Postural Hypertension ಕಾರಣ ವೇದಿಕೆಯ ಮೇಲೆ ಕುಸಿದು ಬಿದ್ದ IPL Auctioneer Hugh Edmeades, ಏನಿದು ಪೋಸ್ಚುರಲ್ ಹೈಪೋಟೆನ್ಶನ್?

IPL 2022 Mega Auction - ಐಪಿಎಲ್‌ನ ಮುಂದಿನ ಋತುವಿಗಾಗಿ ಮೆಗಾ ಹರಾಜು ಪ್ರಕ್ರಿಯೆ (IPL Mega Auction) ಶನಿವಾರದಿಂದ ಬೆಂಗಳೂರಿನ ಹೋಟೆಲ್‌ನಲ್ಲಿ ಪ್ರಾರಂಭವಾಗಿದೆ. ಮೊದಲ ದಿನ ಶಿಖರ್ ಧವನ್ ಅವರಿಂದ  ಆರಂಭಗೊಂಡಿದ್ದು, ನಂತರ ಹಲವು ಆಟಗಾರರ ಮೇಲೆ ಹಣದ ಮಳೆ ಸುರಿಯುತ್ತಲೇ ಇತ್ತು.

Written by - Nitin Tabib | Last Updated : Feb 12, 2022, 07:10 PM IST
  • ಹರಾಜು ಪ್ರಕ್ರಿಯೆಯ ವೇಳೆ ವೇದಿಕೆಯ ಮೇಲೆ ಕುಸಿದು ಬಿದ್ದ ಆಕ್ಷನರ್ ಹಗ್.
  • ಪೋಸ್ಚುರಲ್ ಅಥವಾ ಅರ್ಥೋಸ್ಟಾಟಿಕ್ ಹೈಪೋಟೆನ್ಶನ್ ಅಂದರೇನು?
  • ಅದರ ಲಕ್ಷಣ ಮತ್ತು ಚಿಕಿತ್ಸೆ ಏನು ತಿಳಿಯಲು ವರದಿ ಓದಿ
Postural Hypertension ಕಾರಣ ವೇದಿಕೆಯ ಮೇಲೆ ಕುಸಿದು ಬಿದ್ದ IPL Auctioneer Hugh Edmeades, ಏನಿದು ಪೋಸ್ಚುರಲ್ ಹೈಪೋಟೆನ್ಶನ್? title=
IPL 2022 Mega Auction (File Photo)

IPL 2022 Mega Auction - ಐಪಿಎಲ್‌ನ ಮುಂದಿನ ಋತುವಿಗಾಗಿ ಮೆಗಾ ಹರಾಜು ಪ್ರಕ್ರಿಯೆ (IPL Mega Auction) ಶನಿವಾರದಿಂದ ಬೆಂಗಳೂರಿನ ಹೋಟೆಲ್‌ನಲ್ಲಿ ಪ್ರಾರಂಭವಾಗಿದೆ. ಮೊದಲ ದಿನ ಶಿಖರ್ ಧವನ್ ಅವರಿಂದ  ಆರಂಭಗೊಂಡಿದ್ದು, ನಂತರ ಹಲವು ಆಟಗಾರರ ಮೇಲೆ ಹಣದ ಮಳೆ ಸುರಿಯುತ್ತಲೇ ಇತ್ತು. ಶ್ರೇಯಸ್ ಅಯ್ಯರ್ ಅವರನ್ನು ಕೆಕೆಆರ್ 12.25 ಕೋಟಿಗೆ ಖರೀದಿಸಿದೆ. ಹರಾಜಿನ (IPL Auction 2022) ಮಧ್ಯದಲ್ಲಿ ಶ್ರೀಲಂಕಾದ ಆಲ್‌ರೌಂಡರ್ ವನಿಂದು ಹಸರಂಗ ಅವರ ಸರದಿ ಬಂದಾಗ, ಐಪಿಎಲ್ ಹರಾಜುದಾರ Hugh Edmeades ಏದುಸಿರು ಬಿಡುತ್ತಾ ವೇದಿಕೆಯಿಂದ ಕೆಳಕ್ಕೆ ಬಿದ್ದರು. ಇದಾದ ಬಳಿಕ ಸುಮಾರು 1 ಗಂಟೆ ಕಾಲ ಹರಾಜು ಪ್ರಕ್ರಿಯೆ ನಿಲ್ಲಿಸಲಾಗಿತ್ತು.

