ಕಾನ್ಪುರ: ಏಕದಿನ ಕ್ರಿಕೆಟ್ನಲ್ಲಿ ಕೇವಲ 194 ಇನ್ನಿಂಗ್ಸ್ಗಳಲ್ಲಿ ಅತಿವೇಗವಾಗಿ 9,000 ರನ್ ಪೂರೈಸುವ ಮೂಲಕ ಕೊಹ್ಲಿ ಮತ್ತೊಂದು ವಿಶ್ವ ದಾಖಲೆ ಸೃಷ್ಟಿಸಿದ್ದಾರೆ.
ಭಾನುವಾರ ಕಾನ್ಪುರದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 194 ಇನ್ನಿಂಗ್ಸ್ಗಳಲ್ಲಿ ಅತಿವೇಗವಾಗಿ 9,000 ರನ್ ಪೂರೈಸುವ ಮೂಲಕ, ಈ ಹಿಂದೆ 205 ಇನ್ನಿಂಗ್ಸ್ಗಳಲ್ಲಿ 9000 ರನ್ ಗಳಿಸಿ ಎಬಿ ಡಿವಿಲಿಯರ್ಸ್ ಬರೆದಿದ್ದ ದಾಖಲೆಯನ್ನು ಅಳಿಸಿಹಾಕಿದ್ದಾರೆ.
ಭಾರತದ ವಿರಾಟ್ ಕೊಹ್ಲಿ ಅವರು ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಹಿಂದಿರುಗಿದ್ದಾರೆ. ಹಿಂದೆ, ಎಬಿಡಿ ವಿಲಿಯರ್ಸ್ ಉನ್ನತ ಸ್ಥಾನದಲ್ಲಿದ್ದರು. ಇತ್ತೀಚಿನ ನ್ಯೂಜಿಲೆಂಡ್ ಸರಣಿಯ ಕೊಹ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಕೊಹ್ಲಿ ಸರಣಿಯಲ್ಲಿ 263 ರನ್ ಗಳಿಸಿದರು ಮತ್ತು 889 ರಾಂಕಿಂಗ್ ಪಾಯಿಂಟ್ಗಳನ್ನು ತಲುಪುವ ಮೂಲಕ ಅಗ್ರ ಸ್ಥಾನವನ್ನು ಗಳಿಸಿದರು. ಪ್ರಸ್ತುತ ರಾಂಕಿಂಗ್ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಪ್ರಥಮ ಸ್ಥಾನ, ರೋಹಿತ್ ಶರ್ಮಾ 7 ನೇ ಸ್ಥಾನ ಮತ್ತು ಧೋನಿ 11 ನೇ ಸ್ಥಾನದಲ್ಲಿದ್ದಾರೆ.
ರಾಂಕ್ | ಹೆಸರು | ದೇಶ | ಪಾಯಿಂಟ್ಸ್ |
1 | ವಿರಾಟ್ ಕೊಹ್ಲಿ | ಭಾರತ | 889 |
2 | ಡಿವಿಶರ್ಸ್ | ದಕ್ಷಿಣ ಆಫ್ರಿಕಾ | 872 |
3 | ಡೇವಿಡ್ ವಾರ್ನರ್ | ಆಸಿಸ್ | 865 |
4 | ಬಾಬರ್ ಅಝಾಮ್ | ಪಾಕ್ | 846 |
5 | ಕ್ವಿಂಟಾನ್ ಡೆ ಕೋಕ್ | ದಕ್ಷಿಣ ಆಫ್ರಿಕಾ | 808 |
6 | ಜೋ ರೂಟ್ | ಇಂಗ್ಲೆಂಡ್ | 802 |
7 | ರೋಹಿತ್ ಶರ್ಮಾ | ಭಾರತ | 799 |
8 | ಫಾಫ್ ಡು ಪ್ಲೆಸಿಸ್ | ದಕ್ಷಿಣ ಆಫ್ರಿಕಾ | 773 |
9 | ಹಮೀಶ್ ಆಮ್ಲಾ | ದಕ್ಷಿಣ ಆಫ್ರಿಕಾ | 766 |
10 | ಕೇನ್ ವಿಲಿಯಮ್ಸನ್ | ಕಿವಿಸ್ | 760 |
ಅಷ್ಟೇ ಅಲ್ಲದೆ ಕೊಹ್ಲಿ 9,000 ರನ್ ಪೂರೈಸಿದ ಆರನೇ ಭಾರತೀಯರಾಗಿದ್ದಾರೆ. ಇದಕ್ಕೂ ಮೊದಲು ಸಚಿನ್ ತಂಡುಲ್ಕರ್, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ, ಅಜರುದ್ದೀನ್ ಷಾ ಮತ್ತು ಮಹೇಂದ್ರ ಸಿಂಗ್ ಧೋನಿ ಈ ದಾಖಲೆ ಬರೆದಿದ್ದರು. ವಿಶ್ವದಲ್ಲಿ 19ನೇ ಆಟಗಾರ ಎನ್ನುವ ಕೀರ್ತಿಯೂ ಕೊಹ್ಲಿಯದಾಗಿದೆ. ಅಲ್ಲದೆ 2017 ರಲ್ಲಿ ವಿರಾಟ್ ಕೊಹ್ಲಿ 2 ಸಾವಿರ ರನ್ ಪೂರೈಸಿದ ಮೊದಲ ಆಟಗಾರ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ.