ಈ ಇಬ್ಬರು ಆಟಗಾರರನ್ನು ಕೈ ಬಿಟ್ಟು ಪಶ್ಚಾತ್ತಾಪ ಪಡುತ್ತಿವೆ ಮುಂಬೈ - ಕೆಕೆಆರ್!

ಐಪಿಎಲ್ 2022 ರಲ್ಲಿ, ಈ ಎರಡು ತಂಡಗಳು ಈ ಪರಸ್ಥಿತಿಗೆ ಬರಲು ಒಂದು ದೊಡ್ಡ ತಪ್ಪನ್ನು ಮಾಡಿವೆ. ಹೌದು, ತಲಾ ಒಬ್ಬ ಮ್ಯಾಚ್ ವಿನ್ನರ್ ಆಟಗಾರನನ್ನು ಈ ತಂಡಗಳು ಕೈ ಬಿಟ್ಟಿವೆ. ಆ ಆಟಗಾರರು ಯಾರು? ಯಾಕೆ ಕೈ ಬಿಟ್ಟಿವೆ? ಇಲ್ಲಿದೆ ಸಂಪೂರ್ಣ ಮಾಹಿತಿ..

Written by - Channabasava A Kashinakunti | Last Updated : May 13, 2022, 03:51 PM IST
  • ಐಪಿಎಲ್ 2022 ರ ಸೀಸನ್ ಮುಂಬೈ ತಂಡಕ್ಕೆ ತುಂಬಾ ಭಯಾನಕವಾಗಿದೆ
  • ಕೆಕೆಆರ್ ತಂಡವು 12 ಪಂದ್ಯಗಳಲ್ಲಿ 7 ಪಂದ್ಯಗಳನ್ನು ಸೋತು ಪ್ಲೇಆಫ್ ರೇಸ್‌ನಿಂದ ಹೊರಗುಳಿಯುವ ಸನಿಹದಲ್ಲಿದೆ
  • ಕ್ವಿಂಟನ್ ಡಿ ಕಾಕ್ ನನ್ನ ಕೈ ಬಿಟ್ಟು ಮುಂಬೈ ಇಂಡಿಯನ್ಸ್ ತಂಡವು ಪಶ್ಚಾತ್ತಾಪ ಪಡುತ್ತಿದೆ
ಈ ಇಬ್ಬರು ಆಟಗಾರರನ್ನು ಕೈ ಬಿಟ್ಟು ಪಶ್ಚಾತ್ತಾಪ ಪಡುತ್ತಿವೆ ಮುಂಬೈ - ಕೆಕೆಆರ್! title=

IPL 2022 : ಐಪಿಎಲ್ 2022 ರ ಸೀಸನ್ ಮುಂಬೈ ಇಂಡಿಯನ್ಸ್ (MI) ತಂಡಕ್ಕೆ ತುಂಬಾ ಭಯಾನಕವಾಗಿದೆ. ಮುಂಬೈ ಇಂಡಿಯನ್ಸ್ ಐಪಿಎಲ್ 2022 ರ 12 ಪಂದ್ಯಗಳಲ್ಲಿ 9 ಪಂದ್ಯಗಳನ್ನು ಸೋತ ಕಾರಣದಿಂದ ಪ್ಲೇ ಆಫ್ ರೇಸ್‌ನಿಂದ ಹೊರಗುಳಿದಿದೆ. ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡವು 12 ಪಂದ್ಯಗಳಲ್ಲಿ 7 ಪಂದ್ಯಗಳನ್ನು ಸೋತು ಪ್ಲೇಆಫ್ ರೇಸ್‌ನಿಂದ ಹೊರಗುಳಿಯುವ ಸನಿಹದಲ್ಲಿದೆ. ಐಪಿಎಲ್ 2022 ರಲ್ಲಿ, ಈ ಎರಡು ತಂಡಗಳು ಈ ಪರಸ್ಥಿತಿಗೆ ಬರಲು ಒಂದು ದೊಡ್ಡ ತಪ್ಪನ್ನು ಮಾಡಿವೆ. ಹೌದು, ತಲಾ ಒಬ್ಬ ಮ್ಯಾಚ್ ವಿನ್ನರ್ ಆಟಗಾರನನ್ನು ಈ ತಂಡಗಳು ಕೈ ಬಿಟ್ಟಿವೆ. ಆ ಆಟಗಾರರು ಯಾರು? ಯಾಕೆ ಕೈ ಬಿಟ್ಟಿವೆ? ಇಲ್ಲಿದೆ ಸಂಪೂರ್ಣ ಮಾಹಿತಿ..

