IPL 2022: ಐಪಿಎಲ್ ನಲ್ಲಿ ಇನ್ಮುಂದೆ ಆಡುವ ಬಗ್ಗೆ ಧೋನಿ ಹೇಳಿದ್ದೇನು ಗೊತ್ತೇ?

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ರಲ್ಲಿ ಫ್ರಾಂಚೈಸಿಗಾಗಿ ಆಡುವ ವಿಚಾರವಾಗಿ ನಾನು ನಿರ್ಧರಿಸುತ್ತೇನೆ ಎಂದು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ನಾಯಕ ಎಂಎಸ್ ಧೋನಿ ಶನಿವಾರ ಹೇಳಿದ್ದಾರೆ.ಅಲ್ಲದೆ ಸಾಕಷ್ಟು ಸಮಯಾವಕಾಶ ಇರುವುದರಿಂದ ಅವಸರದಲ್ಲಿ ನಿರ್ಧಾರ ಕೈಗೊಳ್ಳುವ ಅಗತ್ಯವಿಲ್ಲ ಎಂದರು.

Written by - Zee Kannada News Desk | Last Updated : Nov 20, 2021, 06:06 PM IST
  • ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ರಲ್ಲಿ ಫ್ರಾಂಚೈಸಿಗೆ ಆಡುವ ವಿಚಾರವಾಗಿ ನಾನು ನಿರ್ಧರಿಸುತ್ತೇನೆ ಎಂದು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ನಾಯಕ ಎಂಎಸ್ ಧೋನಿ ಶನಿವಾರ ಹೇಳಿದ್ದಾರೆ.ಅಲ್ಲದೆ ಸಾಕಷ್ಟು ಸಮಯಾವಕಾಶ ಇರುವುದರಿಂದ ಅವಸರದಲ್ಲಿ ನಿರ್ಧಾರ ಕೈಗೊಳ್ಳುವ ಅಗತ್ಯವಿಲ್ಲ ಎಂದರು.
 IPL 2022: ಐಪಿಎಲ್ ನಲ್ಲಿ ಇನ್ಮುಂದೆ ಆಡುವ ಬಗ್ಗೆ ಧೋನಿ ಹೇಳಿದ್ದೇನು ಗೊತ್ತೇ? title=
file photo

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ರಲ್ಲಿ ಫ್ರಾಂಚೈಸಿಗೆ ಆಡುವ ವಿಚಾರವಾಗಿ ನಾನು ನಿರ್ಧರಿಸುತ್ತೇನೆ ಎಂದು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ನಾಯಕ ಎಂಎಸ್ ಧೋನಿ ಶನಿವಾರ ಹೇಳಿದ್ದಾರೆ.ಅಲ್ಲದೆ ಸಾಕಷ್ಟು ಸಮಯಾವಕಾಶ ಇರುವುದರಿಂದ ಅವಸರದಲ್ಲಿ ನಿರ್ಧಾರ ಕೈಗೊಳ್ಳುವ ಅಗತ್ಯವಿಲ್ಲ ಎಂದರು.

ಇದನ್ನೂ ಓದಿ: ದೇಶದ ಸ್ವಚ್ಛ ರಾಜ್ಯ, ಸ್ವಚ್ಛ ನಗರಿ ಯಾವುದು ಗೊತ್ತೇ?

"ನಾನು ಅದರ ಬಗ್ಗೆ ಯೋಚಿಸುತ್ತೇನೆ, ಸಾಕಷ್ಟು ಸಮಯವಿದೆ, ಇದೀಗ ನಾವು ನವೆಂಬರ್‌ನಲ್ಲಿದ್ದೇವೆ. ಐಪಿಎಲ್ 2022 ಅನ್ನು ಏಪ್ರಿಲ್‌ನಲ್ಲಿ ಆಡಲಾಗುವುದು" ಎಂದು ಧೋನಿ ಚೆನ್ನೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದರು.ಇದಕ್ಕೂ ಮೊದಲು, ಐಪಿಎಲ್ 2021 ಅನ್ನು ಗೆದ್ದ ನಂತರ, ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ನಾಯಕ ಎಂಎಸ್ ಧೋನಿ ಮುಂದಿನ ವರ್ಷದ ಪಂದ್ಯಾವಳಿಯಲ್ಲಿ ಭಾಗವಹಿಸುವ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.

ಇದನ್ನೂ ಓದಿ: ಗ್ಯಾಸ್ ಕನೆಕ್ಷನ್ ನಿಯಮದಲ್ಲಿ ಬದಲಾವಣೆ, ಸಬ್ಸಿಡಿಗೆ ಸಂಬಂಧಿಸಿದ ಹೊಸ ರೂಲ್ಸ್ ತಿಳಿಯಿರಿ

IPL 2022 ಕ್ಕೆ ಎರಡು ಹೊಸ ತಂಡಗಳು ಬರಲಿವೆ -- ಅಹಮದಾಬಾದ್ ಮತ್ತು ಲಕ್ನೋ. ಆದಾಗ್ಯೂ, ಧೋನಿ ಅವರು ಇನ್ನೂ ತಮ್ಮ ಪರಂಪರೆಯನ್ನು ಬಿಟ್ಟಿಲ್ಲ ಎಂದು ಸೂಚಿಸಿದರು, ಅವರು ಮುಂದಿನ ಋತುವಿನಲ್ಲಿ ಚೆನ್ನೈ ಪರವಾಗಿ ಆಡಬಹುದು ಎನ್ನುವ ಸುಳಿವು ನೀಡಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

 

Trending News