Athiya Shetty KL Rahul Wedding : ಅಥಿಯಾ ಕೈಯಲ್ಲಿ 'ಕೆಎಲ್' ಹೆಸರಿನಲ್ಲಿ ಮೆಹಂದಿ : ನಾಳೆ ಕನ್ನಡಿಗನ ಅದ್ದೂರಿ ಮದುವೆ!

Athiya KL Pre Wedding Festivities : ಕನ್ನಡಿಗ, ಟೀಂ ಇಂಡಿಯಾ ಸ್ಟಾರ್ ಆಟಗಾರ ಕೆಎಲ್ ರಾಹುಲ್ ಮತ್ತು ಬಾಲಿವುಡ್ ಸ್ಟಾರ ನಟನ ಮಗಳು ಅಥಿಯಾ ಶೆಟ್ಟಿ ಬಹಳ ದಿನಗಳಿಂದ ಪರಸ್ಪರ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿ ಇವರಿಬ್ಬರ ಮದುವೆಯಲ್ಲಿ ಅಂತ್ಯಕಾಣುತ್ತಿದೆ.

Written by - Channabasava A Kashinakunti | Last Updated : Jan 22, 2023, 08:21 PM IST
  • ಅಥಿಯಾ ಶೆಟ್ಟಿ ಹಾಗೂ ಕ್ರಿಕೆಟಿಗ ಕೆಎಲ್ ರಾಹುಲ್ ವಿವಾಹ
  • ಅಥಿಯಾ ಕೈಯಲ್ಲಿ 'ಕೆಎಲ್' ಹೆಸರಿನಲ್ಲಿ ಮೆಹೆಂದಿ
  • ಇಂದು ಸಂಜೆ ಸಂಗೀತ ಇರುತ್ತದೆ, ನಾಳೆ ಅದ್ದೂರಿ ಮದುವೆ
Athiya Shetty KL Rahul Wedding : ಅಥಿಯಾ ಕೈಯಲ್ಲಿ 'ಕೆಎಲ್' ಹೆಸರಿನಲ್ಲಿ ಮೆಹಂದಿ : ನಾಳೆ ಕನ್ನಡಿಗನ ಅದ್ದೂರಿ ಮದುವೆ! title=

Athiya KL Pre Wedding Festivities : ಕನ್ನಡಿಗ, ಟೀಂ ಇಂಡಿಯಾ ಸ್ಟಾರ್ ಆಟಗಾರ ಕೆಎಲ್ ರಾಹುಲ್ ಮತ್ತು ಬಾಲಿವುಡ್ ಸ್ಟಾರ ನಟನ ಮಗಳು ಅಥಿಯಾ ಶೆಟ್ಟಿ ಬಹಳ ದಿನಗಳಿಂದ ಪರಸ್ಪರ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿ ಇವರಿಬ್ಬರ ಮದುವೆಯಲ್ಲಿ ಅಂತ್ಯಕಾಣುತ್ತಿದೆ. ಮುಂಬೈಯನ ನಟ ಸುನಿಲ್ ಶೆಟ್ಟಿ ಅವರ ಖಂಡಾಲ ಫಾರ್ಮ್‌ಹೌಸ್‌ನಲ್ಲಿ ಮಗಳು ಅಥಿಯಾ ಮತ್ತು ಕೆಎಲ್ ರಾಹುಲ್ ನಾಳೆ ಸಂಜೆ ಅದ್ದೂರಿಯಾಗಿ ಅಸೆಮಣೆ ಏರಲಿದ್ದಾರೆ.  

ಸುನೀಲ್ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ ಹಾಗೂ ಕ್ರಿಕೆಟಿಗ ಕೆಎಲ್ ರಾಹುಲ್ ವಿವಾಹ ಪೂರ್ವ ಕಾರ್ಯಕ್ರಮಗಳು ಇಂದು ನಡೆಯುತ್ತಿದ್ದು, ಅವರಿಗಾಗಿ ಯಾವೆಲ್ಲ ಸಿದ್ಧತೆಗಳು ನಡೆಯುತ್ತಿವೆ ಎಂಬುದು ಮಾಧ್ಯಮಗಳ ವರದಿಯಿಂದ ತಿಳಿದು ಬಂದಿದೆ. ನಾಳೆ ಅಂದರೆ ಜನವರಿ 23, 2023 ರಂದು ತಮ್ಮ 'ಮಕ್ಕಳು' ಮದುವೆಯಾಗುತ್ತಿದ್ದಾರೆ, ನಂತರ ಅವರನ್ನು ಮಾಧ್ಯಮದ ಮುಂದೆ ತರುತ್ತೇನೆ ಎಂದು ಸುನೀಲ್ ಶೆಟ್ಟಿ ಅವರು ಖಚಿತಪಡಿಸಿದ್ದಾರೆ.

