ಧೋನಿಯ ಪ್ರಿಯ ಶಿಷ್ಯನಿಗೆ Team Indiaದಲ್ಲಿ ಸ್ಥಾನ ಕೊಟ್ಟ ಬಿಸಿಸಿಐ! 33 ಸುದೀರ್ಘ ಸಿಕ್ಸರ್ ಬಾರಿಸಿದ್ದ ಕಿಲಾಡಿ ಈತ…

Jitesh Sharma, Circket News in Kannada: ಭಾರತ ಮತ್ತು ಐರ್ಲೆಂಡ್ ನಡುವಿನ 3 ಪಂದ್ಯಗಳ T20 ಅಂತಾರಾಷ್ಟ್ರೀಯ ಸರಣಿಯು ಆಗಸ್ಟ್ 18 ರಿಂದ ಆಗಸ್ಟ್ 23 ರವರೆಗೆ ನಡೆಯಲಿದೆ.

Written by - Bhavishya Shetty | Last Updated : Aug 1, 2023, 08:57 AM IST
    • ಭಾರತ ಮತ್ತು ಐರ್ಲೆಂಡ್ ನಡುವಿನ 3 ಪಂದ್ಯಗಳ T20 ಅಂತಾರಾಷ್ಟ್ರೀಯ ಸರಣಿ
    • ಮೂರು ಪಂದ್ಯಗಳ ಟಿ20 ಅಂತಾರಾಷ್ಟ್ರೀಯ ಸರಣಿಗೆ ಟೀಂ ಇಂಡಿಯಾ ಪ್ರಕಟ
    • ಧೋನಿಯ ಕೊರತೆಯನ್ನು ನೀಗಿಸಬಲ್ಲ ಈ ಕ್ರಿಕೆಟಿಗನಿಗೆ ಸ್ಥಾನ ನೀಡಿದ ಸಮಿತಿ
ಧೋನಿಯ ಪ್ರಿಯ ಶಿಷ್ಯನಿಗೆ Team Indiaದಲ್ಲಿ ಸ್ಥಾನ ಕೊಟ್ಟ ಬಿಸಿಸಿಐ! 33 ಸುದೀರ್ಘ ಸಿಕ್ಸರ್ ಬಾರಿಸಿದ್ದ ಕಿಲಾಡಿ ಈತ… title=
jitesh sharma

IRE vs IND T20 Cricket News: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈಗಾಗಲೇ ಐರ್ಲೆಂಡ್ ಸರಣಿಗೆ ತಂಡವನ್ನು ಪ್ರಕಟ ಮಾಡಿದೆ. ಈ ತಂಡದಲ್ಲಿ ಓರ್ವ ಕ್ರಿಕೆಟಿಗನಿಗೆ ಸ್ಥಾನ ನೀಡಲಾಗಿದ್ದು, ಈತ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯಂತೆ ಲಾಂಗ್ ಸಿಕ್ಸರ್ ಬಾರಿಸುವ ಸಾಮಾರ್ಥ್ಯ ಹೊಂದಿದ್ದಾನೆ.

ಇದನ್ನೂ ಓದಿ: 1 ವರ್ಷದ ಬಳಿಕ ತಂಡಕ್ಕೆ ಮರಳಿದ ಈ ಆಲ್’ರೌಂಡರ್ ಇನ್ಮುಂದೆ ಟೀಂ ಇಂಡಿಯಾ ಕ್ಯಾಪ್ಟನ್

ಭಾರತ ಮತ್ತು ಐರ್ಲೆಂಡ್ ನಡುವಿನ 3 ಪಂದ್ಯಗಳ T20 ಅಂತಾರಾಷ್ಟ್ರೀಯ ಸರಣಿಯು ಆಗಸ್ಟ್ 18 ರಿಂದ ಆಗಸ್ಟ್ 23 ರವರೆಗೆ ನಡೆಯಲಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯ್ಕೆ ಸಮಿತಿಯು ಐರ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಟಿ20 ಅಂತಾರಾಷ್ಟ್ರೀಯ ಸರಣಿಗೆ ಟೀಂ ಇಂಡಿಯಾವನ್ನು ಪ್ರಕಟಿಸಿದೆ.

ಟೀಂ ಇಂಡಿಯಾದಲ್ಲಿ ಮಹೇಂದ್ರ ಸಿಂಗ್ ಧೋನಿಯ ಕೊರತೆಯನ್ನು ನೀಗಿಸಬಲ್ಲ ಈ ಕ್ರಿಕೆಟಿಗ ಬೇರೆ ಯಾರೂ ಅಲ್ಲ, ಅವರೇ IPL 2023 ಋತುವಿನಲ್ಲಿ ಉತ್ತಮ ಪ್ರದರ್ಶನ ನೀಡಿದ ಪಂಜಾಬ್ ಕಿಂಗ್ಸ್ ವಿಕೆಟ್-ಕೀಪರ್ ಬ್ಯಾಟ್ಸ್‌ಮನ್ ಜಿತೇಶ್ ಶರ್ಮಾ. ಈ ಕ್ರಿಕೆಟಿಗನಿಗೆ ಐರ್ಲೆಂಡ್ ವಿರುದ್ಧದ ಮೂರು ಪಂದ್ಯಗಳ T20 ಅಂತರರಾಷ್ಟ್ರೀಯ ಸರಣಿಯಲ್ಲಿ ಸ್ಥಾನ ನೀಡಲಾಗಿದೆ.

