Urvashi Rautela: ಊರ್ವಶಿ ರೌಟೇಲಾಗೆ ಪಾಕ್ ಆಟಗಾರನ ಲವ್ ಪ್ರಪೋಸ್! ಪಂತ್ ಕಥೆ…? ವಿಡಿಯೋ ವೈರಲ್

Urvashi Rautela Love Propose: ಪಾಕಿಸ್ತಾನದ ವೇಗದ ಬೌಲರ್ ಓರ್ವ ಊರ್ವಶಿಗೆ ಮದುವೆಯ ಪ್ರಪೋಸ್ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಾಕಿಸ್ತಾನ ಕ್ರಿಕೆಟ್ ತಂಡದ ವೇಗದ ಬೌಲರ್ ನಸೀಮ್ ಶಾ ಅವರು ಭಾರತೀಯ ನಟಿ ಊರ್ವಶಿ ರೌಟೇಲಾ ಅವರನ್ನು ಮದುವೆಯಾಗುತ್ತೀರಾ ಎಂದು ಬಹಿರಂಗವಾಗಿ ಪ್ರಪೋಸ್ ಮಾಡಿದ್ದಾರೆ.

Written by - Bhavishya Shetty | Last Updated : Apr 8, 2023, 08:20 PM IST
    • ಪಾಕಿಸ್ತಾನದ ವೇಗದ ಬೌಲರ್ ಓರ್ವ ಊರ್ವಶಿಗೆ ಮದುವೆಯ ಪ್ರಪೋಸ್ ಮಾಡಿದ್ದಾರೆ.
    • ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
    • “ವಧು ರೆಡಿ ಆಗಿದ್ದರೆ ನಾನು ಮದುವೆಯಾಗುತ್ತೇನೆ” ಎಂದು ಹೇಳಿದ್ದಾರೆ
Urvashi Rautela: ಊರ್ವಶಿ ರೌಟೇಲಾಗೆ ಪಾಕ್ ಆಟಗಾರನ ಲವ್ ಪ್ರಪೋಸ್! ಪಂತ್ ಕಥೆ…? ವಿಡಿಯೋ ವೈರಲ್ title=
Urvashi Rautela

Urvashi Rautela Love Propose: ಭಾರತೀಯ ನಟಿ ಊರ್ವಶಿ ರೌಟೇಲಾ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ತಂಡದ ಕ್ರಿಕೆಟಿಗರೊಬ್ಬರು ದೊಡ್ಡ ಹೇಳಿಕೆ ನೀಡಿದ್ದಾರೆ. ಒಬ್ಬ ಕ್ರಿಕೆಟ್ ಆಟಗಾರನ ಜೊತೆ ಊರ್ವಶಿಗೆ ವಿಭಿನ್ನ ಸಂಬಂಧವಿದೆ ಎಂದು ಹೇಳಲಾಗುತ್ತಿದೆ. ಕೆಲವರು ಅದು ರಿಷಬ್ ಪಂತ್ ಅಂದರೆ, ಮತ್ತೂ ಕೆಲವರು ಪಾಕಿಸ್ತಾನದ ಓರ್ವ ಆಟಗಾರ ಎಂದು ಹೇಳುತ್ತಿದ್ದಾರೆ. ಆದರೆ ಸತ್ಯಾಂಶ ತಿಳಿದಿಲ್ಲ.

ಈ ಎಲ್ಲದರ ಮಧ್ಯೆ, ಪಾಕಿಸ್ತಾನದ ವೇಗದ ಬೌಲರ್ ಓರ್ವ ಊರ್ವಶಿಗೆ ಮದುವೆಯ ಪ್ರಪೋಸ್ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: "ಖರ್ಗೆ ಅವರು ರಾಜ್ಯದ ಸಿಎಂ ಆದರೆ ಅವರ ಜತೆ ಕೆಲಸ ಮಾಡಲು ನಾನು ಸಿದ್ಧ"

