ಪುಸ್ತಕ ರೂಪ ಪಡೆದ ಡೇರ್ ಡೆವಿಲ್‌ ಮುಸ್ತಾಫಾ ಸಿನಿಮಾ

ಇತ್ತೀಚೆಗಷ್ಟೇ ಬೆಂಗಳೂರಿನ ಸುಚಿತ್ರ ಮತ್ತು ಸಾಂಸ್ಕೃತಿಕ ಅಕಾಡೆಮಿಯಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಿತು. ನಿರ್ದೇಶಕಿ ಕಂ ನಟಿ ಸಿಂಧು ಎಸ್ ಮೂರ್ತಿ,ನಿರ್ದೇಶಕರಾದ ಅನೂಪ್ ಭಂಡಾರಿ, ನಿತಿನ್ ಕೃಷ್ಣಮೂರ್ತಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. 

Written by - Ranjitha R K | Last Updated : May 22, 2024, 04:16 PM IST
  • ಡೇರ್ ಡೆವಿಲ್ ಮುಸ್ತಾಫಾ ಸಿನಿಮಾಗೆ ಒಂದು ವರ್ಷ ಪೂರೈಸಿದೆ.
  • ನಿರ್ದೇಶಕ ಶಶಾಂಕ್ ಸೋಗಾಲ್ ಚಿತ್ರಕಥೆ ಹಾಗೂ ಆಯ್ದ ವಿಮರ್ಶೆಗಳನ್ನು ಪುಸ್ತಕ ರೂಪಕ್ಕೆ ಇಳಿಸಿದ್ದಾರೆ
  • ಸಾಂಸ್ಕೃತಿಕ ಅಕಾಡೆಮಿಯಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ
ಪುಸ್ತಕ ರೂಪ ಪಡೆದ ಡೇರ್ ಡೆವಿಲ್‌ ಮುಸ್ತಾಫಾ ಸಿನಿಮಾ title=

ಬೆಂಗಳೂರು : ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಸಣ್ಣ ಕಥೆ ಆಧಾರಿತ ಸಿನಿಮಾ ಡೇರ್ ಡೆವಿಲ್ ಮುಸ್ತಾಫಾ.ಕಳೆದ ವರ್ಷ ಬಿಡುಗಡೆಯಾಗಿದ್ದ ಈ ಚಿತ್ರ ಪ್ರೇಕ್ಷಕರ ಮೆಚ್ಚುಗೆ ಪಡೆದಿತ್ತು. ಶಶಾಂಕ ಸೋಗಾಲ್ ನಿರ್ದೇಶನದಲ್ಲಿ ಮೂಡಿಬಂದಿದ್ದ ಡೇರ್ ಡೆವಿಲ್ ಮುಸ್ತಾಫಾ ಚಿತ್ರವೀಗ ಪುಸ್ತಕ ರೂಪ ಪಡೆದಿದೆ. 

ಡೇರ್ ಡೆವಿಲ್ ಮುಸ್ತಾಫಾ ಸಿನಿಮಾಗೆ ಒಂದು ವರ್ಷ ಪೂರೈಸಿದೆ.ಈ ಹಿನ್ನೆಲೆಯಲ್ಲಿ  ನಿರ್ದೇಶಕ ಶಶಾಂಕ್ ಸೋಗಾಲ್ ಚಿತ್ರಕಥೆ ಹಾಗೂ ಆಯ್ದ ವಿಮರ್ಶೆಗಳನ್ನು ಪುಸ್ತಕ ರೂಪಕ್ಕೆ ಇಳಿಸಿದ್ದಾರೆ.ಇತ್ತೀಚೆಗಷ್ಟೇ ಬೆಂಗಳೂರಿನ ಸುಚಿತ್ರ ಮತ್ತು ಸಾಂಸ್ಕೃತಿಕ ಅಕಾಡೆಮಿಯಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಿತು. ನಿರ್ದೇಶಕಿ ಕಂ ನಟಿ ಸಿಂಧು ಎಸ್ ಮೂರ್ತಿ,ನಿರ್ದೇಶಕರಾದ ಅನೂಪ್ ಭಂಡಾರಿ, ನಿತಿನ್ ಕೃಷ್ಣಮೂರ್ತಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. 

