IPL 2024: ಮುಂಬೈ ತಂಡದಲ್ಲಿ ಎಲ್ಲವೂ ಸರಿ ಇಲ್ಲ, RCB ವಿರುದ್ಧದ ಪಂದ್ಯಕ್ಕೂ ಮುನ್ನ ವೈರಲ್ ಆಗುತ್ತಿದೆ ಈ ವಿಡಿಯೋ!

Akash Ambani And Rohit Sharma Viral Video: ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. ರೋಹಿತ್ ನೇತೃತ್ವದಲ್ಲಿ ಮುಂಬೈ ಇಂಡಿಯನ್ಸ್ ತಂಡ ಐದು ಬಾರಿ ಐಪಿಎಲ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಅಷ್ಟೇ ಅಲ್ಲ ಐಪಿಎಲ್ ಇತಿಹಾಸದಲ್ಲಿಯೇ  ರೋಹಿತ ಅತ್ಯಂತ ಯಶಸ್ವಿ ನಾಯಕರಾಗಿದ್ದಾರೆ. ಐದು ಬಾರಿ ಚಾಂಪಿಯನ್ ಆಗಿರುವ MI ತಂಡ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಸೆಣೆಸಲಿದೆ. ಈ ಪಂದ್ಯ ಮುಂಬೈನ ವಾಂಖೇಡೆ ಮೈದಾನದಲ್ಲಿಯೇ ನಡೆಯಲಿದೆ.   

Written by - Nitin Tabib | Last Updated : Apr 11, 2024, 05:06 PM IST
  • ರೋಹಿತ್ ಮತ್ತು ಆಕಾಶ್ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲಲ್ಲ ಎಂಬುದು ಇಲ್ಲಿ ಉಲ್ಲೇಖನೀಯ.
  • ಇದಕ್ಕೂ ಮುನ್ನ, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಎಂಐ ಸೋಲಿನ ನಂತರ, ಇಬ್ಬರೂ ಡಗೌಟ್‌ನಲ್ಲಿ ದೀರ್ಘಕಾಲ ಮಾತನಾಡುತ್ತಿದ್ದರು.
  • ಹೀಗಿರುವಾಗ ಆಕಾಶ್ ಮತ್ತು ರೋಹಿತ್ ಮತ್ತೆ ಒಟ್ಟಿಗೆ ಕಾಣಿಸಿಕೊಂಡಾಗ ಮತ್ತೆ ಮುಂಬೈ ಪಾಳಯದಲ್ಲಿ ಏನೋ ಮಹತ್ವದ ಘಟನೆ ನಡೆಯುತ್ತಿದೆ ಎಂದು ಅಭಿಮಾನಿಗಳು ಅಂದುಕೊಳ್ಳುತ್ತಿದ್ದಾರೆ.
IPL 2024: ಮುಂಬೈ ತಂಡದಲ್ಲಿ ಎಲ್ಲವೂ ಸರಿ ಇಲ್ಲ, RCB ವಿರುದ್ಧದ ಪಂದ್ಯಕ್ಕೂ ಮುನ್ನ ವೈರಲ್ ಆಗುತ್ತಿದೆ ಈ ವಿಡಿಯೋ! title=

Royal Challengers Bengaluru ವಿರುದ್ಧದ ಪಂದ್ಯಕ್ಕೂ ಮುನ್ನ ರೋಹಿತ್ ಶರ್ಮಾಗೆ ಸಂಬಂಧಿಸಿದ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದೆ. RCB ವಿರುದ್ಧದ ಪಂದ್ಯಕ್ಕೂ ಮುನ್ನ ಮಾಜಿ ನಾಯಕ Rohit Sharma ಮತ್ತು ತಂಡದ ಮಾಲೀಕ Akash Ambani ಮುಂಬೈನ ಬೀದಿಗಳಲ್ಲಿ ಒಂದೇ ಕಾರಿನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ ಎಂಬುದು ಈ ವಿಡಿಯೋದಲ್ಲಿ ನೀವು ನೋಡಬಹುದು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳ ಮನದಲ್ಲಿ ಮತ್ತೆ ಊಹಾಪೋಹಗಳು ಮನೆಮಾಡಿವೆ.

