ಮುಂಬೈ: ಇಲ್ಲಿನ ವಾಂಖೇಡ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಟೂರ್ನಿಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಆರು ವಿಕೆಟ್ ಗಳ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿದೆ.
ಟಾಸ್ ಗೆದ್ದು ಮುಂಬೈ ಇಂಡಿಯನ್ಸ್ ತಂಡವು ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಇನ್ನೊಂದೆಡೆಗೆ ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ತಂಡವು ಆರಂಭದಲ್ಲಿಯೇ ತಂಡದ ಮೊತ್ತ 2 ಆಗಿದ್ದಾಗ ಮೊದಲ ಓವರ್ ನಲ್ಲಿಯೇ ಕೊಹ್ಲಿ ವಿಕೆಟ್ ಕಳೆದುಕೊಂಡಿತು, ಇದಾದ ನಂತರ ಮೂರನೇ ಓವರ್ ನಲ್ಲಿ ತಂಡದ ಮೊತ್ತ 16 ಆಗಿದ್ದಾಗ ಅನುಜ್ ರಾವತ್ ಅವ್ರ ವಿಕೆಟ್ ಕಳೆದುಕೊಳ್ಳುವ ಮೂಲಕ ಸಂಕಷ್ಟಕ್ಕೆ ಸಿಲುಕಿತು.
5⃣0⃣ for @surya_14kumar! 👌👌
This has been a superb knock in the chase 👍 👍
Follow the match ▶️ https://t.co/ooQkYwbrnL#TATAIPL | #MIvRCB | @mipaltan pic.twitter.com/v23ShZY1eS
— IndianPremierLeague (@IPL) May 9, 2023
ಈ ಹಂತದಲ್ಲಿ ಜೊತೆಗೂಡಿದ ದುಫ್ಲೆಸಿಸ್ ಮತ್ತು ಮ್ಯಾಕ್ಸವೆಲ್ ಕ್ರಮವಾಗಿ 65,68 ರನ್ ಗಳನ್ನು ಗಳಿಸುವ ಮೂಲಕ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು.ಕೊನೆಯಲ್ಲಿ ಕಾರ್ತಿಕ್ 30 ರನ್ ಗಳಿಸುವ ಮೂಲಕ ತಂಡಕ್ಕೆ ನೆರವಾದರು.ಅಂತಿಮವಾಗಿ ಬೆಂಗಳೂರು ತಂಡವು 20 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 199 ರನ್ ಗಳ ಬೃಹತ್ ಗುರಿಯನ್ನು ನೀಡಿತು.
ಬೆಂಗಳೂರು ತಂಡವು ನೀಡಿದ 200 ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡವು ಇಶಾನ್ ಕಿಶನ್,ಸುರ್ಯಕುಮಾರ್ ಯಾದವ್ ಹಾಗೂ ನೆಹಾಲ್ ವಡೆರಾ ಅವರ ಸ್ಪೋಟಕ ಬ್ಯಾಟಿಂಗ್ ನಿಂದಾಗಿ ಕೇವಲ 16.3 ಓವರ್ ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು ಗೆಲುವಿನ ಗುರಿಯನ್ನು ತಲುಪಿತು.ಮುಂಬೈ ತಂಡದ ಪರವಾಗಿ ಸುರ್ಯಕುಮಾರ್ ಯಾದವ್ ಕೇವಲ 35 ಎಸೆತಗಳಲ್ಲಿ ಏಳು ಬೌಂಡರಿ ಹಾಗೂ ಆರು ಸಿಕ್ಸರ್ ಗಳ ನೆರವಿನಿಂದಾಗಿ 83 ರನ್ ಗಳಿಸಿದರೆ, ಇಶಾನ್ ಕಿಶನ್ ಕೇವಲ 21 ಎಸೆತಗಳಲ್ಲಿ 42 ರನ್ ಗಳನ್ನು ಗಳಿಸಿದರು, ಇದರಲ್ಲಿ ನಾಲ್ಕು ಬೌಂಡರಿ ಹಾಗೂ ನಾಲ್ಕು ಸಿಕ್ಸರ್ ಗಳನ್ನು ಸಿಡಿಸಿದರು.ಇನ್ನೂ ನೆಹಾಲ್ ವಡೆರಾ 34 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಮೂರು ಸಿಕ್ಸರ್ ಗಳನ್ನು ಸಿಡಿಸುವ ಮೂಲಕ 52 ರನ್ ಗಳಿಸಿದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.