IPL 2023: RCB ಗೆಲ್ಲೋಕೆ ಕನ್ನಡಿಗನೇ ಬರಬೇಕಾಯಿತು- ಸಿಂಪಲ್ ಸುನಿ ಸಂತಸ

IPL 2023, RCB vs DC: ದೆಹಲಿ ವಿರುದ್ಧ ರೆಡ್ ಆರ್ಮಿ ಭರ್ಜರಿ ಗೆಲುವು ಸಾಧಿಸುತ್ತಿದ್ದಂತೆಯೇ ಟ್ವೀಟ್ ಮಾಡಿರುವ ಸ್ಯಾಂಡಲ್‍ವುಡ್ ನಿರ್ದೇಶಕ ಸಿಂಪಲ್ ಸುನಿ ಖುಷಿ ವ್ಯಕ್ತಪಡಿಸಿದ್ದಾರೆ. RCB ಗೆಲ್ಲಲು ಕನ್ನಡಿಗನೇ ಬರಬೇಕಾಯಿತು ಎಂದು ಹೇಳಿದ್ದಾರೆ.

Written by - Puttaraj K Alur | Last Updated : Apr 16, 2023, 11:42 AM IST
  • 2 ಸೋಲಿನ ಬಳಿಕ ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ RCB
  • ದೆಹಲಿ ವಿರುದ್ಧ ಬೆಂಕಿ ಬೌಲಿಂಗ್ ಮಾಡಿದ ವಿಜಯಕುಮಾರ್ ವೈಶಾಕ್ ಬಗ್ಗೆ ಮೆಚ್ಚುಗೆ
  • RCB ಗೆಲ್ಲಲು ಕನ್ನಡಗನೇ ಬರಬೇಕಾಯಿತು ಎಂದು ನಿರ್ದೇಶಕ ಸಿಂಪಲ್ ಸುನಿ
IPL 2023: RCB ಗೆಲ್ಲೋಕೆ ಕನ್ನಡಿಗನೇ ಬರಬೇಕಾಯಿತು- ಸಿಂಪಲ್ ಸುನಿ ಸಂತಸ title=
ವಿಜಯಕುಮಾರ್ ವೈಶಾಕ್ ಬಗ್ಗೆ ಮೆಚ್ಚುಗೆ

ಬೆಂಗಳೂರು: ಬ್ಯಾಕ್ ಟು ಬ್ಯಾಕ್ 2 ಸೋಲು ಕಂಡು ನಿರಾಸೆ ಮೂಡಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಶನಿವಾರ ನಡೆದ ಮಹತ್ವದ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ದೆಹಲಿ ಫೀಲ್ಡಿಂಗ್ ಆಯ್ದುಕೊಂಡಿತು.

ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ RCB ನಿಗದಿತ 20 ಓವರ್‍ಗಳಲ್ಲಿ 6 ವಿಕೆಟ್ ಕಳೆದುಕೊಂಡು 174 ರನ್‍ಗಳ ಸವಾಲಿನ ಮೊತ್ತ ಪೇರಿಸಿತು. ಆರ್‍ಸಿಬಿ ಪರ ವಿರಾಟ್ ಕೊಹ್ಲಿ(50) ಭರ್ಜರಿ ಅರ್ಧಶತಕ, ಮಹಿಪಾಲ್ ಲೋಮ್ರೋರ್(26), ಗ್ಲೆನ್ ಮ್ಯಾಕ್ಸ್‌ವೆಲ್(24), ಫಾಫ್ ಡುಪ್ಲೆಸಿಸ್(22), ಶಹಬಾಜ್ ಅಹಮದ್ (ಅಜೇಯ 20) ಮತ್ತು ಅಂಜು ರಾವತ್(ಔಟಾಗದೆ 15) ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು.

175 ರನ್‍ಗಳ ಟಾರ್ಗೆಟ್ ಬೆನ್ನತ್ತಿದ ದೆಹಲಿ ಕ್ಯಾಪಿಟಲ್ಸ್ RCB ಬೌಲರ್‍ಗಳ ಮಾರಕ ಬೌಲಿಂಗ್ ದಾಳಿಗೆ ಸಿಲುಕಿ 20 ಓವರ್‍ಗಳಲ್ಲಿ 9 ವಿಕೆಟ್ ಕಳೆದುಕೊಂಡು 151 ರನ್‍ ಗಳಿಸಲಷ್ಟೇ ಶಕ್ತರಾದರು. RCB ಪರ ಬೆಂಕಿ ಬೌಲಿಂಗ್ ಮಾಡಿದ ವಿಜಯಕುಮಾರ್ ವೈಶಾಕ್ 20ಕ್ಕೆ 3 ವಿಕೆಟ್ ಕಬಳಿಸಿ ಮಿಂಚಿದರು. ಮೊಹಮ್ಮದ್ ಸಿರಾಜ್(23ಕ್ಕೆ 2) ವಿಕೆಟ್ ಗಳಿಸಿ ದೆಹಲಿಗೆ ಆಘಾತ ನೀಡಿದರು.

