'ಮಾಯಾಂಕ'ನ ಆಟಕ್ಕೆ ಕರ್ನಾಟಕಕ್ಕೆ ಒಲಿದ 'ವಿಜಯ' ಹಜಾರೆ

     

Last Updated : Feb 27, 2018, 07:07 PM IST
'ಮಾಯಾಂಕ'ನ ಆಟಕ್ಕೆ ಕರ್ನಾಟಕಕ್ಕೆ ಒಲಿದ 'ವಿಜಯ' ಹಜಾರೆ  title=

ನವದೆಹಲಿ: ಇಲ್ಲಿನ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ ವಿಜಯ್ ಹಜಾರೆ ಟ್ರೋಪಿಯ ಫೈನಲ್ ಪಂದ್ಯದಲ್ಲಿ ಕರ್ನಾಟಕದ ಮಾಯಾಂಕ ಅಗರವಾಲ್ ರ ಭರ್ಜರಿ ಬ್ಯಾಟಿಂಗ್(90) ಪ್ರದರ್ಶನದಿಂದಾಗಿ ಸೌರಾಷ್ಟ್ರ ವಿರುದ್ದ ಟ್ರೋಪಿಯನ್ನು ತನ್ನದಾಗಿಸಿಕೊಂಡಿತು.  

ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡವು 45.5 ಓವರ್ ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 253 ರನ್ ಗಳಿಸಿತು. ಕರ್ನಾಟಕದ ಪರ ಮಾಯಾಂಕ ಅಗರರ್ವಾಲ್ ಹೊರತುಪಡಿಸಿ ರವಿಕುಮಾರ್ ಸಮರ್ಥ್ 48, ಪವನ್ ದೇಶಪಾಂಡೆ 49 ರನ್ ಗಳ ನೆರವಿನಿಂದ ಕರ್ನಾಟಕ ಸವಾಲಿನ ಮೊತ್ತ ಪೇರಿಸಿತು. 

ಈ 253 ರನ್ ಗಳ ಗುರಿ ಬೆನ್ನತ್ತಿದ ಸೌರಾಷ್ಟ್ರ ತಂಡವು ಕರ್ನಾಟಕದ ಪ್ರಸಿದ್ ಕೃಷ್ಣಾ(3) ಕೆ.ಗೌತಮ್(3) ಬೌಲಿಂಗ್ ದಾಳಿಗೆ ತತ್ತರಿಸಿ 46.3 ಓವರ್ ಗಳಲ್ಲಿ 212 ರನ್ ಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು.

Trending News