ಆಸ್ಟ್ರೇಲಿಯಾ ವಿರುದ್ಧದ ಸರಣಿಗೂ ಮುನ್ನ ಅನುಭವಿ ಬ್ಯಾಟ್ಸ್ಮನ್ ಕೆಎಲ್ ರಾಹುಲ್ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಧ್ರುವ್ ಜುರೆಲ್ಗಿಂತ ಅವರಿಗೆ ಆದ್ಯತೆ ನೀಡುವ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಲಾಯಿತು. ರಾಹುಲ್ ಸರಣಿಗೂ ಮುನ್ನ ಪ್ರಮುಖ ಓಪನರ್ ಆಗಿರಲಿಲ್ಲ. ಅವರನ್ನು ಬ್ಯಾಕಪ್ ಆಗಿ ನೋದಳಗಿತ್ತು ಎನ್ನುವುದು ಕೂಡಾ ಸುಳ್ಳಲ್ಲ. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ, ಅವರು ಪರ್ತ್ ಟೆಸ್ಟ್ನ ಎರಡನೇ ಇನ್ನಿಂಗ್ಸ್ನಲ್ಲಿ 77 ರನ್ ಗಳಿಸುವ ಮೂಲಕ ಎಲ್ಲಾ ಟೀಕೆಗಳಿಗೆ ಉತ್ತರ ಕೊಟ್ಟರು. ಇಲ್ಲಿಂದ ರಾಹುಲ್ ಸ್ಥಾನ ಖಚಿತವಾಯಿತು. ಟೀಕಾಕಾರರಿಗೆ ತಕ್ಕ ಉತ್ತರ ನೀಡಿದ ರಾಹುಲ್ ಈ ಸರಣಿಯಲ್ಲಿ ಇಲ್ಲಿಯವರೆಗೆ ಅದ್ಭುತ ಪ್ರದರ್ಶನ ನೀಡಿದ್ದಾರೆ.ಒಂದೆಡೆ ಟೀಂ ಇಂಡಿಯಾದ ಅನುಭವಿ ಬ್ಯಾಟ್ಸ್ ಮನ್ ಗಳು ಕ್ರೀಸ್ ನಲ್ಲಿ ಹೆಚ್ಚು ಹೊತ್ತು ಉಳಿಯಲು ವಿಫಲರಾಗುತ್ತಿದ್ದರೆ, ರಾಹುಲ್ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ.
84 ರನ್ ಗಳಿಸಿದ ರಾಹುಲ್ :
ರಾಹುಲ್ ಬ್ರಿಸ್ಬೇನ್ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ 84 ರನ್ ಗಳಿಸುವ ಮೂಲಕ ಟೀಂ ಇಂಡಿಯಾದ ಗೌರವವನ್ನು ಉಳಿಸಿದರು.ಓಪನಿಂಗ್ ನಲ್ಲಿ ಬಂದಿದ್ದ ರಾಹುಲ್ ಆರನೇ ಬ್ಯಾಟ್ಸ್ಮನ್ ಆಗಿ ಔಟಾದರು. ಇದಕ್ಕೂ ಮುನ್ನ ಪೆವಿಲಿಯನ್ಗೆ ಮರಳಿದ ನಾಲ್ವರು ಆಟಗಾರರಲ್ಲಿ ಯಾರೂ ಎರಡಂಕಿ ದಾಟಿರಲಿಲ್ಲ. ನಾಯಕ ರೋಹಿತ್ ಶರ್ಮಾಕೂಡಾ 10 ರನ್ ಗಳಿಸಲು ಮಾತ್ರ ಶಕ್ತರಾದರು. ಒಂದೆಡೆ ಸತತವಾಗಿ ವಿಕೆಟ್ಗಳು ಉರುಳುತ್ತಿದ್ದರೆ, ಮತ್ತೊಂದೆಡೆ ರಾಹುಲ್ ಕ್ರೀಸ್ ನಲ್ಲಿ ಏಕಾಂಗಿ ಹೋರಾಟ ನಡೆಸುತ್ರುವಂತೆ ಕಂಡು ಬಂತು.
