RCB vs RR ಫೈನಲ್‌ ಮ್ಯಾಚ್ ಬಗ್ಗೆ ಆಘಾತಕಾರಿ ಹೇಳಿಕೆ ನೀಡಿದ ರವಿ ಶಾಸ್ತ್ರಿ

ಈ ನಡುವೆ ಭಾರತ ತಂಡದ ಮಾಜಿ ಕೋಚ್ ರವಿಶಾಸ್ತ್ರಿ ಈ ಪಂದ್ಯದ ಬಗ್ಗೆ ಆಘಾತಕಾರಿ ಹೇಳಿಕೆ ನೀಡಿದ್ದಾರೆ.

Written by - Channabasava A Kashinakunti | Last Updated : May 26, 2022, 07:36 PM IST
  • ಐಪಿಎಲ್‌ನ 15 ನೇ ಸೀಸನ್ ಈಗ ಅಂತಿಮ ಹಂತದಲ್ಲಿ ನಡೆಯುತ್ತಿದೆ
  • ಗೆಲ್ಲುವ ತಂಡ ಗುಜರಾತ್ ಟೈಟಾನ್ಸ್ ವಿರುದ್ಧ ಫೈನಲ್ ಆಡಲಿದೆ.
  • ಮಾಜಿ ಕೋಚ್ ರವಿಶಾಸ್ತ್ರಿ ಈ ಪಂದ್ಯದ ಬಗ್ಗೆ ಆಘಾತಕಾರಿ ಹೇಳಿಕೆ
RCB vs RR ಫೈನಲ್‌ ಮ್ಯಾಚ್ ಬಗ್ಗೆ ಆಘಾತಕಾರಿ ಹೇಳಿಕೆ ನೀಡಿದ ರವಿ ಶಾಸ್ತ್ರಿ title=

IPL 2022 Playoffs : ವಿಶ್ವದ ಅತಿದೊಡ್ಡ ಕ್ರಿಕೆಟ್ ಲೀಗ್ ಐಪಿಎಲ್‌ನ 15 ನೇ ಸೀಸನ್ ಈಗ ಅಂತಿಮ ಹಂತದಲ್ಲಿ ನಡೆಯುತ್ತಿದೆ. ಈಗ ಈ ಲೀಗ್‌ನಲ್ಲಿ ಇನ್ನು 2 ಪಂದ್ಯಗಳು ಮಾತ್ರ ಬಾಕಿ ಉಳಿದಿವೆ. ಐಪಿಎಲ್ 2022 ರ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಈಗ RCB ಅನ್ನು ಎದುರಿಸಲಿದೆ. ಗೆಲ್ಲುವ ತಂಡ ಗುಜರಾತ್ ಟೈಟಾನ್ಸ್ ವಿರುದ್ಧ ಫೈನಲ್ ಆಡಲಿದೆ. ಈ ನಡುವೆ ಭಾರತ ತಂಡದ ಮಾಜಿ ಕೋಚ್ ರವಿಶಾಸ್ತ್ರಿ ಈ ಪಂದ್ಯದ ಬಗ್ಗೆ ಆಘಾತಕಾರಿ ಹೇಳಿಕೆ ನೀಡಿದ್ದಾರೆ.

ಶಾಸ್ತ್ರಿ ನೀಡಿದ ಆಘಾತಕಾರಿ ಹೇಳಿಕೆ

ಈ ಕುರಿತು ಮಾತನಾಡಿದ ಟೀಂ ಇಂಡಿಯಾ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ, ಶುಕ್ರವಾರ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಐಪಿಎಲ್ 2022 ರ ಕ್ವಾಲಿಫೈಯರ್ 2 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ಭರ್ಜರಿ ಪೈಪೋಟಿ ನಡೆಯಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ, ಏಕೆಂದರೆ ಎರಡೂ ತಂಡಗಳು ಭಾನುವಾರ ಪ್ರಶಸ್ತಿ ಹಣಾಹಣಿಯಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಸೆಣಸಲಿವೆ. ಪಂದ್ಯವನ್ನು ಗೆಲ್ಲಲು, ಈ ಎರಡು ತಂಡಗಳ ನಡುವೆ ಕಠಿಣ ಪೈಪೋಟಿ ನಡೆಯಲಿದೆ ಎಂದು ಹೇಳಿದ್ದಾರೆ.

