ನವದೆಹಲಿ: ಪ್ರಸ್ತುತ ನಡೆಯುತ್ತಿರುವ ಪ್ರವಾಸದ ಕೊನೆಯ ಪಂದ್ಯದಲ್ಲಿ ಶ್ರೀಲಂಕಾವನ್ನು ಆತಿಥ್ಯ ವಹಿಸಿದ ನಂತರ, ಭಾರತವು ಮೂರು ಟೆಸ್ಟ್ಗಳು, ಆರು ಏಕದಿನ ಪಂದ್ಯಗಳು ಹಾಗೂ ಮೂರು T20 ಪಂಧ್ಯಗಳಿಗೊಸ್ಕರ ದಕ್ಷಿಣ ಆಫ್ರಿಕಾಗೆ ಎರಡು ತಿಂಗಳ ಕ್ರಿಕೆಟ್ ಪ್ರವಾಸಕ್ಕಾಗಿ ತೆರಳುತ್ತಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ವಿರಾಟ್ ಕೊಹ್ಲಿ ನಿಗದಿತ ಸಮಯ ಕೊಡದೆ ವಿದೇಶ ಪ್ರವಾಸ ಹಮ್ಮಿಕೊಂಡಿರುವುದು "ಸರಿಯಾದ ಸಿದ್ಧತೆ" ಅಲ್ಲ ಎಂದು ಬಿಸಿಸಿಐ ವಿರುದ್ಧ ಗುಡುಗಿದ್ದಾರೆ.
ಶುಕ್ರವಾರದಿಂದ ನಾಗ್ಪುರದಲ್ಲಿ ಎರಡನೇ ಟೆಸ್ಟ್ನಲ್ಲಿ ಭಾರತವು ಶ್ರೀಲಂಕಾವಿರುದ್ದ ಜೊತೆ ಸೆಣೆಸಲಿದೆ. ಇದಕ್ಕೆ ಪೂರ್ವಭಾವಿಯಾಗಿ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ಕೋಹ್ಲಿಯು ತಂಡವು ಎರಡು ಸರಣಿಗಳ ನಡುವೆ ಕಡಿಮೆ ಸಮಯದ ಅಭಾವದ ಕುರಿತು ಅಸಮಧಾನ ವ್ಯಕ್ತಪಡಿಸಿದ್ದಾರೆ.ಈ ಶ್ರೀಲಂಕಾ ಸರಣಿ ಮುಗಿತ ತಕ್ಷಣ ಹಮ್ಮಿಕೊಂಡಿರುವ ಈ ಸರಣಿಗೆ ಯಾವುದೇ ರೀತಿಯ ಪೂರ್ವ ತಯಾರಿ ಇಲ್ಲದೆ ಇರುವುದು ಮತ್ತು ಇದರ ಕುರಿತಾಗಿ ಬಿಸಿಸಿಐ ಕೂಡ ತಲೆ ಕೆಡಸಿಕೊಳ್ಳದಿರುವುದಕ್ಕೆ ಕೊಹ್ಲಿ ಅವರು ಅಸಮಧಾನಗೊಂಡಿದ್ದಾರೆ.
ಪ್ರತಿಯೊಬ್ಬರೂ ಆಟದ ಫಲಿತಾಂಶ ಬಂದಾಗ ಆಟಗಾರರನ್ನು ಅಳೆಯಲು ಬರುತ್ತಾರೆ ಆದರೆ ಒಂದು ವಿದೇಶಿ ಪ್ರವಾಸವನ್ನು ಕೈಗೊಳ್ಳುವಾಗ ನಮಗೆ ಅದಕ್ಕೆ ಎಷ್ಟು ದಿನಗಳವರೆಗೆ ತಯಾರಿ ಸಮಯ ನೀಡಿದ್ದಾರೆ ಎನ್ನುವ ಅಂಶ ಬರುವುದಿಲ್ಲವೆಂದು ಬಿಸಿಸಿಐ ವಿರುದ್ದ ಗುಡಿಗಿದ್ದಾರೆ.
ಇನ್ನು ಕೊಹ್ಲಿ ಮುಂದುವರೆದು ಕ್ರಿಕೆಟ್ ನ್ಯಾಯಯುತ ಆಟವಾಗಬೇಕು, ಅಲ್ಲಿ ನಾವು ಬಯಸಿದ ರೀತಿಯಲ್ಲಿ ತಯಾರಾದರೆ ನಂತರ ಬರುವ ಟೀಕೆಗಳಿಗೆ ನಾವು ಅರ್ಹರಾಗಿರುತ್ತೇವೆ" ಎಂದು ಪತ್ರಿಕಾಗೋಷ್ಠಿಯಲ್ಲಿ ಬಿಸಿಸಿಐ ನ ವೇಳಾಪಟ್ಟಿಯ ಕುರಿತು ತಮ್ಮ ತೀವ್ರ ಅಸಮಧಾನವನ್ನು ಈ ಸಂಧರ್ಭದಲ್ಲಿ ಹೊರಹಾಕಿದ್ದಾರೆ.