ಇದನ್ನೂ ಓದಿ : "ಈ ಪ್ಲೇಯರ್ ಮುಂಬೈ ಇಂಡಿಯನ್ಸ್ ಸೇರಿರೋದು ನಮ್ಮ ಹೆಮ್ಮೆ"- ನೀತಾ ಅಂಬಾನಿ ಹೇಳಿದ್ದು ಯಾರ ಬಗ್ಗೆ?
ಪ್ರಸಕ್ತ ಟೆಸ್ಟ್ ಸರಣಿಯಲ್ಲಿ ಭಾರತದ ಪರ 200 ರನ್ ಪೂರೈಸಿದ ಮೊದಲ ಬ್ಯಾಟ್ಸ್ಮನ್ ರಾಹುಲ್. ಪ್ರಸಕ್ತ ಸರಣಿಯಲ್ಲಿ ಅವರು 26, 77, 37, 7 ಮತ್ತು 84 ರನ್ಗಳ ಇನ್ನಿಂಗ್ಸ್ಗಳನ್ನು ಆಡಿದ್ದಾರೆ. ಇರ್ಫಾನ್ ಪಠಾಣ್, ಚೇತೇಶ್ವರ ಪೂಜಾರ ಮತ್ತು ಸಂಜಯ್ ಬಂಗಾರ್ ಅವರು ಗಬ್ಬಾ ಟೆಸ್ಟ್ನಲ್ಲಿ ರಾಹುಲ್ ಅವರ ಅದ್ಭುತ ಇನ್ನಿಂಗ್ಸ್ ಕಂಡು ಕೊಂಡಾಡಿದ್ದಾರೆ.
ರಾಹುಲ್ ಮಹತ್ವ ತಿಳಿಸಿದ ಪಠಾಣ್ :
ಇನ್ನಿಂಗ್ಸ್ನಲ್ಲಿ 8 ಬೌಂಡರಿಗಳನ್ನು ಬಾರಿಸುವ ಮೂಲಕ ರಾಹುಲ್ 138 ಎಸೆತಗಳಲ್ಲಿ 84 ರನ್ ಗಳಿಸಿದ್ದಾರೆ. ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಗಳಿಸಿದ 3212 ರನ್ಗಳಲ್ಲಿ, ರಾಹುಲ್ ಭಾರತದಲ್ಲಿ ಗಳಿಸಿರುವುದು ಕೇವಲ 1149 ರನ್. ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಪಠಾಣ್, ವಿದೇಶ ನೆಲದಲ್ಲಿ ರಾಹುಲ್ ಪ್ರಾಮುಖ್ಯತೆಯನ್ನು ವಿವರಿಸಿದ್ದಾರೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ರಾಹುಲ್ ಗೇಮ್ ಪ್ಲಾನ್ ಹೊಗಳಿದ ಬಂಗಾರ್ :
ಬಂಗಾರ್ ಅವರು ಗಬ್ಬಾದಲ್ಲಿ ರಾಹುಲ್ ಅವರ ಆಟದ ರೀತಿಯನ್ನು ಹಾಡಿ ಹೊಗಳಿದ್ದಾರೆ. ಅವರು ಎರಡೂ ತಂಡಗಳ ಬ್ಯಾಟ್ಸ್ಮನ್ಗಳ ನಡುವೆ ಎದ್ದು ಕಾಣುತ್ತಾರೆ ಎಂದು ಹೇಳಿದ್ದಾರೆ. ಇತರ ಭಾರತೀಯ ಬ್ಯಾಟ್ಸ್ಮನ್ಗಳು ಕೂಡಾ ತಮ್ಮ ಆಟದಲ್ಲಿ ರಾಹುಲ್ ಅವರ ಗುಣಗಳನ್ನು ಸೇರಿಸಲು ಪ್ರಯತ್ನಿಸಬೇಕು ಎಂದು ಬಂಗಾರ್ ಹೇಳಿದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.