IPL 2024: 'Virat Kohli ಅವರನ್ನು ಟಿ20 ವಿಶ್ವಕಪ್ ಗೆ ಆಯ್ಕೆ ಮಾಡಬಾರದು'

IPL 2024: ಈ ಬಾರಿಯ ಐಪಿಎಲ್ ನ 17ನೇ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ. ಇದುವರೆಗೆ ಟೂರ್ನಿಯಲ್ಲಿ ವಿರಾಟ್ 316 ರನ್ ಗಳಿಸಿದ್ದಾರೆ. ಆದರೆ, ಆಸ್ಟ್ರೇಲಿಯ ತಂಡದ ಸ್ಪೋಟಕ ಬ್ಯಾಟ್ಸ್ ಮನ್ ವೊಬ್ಬರು ವಿರಾಟ್ ಕೊಹ್ಲಿಯನ್ನು ವಿಶ್ವ ಕಪ್ ಟಿ20ಗಾಗಿ ಆಯ್ಕೆ ಮಾಡದೆ ಇರುವುದು ಉತ್ತಮ ಎಂದಿದ್ದಾರೆ.   

Written by - Nitin Tabib | Last Updated : Apr 12, 2024, 11:57 AM IST
  • ಇಂತಹ ಸ್ಟ್ರೈಕ್ ರೇಟ್ ಸಮಸ್ಯೆಯೊಂದಿಗೆ ವಿರಾಟ್ ತನ್ನ ಮುಂದುವರೆಸಿದರೆ,
  • ಮುಂಬರುವ ಟಿ20 ವಿಶ್ವಕಪ್‌ಗೆ ಅವರನ್ನು ತಂಡದಲ್ಲಿ ಸೇರಿಸದಿರುವುದನ್ನು ಪರಿಗಣಿಸಬೇಕು
  • ಎಂದು ಕ್ರಿಕೆಟ್ ತಜ್ಞರು ಮತ್ತು ವಿಶ್ಲೇಷಕರು ಅಭಿಪ್ರಾಯಪಡುತ್ತಿದ್ದಾರೆ.
IPL 2024: 'Virat Kohli ಅವರನ್ನು ಟಿ20 ವಿಶ್ವಕಪ್ ಗೆ ಆಯ್ಕೆ ಮಾಡಬಾರದು' title=

IPL 2024: ಐಪಿಎಲ್ 17ನೇ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಇದರ ಹೊರತಾಗಿಯೂ ಅವರ ಸ್ಟ್ರೈಕ್ ರೇಟ್ ವಿಷಯ ಚರ್ಚೆಯ ವಿಷಯವಾಗಿಯೇ ಉಳಿದಿದೆ. ಅವರು ಇದುವರೆಗೆ ಆಡಿರುವ ಐದು ಪಂದ್ಯಗಳಲ್ಲಿ 316 ರನ್ ಗಳಿಸಿದ್ದಾರೆ, ಈ ಅವಧಿಯಲ್ಲಿ ಅವರ ಸ್ಟ್ರೈಕ್ ರೇಟ್ 146.29 ಆಗಿದೆ. ಇದರಿಂದಾಗಿ ಅವರು ಸಾಕಷ್ಟು ಟೀಕೆಗೆ ಗುರಿಯಾಗಿದ್ದಾರೆ.

ಇಂತಹ ಸ್ಟ್ರೈಕ್ ರೇಟ್ ಸಮಸ್ಯೆಯೊಂದಿಗೆ ವಿರಾಟ್ ತನ್ನ ಮುಂದುವರೆಸಿದರೆ, ಮುಂಬರುವ ಟಿ20 ವಿಶ್ವಕಪ್‌ಗೆ ಅವರನ್ನು ತಂಡದಲ್ಲಿ ಸೇರಿಸದಿರುವುದನ್ನು ಪರಿಗಣಿಸಬೇಕು ಎಂದು ಕ್ರಿಕೆಟ್ ತಜ್ಞರು ಮತ್ತು ವಿಶ್ಲೇಷಕರು ಅಭಿಪ್ರಾಯಪಡುತ್ತಿದ್ದಾರೆ.