ಇದನ್ನೂ ಓದಿ: Watch: ಮೈದಾನದಲ್ಲಿಯೇ ಸಹ ಆಟಗಾರನ ವಿರುದ್ಧ ಕೂಗಾಡಿದ ವಿವಾದಕ್ಕೆ ಸಿಕ್ಕಿಹಾಕಿಕೊಂಡ ಪಾಂಡ್ಯ!

ಕಠಿಣ ಬೌಲಿಂಗ್ ಮಾಡುವ ಮೂಲಕ ದೆಹಲಿ ತಂಡವನ್ನು RCB ಬೌಲರ್‍ಗಳು ಸಣ್ಣ ಮೊತ್ತಕ್ಕೆ ಕಟ್ಟಿಹಾಕಿದರು. ಸತತ 2 ಸೋಲಿನ ಬಳಿಕ ಅದ್ಭುತ ಗೆಲುವು ಸಾಧಿಸಿದ ಬೆನ್ಲಲ್ಲಿಯೇ RCB ತಂಡಕ್ಕೆ ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ.

ಆರ್‍ಸಿಬಿ ಗೆಲ್ಲಲು ಕನ್ನಡಿಗನೇ ಬರಬೇಕಾಯಿತು

ದೆಹಲಿ ವಿರುದ್ಧ ರೆಡ್ ಆರ್ಮಿ ಭರ್ಜರಿ ಗೆಲುವು ಸಾಧಿಸುತ್ತಿದ್ದಂತೆಯೇ ಟ್ವೀಟ್ ಮಾಡಿರುವ ಸ್ಯಾಂಡಲ್‍ವುಡ್ ನಿರ್ದೇಶಕ ಸಿಂಪಲ್ ಸುನಿ ಖುಷಿ ವ್ಯಕ್ತಪಡಿಸಿದ್ದಾರೆ. RCB ಗೆಲ್ಲಲು ಕನ್ನಡಿಗನೇ ಬರಬೇಕಾಯಿತು ಎಂದು ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ‘ಬೇರೆನಿಲ್ಲ ಬ್ಯಾಟಿಂಗ್ ಸುಮಾರಗಿತ್ತಲ್ಲ ಅದಿಕ್ಕೆ ಬೌಲಿಂಗ್ ಚೆನ್ನಾಗಿತ್ತು. ನಾವ್ ಅವತ್ತಿಂದ ಹೇಳ್ತಿದ್ದೋ, ಒಬ್ಬ ಕನ್ನಡ ಪ್ಲೇಯರ್ ನ ಹಾಕೋಳ್ರೋ.. ದೆಸೆ ತಿರುಗುತ್ತೆ ಅಂತಾ. ನೋಡಿ Dummy ಬೌಲಿಂಗ್ ಅನ್ಕೊಂಡಿದ್ದೋರೆಲ್ಲಾ ಶಾಕ್ ಆಗೋರೆ. #vyshak ವಿಜಯ 20/3 #ಸಿರಾಜ್ ಬೆಂಕಿ 23/2 #ಕೊಹ್ಲಿ 3 ಕ್ಯಾಚು.. ನಮ್ದೇ ಮ್ಯಾಚು Rcb 174/6 Dc 151/9’ ಎಂದು ಟ್ವೀಟ್ ಮಾಡಿದ್ದಾರೆ.

‘ಒಂದೇ ದಿನ #RCB 2 ಮ್ಯಾಚ್ ಗೆದ್ದ ಹಾಗಾಯ್ತು.. ಒಂದು gambir MP ಆಗಿರೋ ದೆಹಲಿ #DC ಮೇಲೆ, ಇನ್ನೊಂದು gambir #ಮೆಂಟರ್ ಆಗಿರೋ #LSG ಮೇಲೆ #RCBvsDC #LSGvPBKS. #KLRahul ಬ್ಯಾಟಿಂಗ್ ಹಾಗೂ ಕ್ಯಾಚ್‍ಗೆ ನಮ್ಮ ಚಪ್ಪಾಳೆ ಇದ್ದೇ ಇರುತ್ತೆ...’ ಅಂತಾ ಸಿಂಪಲ್ ಸುನಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: IPL 2023: ಕೊಹ್ಲಿ ಅಬ್ಬರ, ವೈಶಾಕ್ ಕೈಚಳಕಕ್ಕೆ ಮಣಿದ ಡೆಲ್ಲಿ ಕ್ಯಾಪಿಟಲ್ಸ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News