ಆರ್‌ಸಿಬಿ 14 ವರ್ಷಗಳ ಕಾಲ ಗೆದ್ದಿರಲಿಲ್ಲ

ಸ್ಟಾರ್ ಸ್ಪೋರ್ಟ್ಸ್‌ನ ಕ್ರಿಕೆಟ್ ಲೈವ್ ಶೋನಲ್ಲಿ ಮಾತನಾಡಿದ ಶಾಸ್ತ್ರಿ, 'ಆರ್‌ಸಿಬಿಗೆ 14 ವರ್ಷಗಳಿಂದ ಪ್ರಶಸ್ತಿ ಗೆಲ್ಲಲು ಹವಣಿಸುತ್ತಿದೆ. ಹಾಗೆ, 13 ವರ್ಷಗಳ ಹಿಂದೆ ರಾಜಸ್ಥಾನ ಐಪಿಎಲ್  ಪ್ರಶಸ್ತಿಯನ್ನು ಗೆದ್ದುಕೊಂಡಿತು. ಹೀಗಾಗಿ ಇಬ್ಬರ ನಡುವೆ ಭರ್ಜರಿ ಪೈಪೋಟಿ ನಡೆಯಲಿದೆ.

ಐಪಿಎಲ್ 2022 ರಲ್ಲಿ, ಬೆಂಗಳೂರು ಮತ್ತು ರಾಜಸ್ಥಾನ ಎರಡು ಟೀಂಗಳು ಉತ್ತಮ ಪ್ರದರ್ಶನ ನೀಡಿದ್ದು, ಈ ಭಾರಿ, ಬೆಂಗಳೂರು ಟ್ರೋಫಿ ಗೆಲ್ಲಲು ತುದಿಗಾಲಲ್ಲಿ ನಿಂತಿದೆ. 2008 ರಲ್ಲಿ ಮೊದಲ ಐಪಿಎಲ್ ಸೀಸನ್ ಗೆದ್ದಾಗಿನಿಂದ ರಾಜಸ್ಥಾನವು ಅದರ ಮೇಲೆ ಕಣ್ಣಿಟ್ಟಿದೆ.

ಒತ್ತಡಕ್ಕೆ ಸಿಲುಕಲಿದೆ ರಾಜಸ್ಥಾನ 

ಕ್ವಾಲಿಫೈಯರ್ 2 ಉತ್ತಮ ಸ್ಪರ್ಧೆಯಾಗಲಿದೆ ಎಂದು ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಗ್ರೇಮ್ ಸ್ಮಿತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಗುಜರಾತ್ ವಿರುದ್ಧದ ಕ್ವಾಲಿಫೈಯರ್ 1ರಲ್ಲಿ 7 ವಿಕೆಟ್‌ಗಳ ಸೋಲಿನ ನಂತರ ಪಂದ್ಯದಲ್ಲಿ ಮುನ್ನಡೆಯುತ್ತಿರುವಾಗ ಸಂಜು ಸ್ಯಾಮ್ಸನ್ ಅವರ ಮೇಲೆ ಒತ್ತಡವಿದೆ ಎಂದು ಸ್ಮಿತ್ ಹೇಳಿದ್ದಾರೆ. ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು 14 ರನ್ ಗಳಿಂದ ಸೋಲಿಸುವ ಮೂಲಕ ಬೆಂಗಳೂರು ಕ್ವಾಲಿಫೈ 2 ಪ್ರವೇಶಿಸಿದೆ.

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News