IPL 2024 : ಕೊಹ್ಲಿ 83 ರನ್, ಆರ್ ಸಿಬಿ ಯಿಂದ KKRಗೆ 183 ರನ್ ಗಳ ಗೆಲುವಿನ ಗುರಿ

ಐಪಿಎಲ್ 2024ರ 10ನೇ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ ನಡೆಯುತ್ತಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 183 ರನ್ ಗಳ  ಗೆಲುವಿನ ಗುರಿಯನ್ನು ನೀಡಿದೆ. 

Written by - Zee Kannada News Desk | Last Updated : Mar 29, 2024, 09:46 PM IST
  • ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ವಿರುದ್ಧವಾಗಿ ಆಡುತ್ತಿದೆ.
  • ವಿರಾಟ್ ಕೊಹ್ಲಿ 59 ಎಸೆತಗಳಲ್ಲಿ 83 ರನ್ ಗಳಿಸಿ ರೋಚಕ ರನ್ ಗಳಿಸಿದರು. ಕ್ಯಾಮೆರುನ್ 33 ಮತ್ತು ಗ್ಲೆನ್ 28 ರನ್ ಗಳಿಸಿದರು.
  • ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 183 ರನ್ ಗಳ ಗೆಲುವಿನ ಗುರಿಯನ್ನು ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ನೀಡಿದೆ.
IPL 2024 : ಕೊಹ್ಲಿ 83 ರನ್, ಆರ್ ಸಿಬಿ ಯಿಂದ KKRಗೆ 183 ರನ್ ಗಳ ಗೆಲುವಿನ ಗುರಿ title=

ಇಂಡಿಯನ್ ಪ್ರೀಮಿಯರ್ ಲೀಗ್ 2024ರ 10ನೇ ಪಂದ್ಯ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ವಿರುದ್ಧವಾಗಿ ಆಡುತ್ತಿದೆ. 

ಈ ಟೂರ್ನಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಎರಡನೇ ಪಂದ್ಯ ಇದಾಗಿದ್ದು, ಟಾಸ್ಕ್ ಗೆದ್ದು ಬೌಲಿಂಗ್ ಆಯ್ದುಕೊಂಡಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೂರನೇ ಪಂದ್ಯ ಇದಾಗಿದೆ.

ಇದನ್ನು ಓದಿ : RCB Vs KKR : ಆರ್ ಸಿಬಿಗೆ ತವರಿನಲ್ಲಿ 2ನೇ ಪಂದ್ಯ, ಟಾಸ್ ಗೆದ್ದ ಕೆಕೆಆರ್ ಬೌಲಿಂಗ್ ಆಯ್ಕೆ

ಈಗಾಗಲೇ ಎರಡು ಪಂದ್ಯಗಳನ್ನ ಆಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಒಂದು ಸೋಲು ಒಂದು ಗೆಲುವನ್ನು ಅನುಭವಿಸಿದೆ 

ರಾಯಲ್ ಚಾಲೆಂಜರ್ಸ್ ಬೆಂಗಳೂರು ಆರಂಭಿಕ ಬ್ಯಾಟ್ಸ್ ಮ್ಯಾನ್ ಗಳಾಗಿ  ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ ಕಣಕ್ಕಿಳಿದ್ದರು. 

ಫಾಫ್ ಡು ಪ್ಲೆಸಿಸ್ 8(6), ವಿರಾಟ್ ಕೊಹ್ಲಿ 83 (59), ಕ್ಯಾಮೆರುನ್ ಗ್ರೀನ್ 33(21),  ಗ್ಲೆನ್ ಮ್ಯಾಕ್ಸ್ವೆಲ್ 28(19), ರಜತ್ ಪಾಟಿದಾರ್ 3(4), ಅನುಜ್ ರಾವತ್ 3 (3), ದಿನೇಶ್ ಕಾರ್ತಿಕ್ 20 (8) ರನ್ ಗಳಿಸಿದರು. 

 

ವಿರಾಟ್ ಕೊಹ್ಲಿ 59 ಎಸೆತಗಳಲ್ಲಿ 83 ರನ್ ಗಳಿಸಿ ರೋಚಕ ರನ್ ಗಳಿಸಿದರು. ಕ್ಯಾಮೆರುನ್ 33 ಮತ್ತು ಗ್ಲೆನ್ 28  ರನ್ ಗಳಿಸಿದರು. 

ಇದನ್ನು ಓದಿ : ಸೇತುವೆ ಮೇಲಿಂದ ಬಿದ್ದ ಬಸ್: ಈಸ್ಟರ್ ಸಂಭ್ರಮದಲ್ಲಿದ್ದ 45 ಮಂದಿ ದಾರುಣ ಸಾವು

ವಿರುದ್ಧವಾಗಿ ಬೌಲಿಂಗ್ ಮಾಡಿದ ಹರ್ಷಿತ್ ರಾಣಾ, ಅಂಡ್ರೆ ರಸೆಲ್ ತಲಾ 2 ವಿಕೆಟ್, ಸುನಿಲ್ ನರೈನ್ 1 ವಿಕೆಟ್ ಪಡೆದುಕೊಂಡರು

 ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 183 ರನ್ ಗಳ ಗೆಲುವಿನ ಗುರಿಯನ್ನು ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ನೀಡಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News