1. ದಿನೇಶ್ ಕಾರ್ತಿಕ್

36 ವರ್ಷದ ದಿನೇಶ್ ಕಾರ್ತಿಕ್ ಐಪಿಎಲ್ 2022 ರಲ್ಲಿ ಬಿರುಗಾಳಿಯ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ದಿನೇಶ್ ಕಾರ್ತಿಕ್ ಕಳೆದ ವರ್ಷದವರೆಗೂ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದಲ್ಲಿ ಆಡುತ್ತಿದ್ದರು. ದಿನೇಶ್ ಕಾರ್ತಿಕ್ ಐಪಿಎಲ್ 2022 ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಉಳಿಸಿಕೊಳ್ಳಲಿಲ್ಲ, ನಂತರ ಮೆಗಾ ಹರಾಜಿನಲ್ಲಿ ಅವರನ್ನು ಆರ್‌ಸಿಬಿ 5.5 ಕೋಟಿಗೆ ಖರೀದಿಸಿತು. ದಿನೇಶ್ ಕಾರ್ತಿಕ್ ಈಗ RCB ಗಾಗಿ ಫಿನಿಶರ್ ಆಗಿ ಆತ ಆಡುತ್ತಿದ್ದಾರೆ. ಈ ಸೀಸನ್ ನ 12 ಪಂದ್ಯಗಳಲ್ಲಿ 200.00 ಸ್ಟ್ರೈಕ್-ರೇಟ್‌ನೊಂದಿಗೆ 274 ರನ್ ಗಳಿಸಿದ್ದಾರೆ. 2022ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಭಾರತ ತಂಡದ ಭಾಗವಾಗಬೇಕೆಂದು ಕ್ರಿಕೆಟ್ ಅಭಿಮಾನಿಗಳು ಬಯಸುತ್ತಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡ ದಿನೇಶ್ ಕಾರ್ತಿಕ್ ತೊರೆದಿದ್ದಕ್ಕೆ ಪಶ್ಚಾತ್ತಾಪ ಪಡುತ್ತಿದೆ.

ಇದನ್ನೂ ಓದಿ : ದಕ್ಷಿಣದ ಈ ನಟಿಗಾಗಿ ಸಿನಿಮಾ ನಿರ್ಮಿಸಲಿದ್ದಾರೆ ಎಂ.ಎಸ್‌.ಧೋನಿ!

2. ಕ್ವಿಂಟನ್ ಡಿ ಕಾಕ್

ವಿಶ್ವ ಕ್ರಿಕೆಟ್‌ನ ರೋಚಕ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ಕ್ವಿಂಟನ್ ಡಿ ಕಾಕ್ ನನ್ನ ಕೈ ಬಿಟ್ಟು ಮುಂಬೈ ಇಂಡಿಯನ್ಸ್ ತಂಡವು ಪಶ್ಚಾತ್ತಾಪ ಪಡುತ್ತಿದೆ. ಐಪಿಎಲ್ 2022 ರಲ್ಲಿ ಮುಂಬೈ ಇಂಡಿಯನ್ಸ್‌ನ ದೊಡ್ಡ ದೌರ್ಬಲ್ಯವೆಂದರೆ ಅವರ ಆರಂಭಿಕ ಜೋಡಿ. ರೋಹಿತ್ ಶರ್ಮಾ ಮತ್ತು ಕ್ವಿಂಟನ್ ಡಿ ಕಾಕ್ ಒಟ್ಟಿಗೆ ಬ್ಯಾಟಿಂಗ್ ಮಾಡಿದಾಗ ಮುಂಬೈ ಇಂಡಿಯನ್ಸ್ ಉತ್ತಮ ಆರಂಭವನ್ನು ಪಡೆಯುತ್ತಿತ್ತು. ಕ್ವಿಂಟನ್ ಡಿ ಕಾಕ್ ಅವರನ್ನು ಮುಂಬೈ ಇಂಡಿಯನ್ಸ್ (MI) ಐಪಿಎಲ್ 2022 ಗಾಗಿ ಉಳಿಸಿಕೊಂಡಿಲ್ಲ ಮತ್ತು ಹರಾಜಿನಲ್ಲಿ ಅವರನ್ನು ಖರೀದಿಸಲಿಲ್ಲ. ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ ಹೊಸ ಫ್ರಾಂಚೈಸ್ 6.75 ಕೋಟಿಗೆ ಎಡಗೈ ಆಟಗಾರನನ್ನು ಖರೀದಿಸಿದ ನಂತರ ಅವರು ಲಕ್ನೋ ಸೂಪರ್ ಜೈಂಟ್ಸ್‌ಗೆ ಪ್ರಯೋಜನಕಾರಿಯಾಗಿದ್ದಾರೆ. ಪ್ರಸಕ್ತ ಸೀಸನ್, ಡಿ ಕಾಕ್ 12 ಪಂದ್ಯಗಳಲ್ಲಿ 355 ರನ್ ಗಳಿಸಿದ್ದಾರೆ ಮತ್ತು ನಾಯಕ ಕೆಎಲ್ ರಾಹುಲ್ ಅವರೊಂದಿಗೆ ಎಲ್ಎಸ್ಜಿಗೆ ಉತ್ತಮ ಆರಂಭವನ್ನು ನೀಡಿದ್ದಾರೆ.

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News