ಇದೀಗ ಆಸ್ಟ್ರೇಲಿಯಾದ ಸ್ಟಾರ್ ಆಲ್ ರೌಂಡರ್ ಹಾಗೂ ಆರ್‌ಸಿಬಿಯಲ್ಲಿ ಕೊಹ್ಲಿ ಸಹ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಮೆಗಾ ಟೂರ್ನಮೆಂಟ್‌ಗೆ ಭಾರತ ತಂಡದಲ್ಲಿ ಕೊಹ್ಲಿಯನ್ನು ಆಯ್ಕೆ ಮಾಡದೆ ಇರುವುದು ಉತ್ತಮ ಎಂದು  ಪಿಸುಧ್ವನಿಯಲ್ಲಿ ಹೇಳಿದ್ದಾರೆ. ಟಿ20 ವಿಶ್ವಕಪ್ ನಲ್ಲಿ ಕೊಹ್ಲಿ ಆಡದೇ ಇದ್ದರೆ ಅದು ಆಸ್ಟ್ರೇಲಿಯಾಕ್ಕೆ ಲಾಭವಾಗಲಿದೆ ಎಂದು ಮಾರ್ಮಿಕವಾಗಿ ಅವರು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಮೊಹಾಲಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ 82* ರನ್ ಗಳಿಸಿದ ಕೊಹ್ಲಿಯ ಇನ್ನಿಂಗ್ಸ್ ಅನ್ನು ನೆನಪಿಸಿಕೊಂಡಿದ್ದಾರೆ ಮತ್ತು ಇದು ತಾನು ನೋಡಿದ ಅತ್ಯುತ್ತಮ ಇನ್ನಿಂಗ್ಸ್‌ಗಳಲ್ಲಿ ಒಂದಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ-IPL 2024: ಮುಂಬೈ ತಂಡದಲ್ಲಿ ಎಲ್ಲವೂ ಸರಿ ಇಲ್ಲ, RCB ವಿರುದ್ಧದ ಪಂದ್ಯಕ್ಕೂ ಮುನ್ನ ವೈರಲ್ ಆಗುತ್ತಿದೆ ಈ ವಿಡಿಯೋ!

ವಿರಾಟ್ ವಿರುದ್ಧ ಆಡದಿರುವುದು ಉತ್ತಮ - ಗ್ಲೆನ್ ಮ್ಯಾಕ್ಸ್‌ವೆಲ್
ಇಎಸ್‌ಪಿಎನ್ ಜೊತೆ ಮಾತನಾಡಿದ ಮ್ಯಾಕ್ಸ್‌ವೆಲ್, ನಾನು ಇದುವರೆಗೆ ಆಡಿದ ಅತ್ಯಂತ ಕ್ಲಚ್ ಆಟಗಾರರಲ್ಲಿ ವಿರಾಟ್ ಕೊಹ್ಲಿ ಒಬ್ಬರು. 2016ರ ಟಿ20 ವಿಶ್ವಕಪ್‌ನಲ್ಲಿ ಮೊಹಾಲಿಯಲ್ಲಿ ಅವರು ನಮ್ಮ ವಿರುದ್ಧ ಆಡಿದ ಇನ್ನಿಂಗ್ಸ್ ಈಗಲೂ ಅವರು ನಮ್ಮ ವಿರುದ್ಧ ಆಡಿದ ಅತ್ಯುತ್ತಮ ಇನ್ನಿಂಗ್ಸ್ ಆಗಿದೆ. ಭಾರತವು ಅವರನ್ನು (ಟಿ 20 ವಿಶ್ವಕಪ್‌ಗೆ) ಆಯ್ಕೆ ಮಾಡುವುದಿಲ್ಲ ಎಂದು ನಾನು ಭಾವಿಸುತ್ತೇನೆ ಏಕೆಂದರೆ ಅವನ ವಿರುದ್ಧ ಆಡದಿರುವುದು ತುಂಬಾ ಒಳ್ಳೆಯದು.

ಇದನ್ನೂ ಓದಿ-IPL 2024: ಇತಿಹಾಸ ಬರೆದ Rashid Khan, ಏಕಕಾಲಕ್ಕೆ 5 ದಿಗ್ಗಜರ ದಾಖಲೆ ಪುಡಿ ಪುಡಿ...!

ತನ್ನ ನಗು ಮುಂದೆವರಿಸುತ್ತಾ ಮಾತನಾಡಿದ ಮ್ಯಾಕ್ಸಿ, “ಭಾರತದಲ್ಲಿ 1.5 ಬಿಲಿಯನ್ ಜನರಿದ್ದಾರೆ ಮತ್ತು ಅದರ ಅರ್ಧದಷ್ಟು ಜನರು ನಂಬಲಾಗದ ಕ್ರಿಕೆಟ್ ಆಟಗಾರರಾಗಿದ್ದಾರೆ ಎಂದು ನಾನು ಭವಿಸುತ್ತೇನೆ. ಐಪಿಎಲ್ 2024ರಲ್ಲಿ ಆಡುತ್ತಿರುವ ಭಾರತದ ಆಗ್ರ ಟಿ20 ಆಟಗಾರರನ್ನು ಒಮ್ಮೆ ನೀವು ನೋಡಿ ಅವರೆಲ್ಲರೂ ಅದ್ಭುತ ಆಟಗಾರರು ಮತ್ತು ಆಯ್ಕೆಗಾಗಿ ಅವರೆಲ್ಲರ ಮೇಲೆ ಒತ್ತಡ ಇರಲೇಬೇಕು" ಎಂದು ಹೇಳಿದ್ದಾರೆ. 

ಇದನ್ನೂ ನೋಡಿ-

 

Trending News