Viral Video: ಕೆ.ಎಲ್.ರಾಹುಲ್‌ ಔಟ್; ಒಂದೇ ಕೈಯಲ್ಲಿ ಅದ್ಭುತ ಕ್ಯಾಚ್ ಹಿಡಿದ ಜಾನಿ ಬೈರ್‌ಸ್ಟೋ

ಲೀಡ್ಸ್ ಮೈದಾನದಲ್ಲಿ ನಡೆಯುತ್ತಿರುವ 3ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಬ್ಯಾಟ್ಸ್‌ ಮನ್ ಜಾನಿ ಬೈರ್‌ಸ್ಟೋ ಅದ್ಭುತ ಕ್ಯಾಚ್ ಹಿಡಿದಿದ್ದಾರೆ.

Written by - Puttaraj K Alur | Last Updated : Aug 28, 2021, 12:44 PM IST
  • ಒಂದೇ ಕೈಯಲ್ಲಿ ಅದ್ಭುತ ಕ್ಯಾಚ್ ಹಿಡಿದ ಇಂಗ್ಲೆಂಡ್ ಆಟಗಾರ ಜಾನಿ ಬೈರ್‌ಸ್ಟೋ
  • ಕ್ರೇಗ್ ಓವರ್ಟನ್ ಎಸೆತದಲ್ಲಿ ಸ್ಟನ್ನಿಂಗ್ ಕ್ಯಾಚ್ ಹಿಡಿದು ಕೆ.ಎಲ್.ರಾಹುಲ್ ಗೆ ಪೆವಿಲಿಯನ್ ಹಾದಿ ತೋರಿದ ಬೈರ್‌ಸ್ಟೋ
  • 3ನೇ ಟೆಸ್ಟ್ ಪಂದ್ಯದಲ್ಲಿ 2 ವಿಕೆಟ್ ಕಳೆದುಕೊಂಡು 215 ರನ್ ಗಳಿಸಿರುವ ಭಾರತ 139 ರನ್ ಗಳ ಹಿನ್ನಡೆ ಅನುಭವಿಸಿದೆ
Viral Video: ಕೆ.ಎಲ್.ರಾಹುಲ್‌ ಔಟ್; ಒಂದೇ ಕೈಯಲ್ಲಿ ಅದ್ಭುತ ಕ್ಯಾಚ್ ಹಿಡಿದ ಜಾನಿ ಬೈರ್‌ಸ್ಟೋ title=
ಒಂದೇ ಕೈಯಲ್ಲಿ ಅದ್ಭುತ ಕ್ಯಾಚ್ ಹಿಡಿದ ಬೈರ್‌ಸ್ಟೋ (Photo Courtesy: @DNA)

ನವದೆಹಲಿ: ಲೀಡ್ಸ್ ಮೈದಾನದಲ್ಲಿ ನಡೆಯುತ್ತಿರುವ 3ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಬ್ಯಾಟ್ಸ್‌ ಮನ್ ಜಾನಿ ಬೈರ್‌ಸ್ಟೋ(Jonny Bairstow) ಅದ್ಭುತ ಕ್ಯಾಚ್ ಹಿಡಿದಿದ್ದಾರೆ. ಮೈದಾನದಲ್ಲಿ 2ನೇ ಸ್ಲಿಪ್ ನಲ್ಲಿ ಕ್ಷೇತ್ರರಕ್ಷಣೆ ಮಾಡುತ್ತಿದ್ದ ಬೈರ್‌ಸ್ಟೋ ಒಂದೇ ಕೈಯಲ್ಲಿ ಕ್ಯಾಚ್ ಹಿಡಿಯುವ ಮೂಲಕ ಕೆ.ಎಲ್.ರಾಹುಲ್(KL Rahul)ಗೆ ಪೆವಿಲಿಯನ್ ದಾರಿ ತೋರಿಸಿದ್ದಾರೆ.

ಸದ್ಯ ಬೈರ್‌ಸ್ಟೋ(Jonny Bairstow) ಒಂದೇ ಕೈಯಲ್ಲಿ ಹಿಡಿದಿರುವ ಅದ್ಭುತ ಕ್ಯಾಚ್ ನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಅನೇಕ ಕ್ರಿಕೆಟ್ ದಿಗ್ಗಜರು ಬೈರ್‌ಸ್ಟೋ ಹಿಡಿದಿರುವ ಸ್ಟನ್ನಿಂಗ್ ಕ್ಯಾಚ್ ಗೆ ಫಿದಾ ಆಗಿ ಮೆಚ್ಚುಗೆ ಸೂಚಿಸಿದ್ದಾರೆ. ಹೆಡಿಂಗ್ಲೆಯಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯವು ಭಾರೀ ಕುತೂಹಲ ಮೂಡಿಸಿದೆ. ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 78 ರನ್ ಗಳಿಗೆ ಆಲೌಟ್ ಆಗುವ ಮೂಲಕ ವಿರಾಟ್ ಕೊಹ್ಲಿ(Virat Kohli) ಪಡೆ ಅಭಿಮಾನಿಗಳಿಗೆ ನಿರಾಸೆ ಮೂಡಿಸಿತ್ತು.

