David Warner : ಎಲ್ಲರನ್ನೂ ಹಿಂದಿಕ್ಕಿ ದಾಖಲೆ ಬರೆದ ವಾರ್ನರ್ : ಪಟ್ಟಿಯಲ್ಲಿ ಸ್ಥಾನ ಪಡೆದ ರೋಹಿತ್! 

ಬುಧವಾರ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧ ವಾರ್ನರ್ ದಾಖಲೆಯೊಂದನ್ನು ಮಾಡಿದ್ದಾರೆ. ಈ ದಾಖಲೆಯಿಂದ ವಾರ್ನರ್ ವಿರಾಟ್ ಕೊಹ್ಲಿಯಂತಹ ಅನುಭವಿ ಬ್ಯಾಟ್ಸ್‌ಮನ್‌ಗಳನ್ನು ಸಹ ಹಿಂದಿಕ್ಕಿದ್ದಾರೆ. 

Written by - Channabasava A Kashinakunti | Last Updated : Apr 21, 2022, 01:41 PM IST
  • ವಾರ್ನರ್ ಹೆಸರಿನಲ್ಲಿ ದೊಡ್ಡ ದಾಖಲೆ
  • ರೋಹಿತ್‌ ಹಿಂದಿಕ್ಕಿದ ವಾರ್ನರ್
  • ಮೂರನೇ ಜಯ ದಾಖಲಿಸಿದ ಡೆಲ್ಲಿ ಕ್ಯಾಪಿಟಲ್ಸ್
David Warner : ಎಲ್ಲರನ್ನೂ ಹಿಂದಿಕ್ಕಿ ದಾಖಲೆ ಬರೆದ ವಾರ್ನರ್ : ಪಟ್ಟಿಯಲ್ಲಿ ಸ್ಥಾನ ಪಡೆದ ರೋಹಿತ್!  title=

David Warner Record : ಆಸ್ಟ್ರೇಲಿಯಾದ ಬಲಿಷ್ಠ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಹೆಸರು ವಿಶ್ವ ಕ್ರಿಕೆಟ್‌ನಲ್ಲಿ ಅಗ್ರಸ್ಥಾನದಲ್ಲಿದೆ. ಹಾಗೆ, ಐಪಿಎಲ್‌ನಲ್ಲೂ ವಾರ್ನರ್ ಹೆಸರು ಮುಂಚೂಣಿಯಲ್ಲಿದೆ. ಭಾರತದ ಯಾವ ಬ್ಯಾಟ್ಸ್‌ಮನ್‌ಗಳಿಂದಲೂ ಸಾಧ್ಯವಾಗದ ಹಲವು ದಾಖಲೆಗಳನ್ನು ವಾರ್ನರ್ ಮಾಡಿದ್ದಾರೆ. ಸಧ್ಯ ವಾರ್ನರ್ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಆಡುತ್ತಿದ್ದಾರೆ. ಬುಧವಾರ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧ ವಾರ್ನರ್ ದಾಖಲೆಯೊಂದನ್ನು ಮಾಡಿದ್ದಾರೆ. ಈ ದಾಖಲೆಯಿಂದ ವಾರ್ನರ್ ವಿರಾಟ್ ಕೊಹ್ಲಿಯಂತಹ ಅನುಭವಿ ಬ್ಯಾಟ್ಸ್‌ಮನ್‌ಗಳನ್ನು ಸಹ ಹಿಂದಿಕ್ಕಿದ್ದಾರೆ. 

ವಾರ್ನರ್ ಹೆಸರಿನಲ್ಲಿ ದೊಡ್ಡ ದಾಖಲೆ

ಡೆಲ್ಲಿ ಕ್ಯಾಪಿಟಲ್ಸ್ ಪರ, ವಾರ್ನರ್ ಬುಧವಾರ ಪಂಜಾಬ್ ಕಿಂಗ್ಸ್ ವಿರುದ್ಧ ಉತ್ತಮ ಇನ್ನಿಂಗ್ಸ್ ಆಡಿದರು. ವಾರ್ನರ್ ನಿನ್ನೆ 30 ಬಾಲ್ ಗೆ 60 ರನ್ ಗಳಿಸಿದ್ದಾರೆ. ಈ ಇನ್ನಿಂಗ್ಸ್‌ನೊಂದಿಗೆ, ವಾರ್ನರ್ ಐಪಿಎಲ್‌ನಲ್ಲಿ 1000 ರನ್ ಗಳಿಸಿದ ಎರಡನೇ ಬ್ಯಾಟ್ಸ್‌ಮನ್ ಆಗಿ ಹೊರಹೊಮ್ಮಿದ್ದಾರೆ. ವಾರ್ನರ್ ಈಗ ಪಂಜಾಬ್ ವಿರುದ್ಧ 22 ಪಂದ್ಯಗಳಲ್ಲಿ 1005 ರನ್ ಗಳಿಸಿದ್ದಾರೆ.

