ಬುಮ್ರಾ ದಾಳಿಗೆ ತತ್ತರಿಸಿದ ಕಾಂಗರೂ ಪಡೆ, 151 ರನ್​ಗೆ ಆಲೌಟ್​

ಆಸ್ಟ್ರೇಲಿಯಾ ವಿರುದ್ಧದ ಮೆಲ್ಬೋರ್ನ್ ಮೂರನೇ ಟೆಸ್ಟ್​ ಪಂದ್ಯದಲ್ಲಿ ಜಸ್​ಪ್ರೀತ್ ಬುಮ್ರಾ  6 ವಿಕೆಟ್‌ ಪಡೆದರು.

Last Updated : Dec 28, 2018, 01:20 PM IST
ಬುಮ್ರಾ ದಾಳಿಗೆ ತತ್ತರಿಸಿದ ಕಾಂಗರೂ ಪಡೆ, 151 ರನ್​ಗೆ ಆಲೌಟ್​ title=
Pic Courtesy: PTI

ಮೆಲ್ಬೋರ್ನ್​: ಮೆಲ್ಬೋರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ತೃತೀಯ ಟೆಸ್ಟ್ ಪಂದ್ಯದಲ್ಲಿ ಬುಮ್ರಾ ದಾಳಿಗೆ ತತ್ತರಿಸಿದ ಕಾಂಗರೂ ಪಡೆ ಕೇವಲ 151 ರನ್‌ಗಳಿಗೆ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡಿತು. ಭಾರತಕ್ಕೆ ಮೊದಲ ಇನಿಂಗ್ಸ್​ನಲ್ಲಿ ಮಹತ್ವದ 292 ರನ್​ ಮುನ್ನಡೆ ದೊರೆತಿದೆ.

ನಿನ್ನೆ ವಿಕೆಟ್ ನಷ್ಟವಿಲ್ಲದೇ 8 ರನ್ ಗಳಿಸಿದ್ದ ಆಸ್ಟ್ರೇಲಿಯಾ ಇಂದು ಭಾರತೀಯ ಬೌಲರ್ ಗಳ ದಾಳಿಗೆ ತತ್ತರಿಸಿತು. ಆಸೀಸ್‌ ಪರ  ಮಾರ್ಕಸ್‌ ಹ್ಯಾರಿಸ್‌ 22 , ಉಸ್ಮಾನ್‌ ಖ್ವಾಜಾ 21, ಶಾನ್‌ ಮಾರ್ಶ್‌ 19, ಟ್ರಾವಿಸ್‌ ಹೆಡ್‌ 20, ಟಿಮ್‌ ಪೇಯ್ನ 22, ಪ್ಯಾಟ್‌ ಕ್ಯುಮಿನ್ಸ್‌ 17 ರನ್‌ಗಳಿಸಿದೆ ಉಳಿದ ಆಟಗಾರರ್ಯಾರು ಒಂದಂಕಿ ದಾಟಲಿಲ್ಲ.

ಭಾರತದ ಪರ ಬಿಗಿ ದಾಳಿ ನಡೆಸಿದ ಜಸ್‌ಪ್ರೀತ್‌ ಬುಮ್ರಾ 33 ಕ್ಕೆ 6 ವಿಕೆಟ್‌ ಕಿತ್ತು ಗಮನ ಸೆಳೆದರೆ, ಜಡೇಜಾ 2,  ಇಶಾಂತ್ ಶರ್ಮಾ ಮತ್ತು ಮೊಹಮದ್ ಶಮಿ ತಲಾ 1 ವಿಕೆಟ್ ಪಡೆದರು.

Trending News