ಇದನ್ನೂ ಓದಿ: Anand Mahindra Tweet: ಬಾಲಕನೋರ್ವನ ಕಳರಿಪಯಟ್ಟು ವಿಡಿಯೋ ಹಂಚಿಕೊಂಡ ಉದ್ಯಮಿ ಆನಂದ್ ಮಹಿಂದ್ರಾ

ಟೀಂ ಇಂಡಿಯಾ(Team India)ವನ್ನು ಕೇವಲ 78 ರನ್ ಗಳಿಗೆ ಕಟ್ಟಿಹಾಕಿದ ಆಂಗ್ಲರು ಮೊದಲ ಇನ್ನಿಂಗ್ಸ್ ನಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. 132.2 ಓವರ್ ಗಳಲ್ಲಿ ಇಂಗ್ಲೆಂಡ್ ತಂಡ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 432 ರನ್ ಗಳ ಬೃಹತ್ ಮೊತ್ತ ಪೇರಿಸಿ, 354 ರನ್ ಗಳ ಮುನ್ನಡೆ ಸಾಧಿಸಿತು. 2ನೇ ಇನ್ನಿಂಗ್ಸ್ ಆರಂಭಿಸಿರುವ ಭಾರತ ಸದ್ಯ 80 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 215 ರನ್ ಗಳಿಸಿದ್ದು, ಇನ್ನೂ 139 ರನ್ ಗಳ ಹಿನ್ನಡೆ ಅನುಭಿಸಿದೆ. 3ನೇ ದಿನದ ಮೊದಲ ಸೆಶನ್‌ನಲ್ಲಿ ಟೀಂ ಇಂಡಿಯಾ ಆರಂಭಿಕ ಕೆ.ಎಲ್.ರಾಹುಲ್ ಬಹುಬೇಗನೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ತಂಡದ ಮೊತ್ತ 34 ರನ್ ಆಗಿದ್ದ ವೇಳೆ ಕ್ರೇಗ್ ಓವರ್ಟನ್(Craig Overton) ಎಸೆದ ಓವರ್ ನಲ್ಲಿ ರಾಹುಲ್, ಬೈರ್‌ಸ್ಟೋಗೆ ಕ್ಯಾಚಿತ್ತು ನಿರ್ಗಮಿಸಿದರು. 54 ಎಸೆತಗಳಲ್ಲಿ ಕೇವಲ 8 ರನ್ ಗಳಿಸಿದ್ದ ರಾಹುಲ್ ಅವರು 2ನೇ ಸ್ಲಿಪ್ ನಲ್ಲಿ ಕ್ಷೇತ್ರರಕ್ಷಣೆ ಮಾಡುತ್ತಿದ್ದ ಬೈರ್‌ಸ್ಟೋ ಒಂದೇ ಕೈಯಲ್ಲಿ ಹಿಡಿದ ಅದ್ಭುತ ಕ್ಯಾಚ್ ಗೆ ಬಲಿಯಾದರು.

ಕ್ರೇಗ್ ಓವರ್ಟನ್ ಎಸೆತವನ್ನು ದಂಡಿಸಲು ಕೆ.ಎಲ್.ರಾಹುಲ್(KL Rahul) ಮುಂದಾಗಿದ್ದರು. ಆದರೆ ಅವರ ಬ್ಯಾಟ್ ನ ಅಂಚಿಗೆ ತಗುಲಿದ ಚೆಂಡು ಮೊದಲ ಸ್ಲಿಪ್ ಕಡೆಗೆ ಹಾರಿತು. ಅಲ್ಲಿ ಇಂಗ್ಲೆಂಡ್ ನಾಯಕ ಜೋ ರೂಟ್ ಕ್ಷೇತ್ರರಕ್ಷಣೆ ಮಾಡುತ್ತಿದ್ದರು. ಆದರೆ 2ನೇ ಸ್ಲಿಪ್‌ನಲ್ಲಿದ್ದ ಬೈರ್‌ಸ್ಟೋ ತನ್ನ ಎಡಗೈ ಮೂಲಕ ಚೆಂಡನ್ನು ಹಿಡಿಯುವಲ್ಲಿ ಯಶಸ್ವಿಯಾದರು. ಬೈರ್‌ಸ್ಟೋ ಒಂದೇ ಕೈಯಲ್ಲಿ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಸಹಆಟಗಾರರನ್ನು ದಂಗುಬಡಿಸಿದ್ದರು.

ಇದನ್ನೂ ಓದಿ: Tokyo Paralympics : ಪ್ಯಾರಾಲಿಂಪಿಕ್ ನಲ್ಲಿ ಭಾರತಕ್ಕೆ ಪದಕ ಖಚಿತ, ಟೇಬಲ್ ಟೆನಿಸ್ ನಲ್ಲಿ ಸೆಮಿಫೈನಲ್ ಪ್ರವೇಶಿಸಿದ Bhavina Patel

ಊಟದ ವಿರಾಮದ ವೇಳೆಗೆ ರಾಹುಲ್ ವಿಕೆಟ್ ಕಳೆದುಕೊಂಡ ಭಾರತ ಸಂಕಷ್ಟಕ್ಕೆ ಸಿಲುಕಿತ್ತು. ಬಳಿಕ ರೋಹಿತ್ ಶರ್ಮಾ ಜೊತೆ ಸೇರಿದ ಚೇತೇಶ್ವರ್ ಪೂಜಾರ ಇಂಗ್ಲೆಂಡ್ ಬೌಲರ್ ಗಳನ್ನು ದಂಡಿಸಲು ಶುರು ಮಾಡಿದರು. ಹಿಟ್ ಮ್ಯಾನ್ ರೋಹಿತ್ ಶರ್ಮಾ ಆಕರ್ಷಕ ಅರ್ಧಶತಕ ಭಾರಿಸಿ (59) ಔಟಾದರು. ಸದ್ಯ ಕ್ರಿಸ್ ನಲ್ಲಿರುವ ಚೇತೇಶ್ವರ್ ಪೂಜಾರ 91 ರನ್ ಗಳಿಸಿದ್ದು, ವಿರಾಟ್ ಕೊಹ್ಲಿ ಕೂಡ 45 ರನ್ ಗಳಿಸಿ ಉತ್ತಮ ಆಟವಾಡುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

Trending News