ಒಟ್ಟಿಗೆ ವಾಂಖೆಡೆ ಸ್ಟೇಡಿಯಂ ತಲುಪಿದ ಆಕಾಶ್-ರೋಹಿತ್
Mumbai Indians ಮಾಲೀಕ ಆಕಾಶ್ ಅಂಬಾನಿ ಅವರ ಪಕ್ಕದಲ್ಲಿ ರೋಹಿತ್ ಶರ್ಮಾ ಕಾರಿನಲ್ಲಿ ಕುಳಿತಿರುವುದನ್ನು ನೀವು ನೋಡಬಹುದು. ಮಾಜಿ ಎಂಐ ಕ್ಯಾಪ್ಟನ್ ರೋಹಿತ್ ಮುಂದಿನ ಸೀಟಿನಲ್ಲಿದ್ದರೆ, ಆಕಾಶ್ ಕಾರು ಚಲಾಯಿಸುತ್ತಿದ್ದರು ಎನ್ನಲಾಗಿದೆ. ಇಬ್ಬರೂ ಕಾರಿನಲ್ಲಿ Wankhede Stadium ತಲುಪಿದ್ದಾರೆ ಎನ್ನಲಾಗುತ್ತಿದೆ. ಆದ್ರೂ ಕಾರು ಓಡಿಸುವವರ ಮುಖ ಸ್ಪಷ್ಟವಾಗಿ ಕಾಣಿಸದಿದ್ದರೂ ಅಭಿಮಾನಿಗಳ ಪ್ರತಿಕ್ರಿಯೆಯಿಂದ ಕಾರು ಚಲಾಯಿಸುತ್ತಿರುವವರು ಆಕಾಶ್ ಅಂಬಾನಿಯೇ ಎಂದು ಅನಿಸುತ್ತಿದೆ.

ಇದನ್ನೂ ಓದಿ-IPL 2024: ಇತಿಹಾಸ ಬರೆದ Rashid Khan, ಏಕಕಾಲಕ್ಕೆ 5 ದಿಗ್ಗಜರ ದಾಖಲೆ ಪುಡಿ ಪುಡಿ...!

ರೋಹಿತ್ ಮತ್ತು ಆಕಾಶ್ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲಲ್ಲ ಎಂಬುದು ಇಲ್ಲಿ ಉಲ್ಲೇಖನೀಯ. ಇದಕ್ಕೂ ಮುನ್ನ, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಎಂಐ ಸೋಲಿನ ನಂತರ, ಇಬ್ಬರೂ ಡಗೌಟ್‌ನಲ್ಲಿ ದೀರ್ಘಕಾಲ ಮಾತನಾಡುತ್ತಿದ್ದರು. ಹೀಗಿರುವಾಗ ಆಕಾಶ್ ಮತ್ತು ರೋಹಿತ್ ಮತ್ತೆ ಒಟ್ಟಿಗೆ ಕಾಣಿಸಿಕೊಂಡಾಗ ಮತ್ತೆ ಮುಂಬೈ ಪಾಳಯದಲ್ಲಿ ಏನೋ ಮಹತ್ವದ ಘಟನೆ ನಡೆಯುತ್ತಿದೆ ಎಂದು ಅಭಿಮಾನಿಗಳು ಅಂದುಕೊಳ್ಳುತ್ತಿದ್ದಾರೆ.

ಇದನ್ನೂ ಓದಿ-IPL 2024: 'ಮ್ಯಾಚ್ ಪ್ರೇಷರ್ ನಲ್ಲಿರುವಾಗ ನೀವು...' ಯಜುವೇಂದ್ರ ಚಾಹಲ್ 150ನೇ ಪಂದ್ಯದ ಕುರಿತು ಪತ್ನಿ ಧನಶ್ರೀ ಹೇಳಿದ್ದೇನು? Watch Video

ಮುಂಬೈ ಇಂಡಿಯನ್ಸ್ ತಂಡದ ಪಾಲಿಗೆ ಐಪಿಎಲ್ 2024 ರ ಆರಂಭ ಅಷ್ಟೊಂದು ಸರಿಯಾಗಿಲ್ಲ ಎಂದು ಹೇಳಬಹುದು ಮೊದಲ ಮೂರು ಪಂದ್ಯಗಳಲ್ಲಿ ತಂಡ ಸೋಲನ್ನು ಅನುಭವಿಸಿದೆ. ಡೆಲ್ಲಿ ವಿರುದ್ಧದ ಕೊನೆಯ ಪಂದ್ಯದಲ್ಲಿ ತಂಡ ಮೊದಲ ಗೆಲುವು ಸಾಧಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಈಗ ಗೆಲುವಿನ ಈ ನಾಗಾಲೋಟವನ್ನು ಮುಂದುವರಿಸುವುದೇ ತಂಡದ ಪ್ರಯತ್ನವಾಗಿರಲಿದೆ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News