ಇದನ್ನೂ ಓದಿ : RC16 ಸಿನಿಮಾದಲ್ಲಿ ರಾಮ್ ಚರಣ್ ತಾಯಿಯಾಗಿ ಹಿರಿಯ ಸ್ಟಾರ್ ನಟಿ

ಪುಸ್ತಕದ ವಿಶೇಷತೆಗಳೇನು? :
ಕನ್ನಡದಲ್ಲಿ ಸಿನಿಮಾ ಕುರಿತ ಕೃತಿಗಳು ಕಡಿಮೆ.ಅದರಲ್ಲಿಯೂ ಕೆಲವೇ ಕೆಲವು ಚಿತ್ರಕಥೆಯ ಪುಸ್ತಕಗಳಿವೆ.ಆ ಸಾಲಿಗೀಗ ಡೇರ್ ಡೆವಿಲ್ ಮುಸ್ತಾಫಾ ಸಿನಿಮಾ ಕೂಡಾ ಸೇರ್ಪಡೆಯಾಗಿದೆ.ಈ ಪುಸ್ತಕದಲ್ಲಿ ಕಾಲೇಜು ದಿನಗಳನ್ನು ಮೆಲುಕು ಹಾಕುವಂತಹ ಸನ್ನಿವೇಶವಿದೆ.ಸಹಪಾಠಿಗಳ ನಡುವೆ ನಡೆಯುವ ಸಣ್ಣ ಪುಟ್ಟ ಜಗಳ,ಧರ್ಮಕ್ಕೂ ಮಿಗಿಲಾದ ಫ್ರೆಂಡ್ ಶಿಪ್ ಎಂಬ ಸಾರಾಂಶವನ್ನು ಸಮಾಜಕ್ಕೆ ಸಾರುವಂತಹ ವಿಷಯದ ಜೊತೆಗೆ ಸಿನಿಮಾ ಆಸಕ್ತರಿಗೆ ಪಠ್ಯವಾಗಬಲ್ಲ ಪುಸ್ತಕ ಅಂದರು ತಪ್ಪಿಲ್ಲ.ಒಂದು ಸಣ್ಣ ಕಥೆ ಎತ್ತಿಕೊಂಡು ಸ್ಕ್ರೀನ್ ಪ್ಲೇ, ಕಥೆ ಡೈಲಾಗ್ ಬರೆದು ದೃಶ್ಯ ರೂಪಕ್ಕೆ ಹೇಗೆ ಇಳಿಸಲಾಯಿತು.? ಸಣ್ಣ ಕಥೆ ಚಿತ್ರ ಕಥೆ ಆಗಿದ್ದೇಗೆ? ಕಥೆ ಸಿನಿಮಾವಾಗಿದ್ದೇಗೆ ಎಂಬ ವಿಷಯಗಳು ಈ  ಪುಸ್ತಕ ಓದಿದರೆ ತಿಳಿಯುತ್ತದೆ.

ಸಿನಿಮಾ ಮಾಧ್ಯಮದ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವ ಪುಸ್ತಕಗಳ ಕೊರತೆ ಇದೆ.‌ಅದರಲ್ಲಿಯೂ ಇಂಗ್ಲೀಷ್ ಭಾಷೆಯಲ್ಲಿ ಕಥೆ ಬರೆದು ಸಿನಿಮಾ ಮಾಡುವವರು ಹೆಚ್ಚಿರುವಾಗ ಕನ್ನಡದಲ್ಲಿ ಸ್ಕ್ರೀಪ್ಟ್ ಬರೆದು ಸಿನಿಮಾ ಮಾಡಿದ್ದೇವೆ ಅನ್ನೋದನ್ನು ಡೇರ್ ಡೆವಿಲ್ ಮುಸ್ತಾಫಾ ಪುಸ್ತಕದಲ್ಲಿ ಕಟ್ಟಿಕೊಡಲಾಗಿದೆ. ಕನ್ನಡದ ಸದ್ಯದ ಸಿನಿಮಾರಂಗ ಇರುವ ಪರಿಸ್ಥಿತಿಯಲ್ಲಿ ಸಿನಿಮಾ ಸೂಕ್ಷ್ಮಗಳ ಬಗ್ಗೆ ಅರಿವು ಹುಟ್ಟಿಸಬಲ್ಲ ಇಂಥ ಕೃತಿಗಳ ಅಗತ್ಯ ಖಂಡಿತ ಇದೆ.

ಇದನ್ನೂ ಓದಿ : ತೇಜ್ ಸಜ್ಜಾ 'ಮಿರಾಯ್'ಗೆ ಮಂಚು ಮನೋಜ್ ಎಂಟ್ರಿ: ತೆಲುಗಿನ ರಾಕಿಂಗ್ ಸ್ಟಾರ್’ಗೆ ಶುಭಕೋರಿದ ಡಿಬಾಸ್-ಕಿಚ್ಚ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News