ಪಾಕಿಸ್ತಾನ ಕ್ರಿಕೆಟ್ ತಂಡದ ವೇಗದ ಬೌಲರ್ ನಸೀಮ್ ಶಾ ಅವರು ಭಾರತೀಯ ನಟಿ ಊರ್ವಶಿ ರೌಟೇಲಾ ಅವರನ್ನು ಮದುವೆಯಾಗುತ್ತೀರಾ ಎಂದು ಬಹಿರಂಗವಾಗಿ ಪ್ರಪೋಸ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಊರ್ವಶಿ ಪ್ರಶ್ನೆಗೆ ನಸೀಮ್ ಶಾ ಮೊದಲು ಹೇಳಿದ್ದು ಹೀಗೆ. “ಇಲ್ಲಿ ನಾನು ಏನಾದ್ರೂ ಹೇಳಿದರೆ ನೀವು ವೈರಲ್ ಮಾಡ್ತೀರಾ” ಅಂತ. ಆ ಬಳಿಕ “ವಧು ರೆಡಿ ಆಗಿದ್ದರೆ ನಾನು ಮದುವೆಯಾಗುತ್ತೇನೆ” ಎಂದು ಹೇಳಿದ್ದಾರೆ.

ನಸೀಮ್ ಶಾ ಅವರ ಹುಟ್ಟುಹಬ್ಬದ ದಿನ ಊರ್ವಶಿ ರೌಟೇಲಾ ಶುಭಾಶಯ ಕೋರಿದ್ದಾರೆ. ಅಂದಿನಿಂದ ಇಬ್ಬರ ನಡುವಿನ ಸಂಬಂಧದ ಬಗ್ಗೆ ಸುದ್ದಿಗಳು ಹರಿದಾಡತೊಡಗಿದವು. ನಸೀಮ್ ಶಾ ಅವರನ್ನು ಅಭಿನಂದಿಸುತ್ತಾ ಊರ್ವಶಿ 'ಹ್ಯಾಪಿ ಬರ್ತ್ ಡೇ' ನಸೀಮ್ ಶಾ ಎಂದು ಬರೆದಿದ್ದರು. ಇನ್ನೊಂದೆಡೆ ನಸೀಮ್ ಕೂಡ ಊರ್ವಶಿಗೆ 'ಧನ್ಯವಾದ' ಎಂದು ಕಾಮೆಂಟ್‌ನಲ್ಲಿ ಬರೆದಿದ್ದಾರೆ.

ಇದನ್ನೂ ಓದಿ: 1 ಓವರ್, 20 ರನ್… 25 ಎಸೆತದಲ್ಲೇ ‘ಯಶಸ್ವಿ’ ಅರ್ಧಶತಕ ಸಿಡಿಸಿದ 21ರ ಹರೆಯದ ಈ ‘ರಾಜ’ಹುಲಿ

ಕ್ರಿಕೆಟಿಗರ ಜೊತೆ ಊರ್ವಶಿ ರೌಟೇಲಾ ಹೆಸರು ಆಗಾಗ್ಗೆ ಕೇಳಿಬರುತ್ತಿರುತ್ತದೆ. ಇದಕ್ಕೆ ಕಾರಣವೂ ಇದೆ. ಏಷ್ಯಾ ಕಪ್ 2022ರ ನಂತರ ಊರ್ವಶಿ ರೌಟೇಲಾ ಮತ್ತು ನಸೀಮ್ ಷಾ ಬಗ್ಗೆ ಮಾತುಕತೆಗಳು ಮುನ್ನೆಲೆಗೆ ಬರಲು ಪ್ರಾರಂಭಿಸಿದವು. ಭಾರತ-ಪಾಕಿಸ್ತಾನ ಪಂದ್ಯ ವೀಕ್ಷಿಸಲು ಊರ್ವಶಿ ದುಬೈ ಕ್ರಿಕೆಟ್ ಸ್ಟೇಡಿಯಂಗೆ ತೆರಳಿದ್ದರು. ಆ ಪಂದ್ಯದಲ್ಲಿ ನಸೀಮ್ ಶಾ ಕೂಡ ಪಾಕಿಸ್ತಾನ ಪರ ಆಡಿದ್ದರು. ಪಂದ್ಯ ಮುಗಿದ ನಂತರ, ಊರ್ವಶಿ ಮತ್ತು ನಸೀಮ್ ಶಾ ಅವರ ಫ್ಯಾನ್ ಮೇಡ್ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇದರಲ್ಲಿ ನಸೀಮ್ ಶಾ ಊರ್ವಶಿ ಬಗ್ಗೆ ನನಗೆ ಊರ್ವಶಿ ಯಾರು ಗೊತ್ತಿಲ್ಲ ಎಂದು ಹೇಳಿದ್ದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News