ಇದನ್ನೂ ಓದಿ : Kieron Pollard:ವೆಸ್ಟ್ ಇಂಡೀಸ್ ದಿಗ್ಗಜ ಪೊಲಾರ್ಡ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ

ರೋಹಿತ್‌ ಹಿಂದಿಕ್ಕಿದ ವಾರ್ನರ್

ಈ ದಾಖಲೆ ಮೂಲಕ ಡೇವಿಡ್ ವಾರ್ನರ್, ರೋಹಿತ್ ಶರ್ಮಾ ಅವರನ್ನು ಸರಿಗಟ್ಟಿದ್ದಾರೆ. ವಾರ್ನರ್ ಮೊದಲು, ರೋಹಿತ್ ಶರ್ಮಾ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 1000 ರನ್ ಪೂರೈಸಿದ್ದರು. ರೋಹಿತ್ ಇದುವರೆಗೆ ಕೆಕೆಆರ್ ವಿರುದ್ಧ 1018 ರನ್ ಗಳಿಸಿದ್ದಾರೆ. ಈ ಪಟ್ಟಿಯಲ್ಲಿ ವಾರ್ನರ್ ಮೂರನೇ ಸ್ಥಾನದಲ್ಲಿದ್ದಾರೆ, ವಾರ್ನರ್ ಕೆಕೆಆರ್ ವಿರುದ್ಧ ಮಾತ್ರ 976 ರನ್ ಗಳಿಸಿದ್ದಾರೆ. ಅಲ್ಲದೆ, ವಿರಾಟ್ ಕೊಹ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ, ಅವರು ಇಲ್ಲಿಯವರೆಗೆ CSK ವಿರುದ್ಧ 949 ರನ್ ಗಳಿಸಿದ್ದಾರೆ.

ದೆಹಲಿ ಮೂರನೇ ಜಯ ದಾಖಲಿಸಿತು

ಐಪಿಎಲ್ 2022 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮೂರನೇ ಜಯ ದಾಖಲಿಸಿದೆ. ಇದರಿಂದಾಗಿ ಡೆಲ್ಲಿ ಪ್ಲೇಆಫ್‌ಗೆ ಹೋಗುವ ನಿರೀಕ್ಷೆ ಇನ್ನೂ ಜೀವಂತವಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ಇಲ್ಲಿಯವರೆಗೆ ಒಮ್ಮೆಯೂ ಐಪಿಎಲ್ ಪ್ರಶಸ್ತಿ ಗೆದ್ದಿಲ್ಲ. ಈ ಬಾರಿ ಡೆಲ್ಲಿ ತಂಡ ಹಲವು ಮ್ಯಾಚ್ ವಿನ್ನರ್ ಆಟಗಾರರನ್ನು ಒಳಗೊಂಡಿದ್ದು, ಅವರು ಟೀಂ ಅನ್ನು ಪ್ರಶಸ್ತಿಯ ಹೊಸ್ತಿಲಿಗೆ ಕೊಂಡೊಯ್ಯಬಹುದು. ಪಂಜಾಬ್ ವಿರುದ್ಧ ಡೆಲ್ಲಿ ಆರಂಭಿಕ ಆಟಗಾರರಾದ ಪೃಥ್ವಿ ಶಾ ಮತ್ತು ಡೇವಿಡ್ ವಾರ್ನರ್ ಮೊದಲ ವಿಕೆಟ್‌ಗೆ 83 ರನ್‌ಗಳ ಜೊತೆಯಾಟ ನಡೆಸಿದರು.

ಇದನ್ನೂ ಓದಿ : DC vs PBKS, IPL 2022: ದೆಹಲಿ ಕ್ಯಾಪಿಟಲ್ಸ್ ಗೆ ಸುಲಭ ತುತ್ತಾದ ಪಂಜಾಬ್ ಕಿಂಗ್ಸ್

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News