ಐಪಿಎಲ್ 2023ರ ಋತುವಿನಲ್ಲಿ ಪಂಜಾಬ್ ಕಿಂಗ್ಸ್ ಫಿನಿಶರ್ ಜಿತೇಶ್ ಶರ್ಮಾ ಮಾರಕ ಸಿಕ್ಸರ್’ಗಳನ್ನು ಬಾರಿಸಿದ್ದರು. ಐಪಿಎಲ್ 2023 ರಲ್ಲಿನ ಅದ್ಭುತ ಪ್ರದರ್ಶನದ ಆಧಾರದ ಮೇಲೆ ಜಿತೇಶ್ ಶರ್ಮಾ ಇದೀಗ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ.

ಜಿತೇಶ್ ಶರ್ಮಾ ಅವರು ತಮ್ಮ ಅಪಾಯಕಾರಿ ಆಟದ ಮೂಲಕ ಮಹೇಂದ್ರ ಸಿಂಗ್ ಧೋನಿ ಅವರ ಬ್ಯಾಟಿಂಗ್ ಸ್ಟೈಲನ್ನು ನೆನಪಿಸುತ್ತಾರೆ. ವಿಕೆಟ್ ಕೀಪರ್ ಕಂ ಬ್ಯಾಟ್ಸ್‌ಮನ್ ಜಿತೇಶ್ ಶರ್ಮಾ ಅವರು ಚಾಣಾಕ್ಷತನದಂತೆ ಅತ್ಯಂತ ಸ್ಫೋಟಕ ಬ್ಯಾಟಿಂಗ್ ಮತ್ತು ವಿಕೆಟ್ ಕೀಪಿಂಗ್‌’ಗೆ ಹೆಸರುವಾಸಿಯಾಗಿದ್ದಾರೆ.

ಐರ್ಲೆಂಡ್ ವಿರುದ್ಧದ T20I ಸರಣಿಯಲ್ಲಿ ಟೀಂ ಇಂಡಿಯಾದ ಪ್ಲೇಯಿಂಗ್ XI ನಲ್ಲಿ ವಿಕೆಟ್-ಕೀಪರ್ ಬ್ಯಾಟ್ಸ್‌ಮನ್ ಜಿತೇಶ್ ಶರ್ಮಾ 6 ನೇ ಸ್ಥಾನದಲ್ಲಿ ಆಡಬಹುದು ಎಂದನಿಸುತ್ತದೆ.  

ಜಿತೇಶ್ ಶರ್ಮಾ ಅವರ ಲಯದಲ್ಲಿದ್ದರೆ, ಯಾವುದೇ ಬೌಲಿಂಗ್ ಎದುರಿಸುವ ಶಕ್ತಿ ಹೊಂದಿದ್ದಾರೆ. ಜಿತೇಶ್ ಶರ್ಮಾ 26 ಐಪಿಎಲ್ ಪಂದ್ಯಗಳಲ್ಲಿ 159.24 ಸ್ಟ್ರೈಕ್ ರೇಟ್‌ ನಲ್ಲಿ 543 ರನ್ ಗಳಿಸಿದ್ದಾರೆ. ಇದರಲ್ಲಿ 33 ಸಿಕ್ಸರ್ ಮತ್ತು 44 ಬೌಂಡರಿಗಳನ್ನು ಬಾರಿಸಿದ್ದಾರೆ. ಇನ್ನು 90 ಟಿ20 ಪಂದ್ಯಗಳಲ್ಲಿ 1 ಶತಕ ಮತ್ತು 9 ಅರ್ಧಶತಕ ಸೇರಿದಂತೆ 2096 ರನ್ ಗಳಿಸಿದ್ದಾರೆ.

ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾ:

ಜಸ್ಪ್ರೀತ್ ಬುಮ್ರಾ (ನಾಯಕ), ರಿತುರಾಜ್ ಗಾಯಕ್ವಾಡ್ (ಉಪನಾಯಕ), ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ಸಂಜು ಸ್ಯಾಮ್ಸನ್ (ವಿಕೆಟ್-ಕೀಪರ್), ಜಿತೇಶ್ ಶರ್ಮಾ (ವಿಕೆಟ್-ಕೀಪರ್), ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ರವಿ ಬಿಷ್ಣೋ , ಪ್ರಖ್ಯಾತ ಕೃಷ್ಣ, ಅರ್ಷದೀಪ್ ಸಿಂಗ್ , ಮುಖೇಶ್ ಕುಮಾರ್, ಅವೇಶ್ ಖಾನ್.

ಇದನ್ನೂ ಓದಿ: LIVE ಪಂದ್ಯದಲ್ಲೇ ಮೈದಾನಕ್ಕೆ ನುಗ್ಗಿದ 10 ಅಡಿ ಉದ್ದದ ಹಾವು! ದಿಕ್ಕಾಪಾಲಾಗಿ ಓಡಿದ ಆಟಗಾರರು

ಭಾರತ vs ಐರ್ಲೆಂಡ್ T20 ಸರಣಿ ವೇಳಾಪಟ್ಟಿ (ಭಾರತೀಯ ಕಾಲಮಾನ):

1ನೇ ಟಿ20 ಪಂದ್ಯ, ಆಗಸ್ಟ್ 18, ರಾತ್ರಿ 7.30, ಡಬ್ಲಿನ್

2ನೇ ಟಿ20 ಪಂದ್ಯ, ಆಗಸ್ಟ್ 20, ರಾತ್ರಿ 7.30, ಡಬ್ಲಿನ್

ಮೂರನೇ ಟಿ20 ಪಂದ್ಯ, ಆಗಸ್ಟ್ 23, ರಾತ್ರಿ 7.30, ಡಬ್ಲಿನ್

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News