ನಂತರ ಐಪಿಎಲ್‌ನ ಟ್ವಿಟರ್ ಹ್ಯಾಂಡಲ್‌ನಿಂದ  Hugh Edmeades,  Postural Hypertension ನಿಂದ ಕುಸಿದು ಬಿದ್ದಿದ್ದಾರೆ ಎಂದು ಹೇಳಲಾಯಿತು. ಘಟನೆ ನಡೆದ ಕೂಡಲೇ ವೈದ್ಯಕೀಯ ತಂಡ ಚಿಕಿತ್ಸೆ ನೀಡಿದ್ದು, ಇದೀಗ ಅವರ ಆರೋಗ್ಯ ಸ್ಥಿರವಾಗಿದೆ. ಹಗ್ ನಂತರ ಚಾರು ಶರ್ಮಾ ಹರಾಜು ಪ್ರಕ್ರಿಯೆಯನ್ನು ಮುಂದುವರೆಸಿದ್ದಾರೆ.

ಪೋಸ್ಚುರಲ್ ಹೈಪೋಟೆನ್ಶನ್ ಎಂದರೇನು?
ಮಾಹಿತಿಯ ಪ್ರಕಾರ, ಪೋಸ್ಚುರಲ್ ಹೈಪೋಟೆನ್ಶನ್ ಕಡಿಮೆ ರಕ್ತದೊತ್ತಡದ ಒಂದು ರೂಪವಾಗಿದೆ, ಇದು ನಿರಂತರವಾಗಿ ಕುಳಿತು ಅಥವಾ ಮಲಗಿದ ನಂತರ ಇದ್ದಕ್ಕಿದ್ದಂತೆ ನಿಂತಾಗ ಸಂಭವಿಸುತ್ತದೆ. ಇದನ್ನು ಆರ್ಥೋಸ್ಟಾಟಿಕ್ ಹೈಪೊಟೆನ್ಷನ್ ಎಂದೂ ಕೂಡ ಕರೆಯುತ್ತಾರೆ.

 IPL Auction 2022 News - ಈ ಕುರಿತು ನಮ್ಮ ಸಹಯೋಗಿ ವೆಬ್ ಸೈಟ್ ಆಗಿರುವ DNA ಜೊತೆಗೆ ಮಾನಾದಿರುವ ಜೈಪುರದ ಎಸ್‌ಎಂಎಸ್ ಆಸ್ಪತ್ರೆ  ಹಿರಿಯ ಸಲಹೆಗಾರ ವೈದ್ಯ ಡಾ. ಅಜಿತ್ ಸಿಂಗ್, ಭಂಗಿಯ ಹೈಪೊಟೆನ್ಷನ್‌ನಲ್ಲಿ, ವ್ಯಕ್ತಿಯು ನಿರಂತರವಾಗಿ ಕುಳಿತಾಗ ಅಥವಾ ನಿಂತಾಗ, ಬಿಪಿ ಸಾಮಾನ್ಯವಾಗಿರುತ್ತದೆ, ಆದರೆ ಅವನು ಇನ್ನೊಂದು ಭಂಗಿಗೆ ಹೋದ ತಕ್ಷಣ, ಆ ಸಮಯದಲ್ಲಿ ಬಿಪಿ ಸಾಮಾನ್ಯಕ್ಕಿಂತ ಕಡಿಮೆಯಾಗುತ್ತದೆ. ಇದು ತಲೆತಿರುಗುವಿಕೆ, ಹೆದರಿಕೆ ಮತ್ತು ಮೂರ್ಛೆಗೆ ಕಾರಣವಾಗಬಹುದು. ನಿರಂತರವಾಗಿ ನಿಲ್ಲುವುದರಿಂದಲೂ ಈ ಸಮಸ್ಯೆ ಉಂಟಾಗಬಹುದು. ಇದು ಯಾವುದೇ ವಯಸ್ಸಿನಲ್ಲಿ ಸಂಭವಿಸಬಹುದಾದರೂ, ಇದರ ಪರಿಣಾಮಗಳು 40 ರಿಂದ 60 ರ ವಯಸ್ಸಿನಲ್ಲಿ ಹೆಚ್ಚು. ಇದಕ್ಕೆ ಒಂದು ಕಾರಣವೆಂದರೆ ಸಾಕಷ್ಟು ದ್ರವಗಳನ್ನು ಸೇವಿಸದಿರುವುದು. ನಿರ್ಜಲೀಕರಣವು ತಲೆತಿರುಗುವಿಕೆ, ಜ್ವರ, ವಾಂತಿ, ಅತಿಸಾರ ಮತ್ತು ಅತಿಯಾದ ಬೆವರುವಿಕೆ ಇದಕ್ಕೆ ಕಾರಣವಾಗಬಹುದು.

