟ್ ಇತಿಹಾಸದಲ್ಲಿಯೇ ಅತಿ ಉದ್ದದ ಸಿಕ್ಸರ್ ಆಗಿದೆ. ಇಂಗ್ಲೆಂಡ್‌ʼನ ಮೇರಿಲ್‌ ಬೋನ್ ಕ್ರಿಕೆಟ್ ಕ್ಲಬ್‌ ಪರ ಆಡುವಾಗ ಆಲ್ಬರ್ಟ್ ಆಸ್ಟ್ರೇಲಿಯಾ ವಿರುದ್ಧ ಈ ಸಿಕ್ಸರ್‌ ಹೊಡೆದಿದ್ದರು.

ಆಲ್ಬರ್ಟ್ ಟ್ರಾಟ್ 19 ನೇ ಶತಮಾನದ ಅತ್ಯಂತ ಅದ್ಭುತ ಬ್ಯಾಟ್ಸ್‌ಮನ್‌ʼಗಳಲ್ಲಿ ಒಬ್ಬರು. ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಎರಡೂ ತಂಡಗಳ ಪರ ಕ್ರಿಕೆಟ್ ಆಡಿದ್ದಾರೆ. ಆದರೆ ಈ ಆಟಗಾರ 1910 ರಲ್ಲಿ ಅಂದರೆ ತನ್ನ 41 ನೇ ವಯಸ್ಸಿನಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಹೇಳಲಾಗುತ್ತದೆ.

ಶಾಹಿದ್ ಅಫ್ರಿದಿ:
ಪಾಕಿಸ್ತಾನದ ಮಾಜಿ ಸ್ಫೋಟಕ ಆಲ್‌ ರೌಂಡರ್ ಶಾಹಿದ್ ಅಫ್ರಿದಿ ತಮ್ಮ ವೃತ್ತಿಜೀವನದುದ್ದಕ್ಕೂ ಅನೇಕ ಸ್ಫೋಟಕ ಇನ್ನಿಂಗ್ಸ್‌ʼಳನ್ನು ಆಡಿದ್ದಾರೆ. ಇನ್ನು ಅಫ್ರಿದಿ 2013 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 158 ಮೀಟರ್ ಉದ್ದದ ಸಿಕ್ಸರ್ ಬಾರಿಸಿದ್ದರು.

ಇದನ್ನೂ ಓದಿ: ಕ್ರಿಕೆಟ್‌ ಇತಿಹಾಸದಲ್ಲಿ ಈ ವಿಶ್ವ ದಾಖಲೆಗಳನ್ನು ಮುರಿಯುವುದು ಅಸಾಧ್ಯ!

ಈ ಪಟ್ಟಿಯಲ್ಲಿದೆ ಇಬ್ಬರು ಭಾರತೀಯರ ಹೆಸರು:
ಉದ್ದದ ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಯುವರಾಜ್ ಸಿಂಗ್ ಮತ್ತು ಮಹೇಂದ್ರ ಸಿಂಗ್ ಧೋನಿ ಹೆಸರು ಕೂಡ ಇದೆ. ಯುವರಾಜ್ ಸಿಂಗ್ 119 ಮೀಟರ್ ಸಿಕ್ಸರ್ ಬಾರಿಸಿದ್ದಾರೆ. ಟಿ20ಯಲ್ಲಿ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿದ ದಾಖಲೆಯೂ ಯುವಿ ಹೆಸರಿನಲ್ಲಿದೆ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಧೋನಿ 112 ಮೀಟರ್ ಉದ್ದದ ಸಿಕ್ಸರ್‌ ಬಾರಿಸಿದ್ದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News