Virat Kohli day : ತಿರುವನಂತಪುರಂನ ಗ್ರೀನ್ಫೀಲ್ಡ್ ಸ್ಟೇಡಿಯಂನಲ್ಲಿ ಇಂದು ನಡೆದ (ಜ.15) ಶ್ರೀಲಂಕಾ ವಿರುದ್ಧದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ 110 ಎಸೆತಗಳಲ್ಲಿ ಅಜೇಯ 166 ರನ್ ಗಳಿಸುವ ಮೂಲಕ 50 ಓವರ್ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 390 ರನ್ ಗಳಿಸಲು ಸಹಾಯವಾದರು. ಇದೀಗ ಕೊಹ್ಲಿ ಆಟವನ್ನು ನೋಡಿದ ನೆಟ್ಟಿಗರು, ವಿರಾಟ್ ಅಬ್ಬರಿಸಿದ ಈ ದಿನವನ್ನು ಅಂದ್ರೆ ಜನವರಿ 15ನ್ನು ʼವಿರಾಟ್ ಕೊಹ್ಲಿ ದಿನʼ ಎಂದು ಘೋಷಣೆ ಮಾಡುವಂತೆ ಬೇಡಿಕೆಯಿಟ್ಟಿದ್ದಾರೆ.
ಶ್ರೀಲಂಕಾ ವಿರುದ್ಧದ ಮೂರನೇ ಅಂತಿಮ ಏಕದಿನ ಪಂದ್ಯದಲ್ಲಿ, ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್, ಕಿಂಗ್ ಕೊಹ್ಲಿಯ 13 ಬೌಂಡರಿ, 8 ಸಿಕ್ಸರ್ಗಳ ಸಿಡಿಸುವ ಮೂಲಕ ಅಬ್ಬರಿಸಿದರು. ಆರಂಭಿಕ ಆಟಗಾರ ಶುಭಮನ್ ಗಿಲ್ ಅವರು ಶತಕ ಬಾರಿಸಿದರು. ಗಿಲ್ 97 ಎಸೆತಗಳಲ್ಲಿ 14 ಬೌಂಡರಿ ಮತ್ತು ಎರಡು ಸಿಕ್ಸರ್ಗಳನ್ನು ಒಳಗೊಂಡಂತೆ 116 ರನ್ ಗಳಿಸಿದರು. ಇಂದಿನ ದಿನ ಭಾರತ ತಂಡಕ್ಕೆ ಸ್ಮರಣೀಯ ದಿನವಾಗಿದೆ.
ಇದನ್ನೂ ಓದಿ: IND vs SL 3rd ODI : ಟೀಂ ಇಂಡಿಯಾ ಬೌಲಿಂಗ್ ದಾಳಿಗೆ ತತ್ತರಿಸಿದ ಶ್ರೀಲಂಕಾ!
ನಾಯಕ ರೋಹಿತ್ ಶರ್ಮಾ 49 ಎಸೆತಗಳಲ್ಲಿ ಎರಡು ಬೌಂಡರಿ ಹಾಗೂ 3 ಸಿಕ್ಸರ್ಗಳ ನೆರವಿನಿಂದ 42 ರನ್ ಗಳಿಸಿ ಮಹತ್ವದ ಕಾಣಿಕೆ ನೀಡಿದರು. ನಂತರ ಶ್ರೇಯಸ್ ಅಯ್ಯರ್ 32 ಎಸೆತಗಳಲ್ಲಿ 38 ರನ್ ಗಳಿಸಿ ಬಿರುಸಿನ ಆಟವಾಡಿದರು. ದುರದೃಷ್ಟವಶಾತ್, ವಿಕೆಟ್ಕೀಪರ್-ಬ್ಯಾಟರ್ ಕೆಲ್ ಎಲ್ ರಾಹುಲ್ ಹಿಂದಿನ ಪಂದ್ಯದಿಂದ ತಮ್ಮ ಫಾರ್ಮ್ ಅನ್ನು ಪುನರಾವರ್ತಿಸಲು ವಿಫಲರಾದರು. ಕೇವಲ ಏಳು ರನ್ಗಳನ್ನು ಕೊಡುಗೆ ನೀಡಿದರು. ಸೂರ್ಯಕುಮಾರ್ ಯಾದವ್ ನಾಲ್ಕು ಎಸೆತಗಳಲ್ಲಿ ಕೇವಲ ನಾಲ್ಕು ರನ್ಗಳನ್ನು ಗಳಿಸಿದರು.
391 ರನ್ಗಳ ಗುರಿಯನ್ನು ಬೆನ್ನಟ್ಟಿ ಟೀಂ ಇಂಡಿಯಾ ಜಯಗಳಿಸಿದೆ. ಇದರ ಬೆನ್ನಲ್ಲೆ ಕೊಹ್ಲಿ ಅಭಿಮಾನಿಗಳ ಬೇಡಿಕೆಯೊಂದು ಇಂಟರ್ನೆಟ್ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಕಿಂಗ್ ಕೊಹ್ಲಿ ಅಬ್ಬರಿಸಿದ ಈ ದಿನವನ್ನು ʼವಿರಾಟ್ ಕೊಹ್ಲಿ ದಿನʼವಾಗಿ ಘೋಷಣೆ ಮಾಡುವಂತೆ ಒತ್ತಾಯಿಸಿದ್ದಾರೆ. ವಿರಾಟ್ ಆಟಕ್ಕೆ ನೆಟ್ಟಿಗರು ಪ್ರಶಂಸೆಯ ಸುರಿಮಳೆ ಸುರಿಸುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.