ಇದನ್ನೂ ಓದಿ : IND vs NZ : ಮೂರನೇ ಏಕದಿನ ಪಂದ್ಯಕ್ಕೆ ಟೀಂ ಇಂಡಿಯಾ ಪ್ಲೇಯಿಂಗ್ 11 ಹೀಗಿದೆ!

ಅಥಿಯಾ ಕೈಯಲ್ಲಿ 'ಕೆಎಲ್' ಹೆಸರಿನಲ್ಲಿ ಮೆಹೆಂದಿ

ಮಾಧ್ಯಮ ವರದಿಗಳ ಪ್ರಕಾರ, ಇಂದು ಮಧ್ಯಾಹ್ನ ಅಥಿಯಾ ಶೆಟ್ಟಿ ಮೆಹಂದಿ ಕಾರ್ಯಕ್ರಮ ಮಾಡಲಾಗಿದ್ದು, ಅವರು ತಮ್ಮ ಭಾವಿ ಪತಿ ಕೆಎಲ್ ರಾಹುಲ್ ಅವರ ಹೆಸರನ್ನು ತಮ್ಮ ಕೈಯಲ್ಲಿ 
ಮೆಹಂದಿಯಲ್ಲಿ 'ಕೆಎಲ್‌' ಎಂದು ಬರೆದುಕೊಂಡಿದ್ದಾರೆ. ಇಂದು ಅಥಿಯಾ ಮತ್ತು ಕೆಎಲ್‌ನ ಹರಿಶಿನ ಕಾರ್ಯಕ್ರಮ ನಡೆದಿದೆ ಎಂದು ಹೇಳಲಾಗುತ್ತಿದೆ; ರಾತ್ರಿ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ನಾಳೆ ಅದ್ದೂರಿ ಮದುವೆ ಕಾರ್ಯಕ್ರಮ ನಡೆಯಲಿದೆ.

 
 
 
 

 
 
 
 
 
 
 
 
 
 
 

A post shared by ETimes (@etimes)

ಇಂದು  ಸಂಜೆ ಸಂಗೀತ ಇರುತ್ತದೆ, ನಾಳೆ ಅದ್ದೂರಿ ಮದುವೆ

ಖಂಡಾಲ ಫಾರ್ಮ್‌ಹೌಸ್‌ನಲ್ಲಿ ಇಂದು ಸಂಜೆ ಅಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಸಂಗೀತ ಕಾರ್ಯಕ್ರಮ ನಡೆಯುತ್ತಿದೆ, ಅಲ್ಲದೆ, ಮದುವೆ ಬಗ್ಗೆ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಈ ತಾರಾ ಜೋಡಿಯ ಕಾಕ್‌ಟೈಲ್ ಸಂಗೀತದಲ್ಲಿ ದಂಪತಿಯ ಸಂಬಂಧಿಕರು ಮತ್ತು ಆಪ್ತರು ಭಾಗಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲ, ಈ ಪಾರ್ಟಿಯಲ್ಲಿ ಬಾಲಿವುಡ್‌ನ ಸ್ಟಾರ್ ಸಿಂಗರ್ ಮಿಕಾ ಸಿಂಗ್ ಪ್ರದರ್ಶನ ನೀಡುತ್ತಿದ್ದು, ಅನೇಕ ತಾರೆಯರು ಸಹ ಇಲ್ಲಿ ತಮ್ಮ ಪ್ರದರ್ಶನವನ್ನು ನೀಡಲಿದ್ದಾರೆ.

ನಾಳೆ ಅಂದರೆ ಜನವರಿ 23, 2023 ರಂದು ಈ ಜೋಡಿ ಸಪ್ತಪದಿ ತುಳಿಯಲಿದ್ದಾರೆ, ನಂತರ ಈ ದಂಪತಿಗಳು ಫೋಟೋ ತೆಗೆಸಿಕೊಳ್ಳಲು ಮಾಧ್ಯಮದ ಮುಂದೆ ಬರುತ್ತಾರೆ. ಈ ತಾರಾ ಜೋಡಿಯ ಮದುವೆಗೆ ನೋ ಫೋನ್ ಪಾಲಿಸಿ ಜರಿ ಮಾಡಲಾಗಿದೆ, ಬರುವ ಅತಿಥಿಗಳ ಫೋನ್‌ಗಳ ಕ್ಯಾಮೆರಾಗಳಿಗೆ ಸ್ಟಿಕ್ಕರ್‌ಗಳನ್ನು ಅಂಟಿಸಲಾಗಿದೆ. ಪ್ರವೇಶ ದ್ವಾರದಲ್ಲೂ ಬಿಗಿ ಭದ್ರತೆ ಏರ್ಪಡಿಸಲಾಗಿದೆ.

ಇದನ್ನೂ ಓದಿ : Team India : ಮೂರನೇ ಪಂದ್ಯದಿಂದ ಸಿರಾಜ್ - ಶಮಿ ಔಟ್? ಸುಳಿವು ನೀಡಿದ ರೋಹಿತ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News