ಇದನ್ನೂ ಓದಿ-IPL 2022 Mega Auction: ಐಪಿಎಲ್ ಹರಾಜಿನಲ್ಲಿ ಮಾರಾಟವಾಗದೆ ಉಳಿದ ಕ್ರಿಕೆಟ್ ತಾರೆಯರು

ಚಿಕಿತ್ಸೆ ಏನು ?(IPL Auction News)
ಈ ಕಾಯಿಲೆ ಇರುವವರಿಗೆ ವೈದ್ಯರು ಸಾಕಷ್ಟು ದ್ರವಗಳನ್ನು ಸೇವಿಸಲು, ಲಘು ಆಹಾರ ಸೇವಿಸಲು ಮತ್ತು ಎದ್ದೇಳುವಾಗ ಬೆತ್ತ ಅಥವಾ ವಾಕರ್ ಅನ್ನು ಬಳಸಲು ಶಿಫಾರಸು ಮಾಡುತ್ತಾರೆ. ಇದು ತಲೆತಿರುಗುವಿಕೆ ಮತ್ತು ಬೀಳುವಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ. ಮಲಗಿರುವ ಸ್ಥಾನದಿಂದ ನಿಧಾನವಾಗಿ ಎದ್ದು ನಿಲ್ಲುವುದು ಉತ್ತಮ. ಇದು ಗಂಭೀರ ಕಾಯಿಲೆಯಲ್ಲದಿದ್ದರೂ,  ಇಂತಹ ಸಂದರ್ಭದಲ್ಲಿ ವೈದ್ಯರನ್ನು ಸಂಪರ್ಕಿಸಿ ಬಿಪಿ ತಪಾಸಣೆ ಮಾಡಿಸಿಕೊಳ್ಳಿ ಎನ್ನುತ್ತಾರೆ ಡಾ.ಸಿಂಗ್ ಹೇಳಿದ್ದಾರೆ. 

ಇದನ್ನೂ ಓದಿ-IPL 2022 Mega Auction: ರಾಜಸ್ಥಾನ ರಾಯಲ್ಸ್ ಸೇರಿದ ಕನ್ನಡಿಗ ದೇವದತ್ ಪಡಿಕ್ಕಲ್

Hugh Edmeades ಯಾರು? (IPL 2022 Mega Auction Live Updates)
ಹಗ್ 2500 ಕ್ಕೂ ಹೆಚ್ಚು ಹರಾಜು ಪ್ರಕ್ರಿಯೆ ನಡೆಸಿದ ಅನುಭವವನ್ನು ಹೊಂದಿದ್ದಾರೆ. ಅವರು ಬ್ರಿಟಿಷ್ ಇಂಟರ್ನ್ಯಾಷನಲ್ ಫೈನ್ ಆರ್ಟ್, ಕ್ಲಾಸಿಕ್ ಕಾರ್ ಮತ್ತು ಚಾರಿಟಿಗಾಗಿ ಹರಾಜುದಾರರಾಗಿದ್ದಾರೆ. ಅವರು ಹರಾಜುದಾರರಾಗಿ ತಮ್ಮ ವೃತ್ತಿಜೀವನದ 35 ವರ್ಷಗಳನ್ನು ಪೂರ್ಣಗೊಳಿಸಿದ್ದಾರೆ. ಅವರು £2.7 ಶತಕೋಟಿ ಮೌಲ್ಯದ 310,000 ಲಾಟ್‌ಗಳನ್ನು ಮಾರಾಟ ಮಾಡಿದ್ದಾರೆ.

ಇದನ್ನೂ ಓದಿ -IPL 2022 MEGA AUCTION: Suresh Rainaಗೆ ಭಾರಿ ಹಿನ್ನಡೆ, ಯಾವ ತಂಡವೂ ಕೂಡ ಖರೀದಿಗೆ ಮುಂದಾಗಲಿಲ್ಲ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News