IPL 2021: ಈ ದಿನಾಂಕದಿಂದ UAEಯಲ್ಲಿ IPL ಆರಂಭ! ಫೈನಲ್ ಡೇಟ್ ಕೂಡ ಫಿಕ್ಸ್ !

IPL 2021 - ಕೊರೊನಾ ವೈರಸ್ ನ ಎರಡನೇ ಅಲೆಯ ಹಿನ್ನೆಲೆ ಈ ಬಾರಿಯ IPL 2021ನ್ನು ತಡೆಹಿಡಿಯಲಾಗಿತ್ತು. ಆದರೆ ಇದೀಗ ಈ ಟೂರ್ನಿ ಮತ್ತೆ ಆರಂಭವಾಗುತ್ತಿದೆ.

Written by - Nitin Tabib | Last Updated : May 25, 2021, 07:52 PM IST
  • IPL 2021 ಪುನರಾರಂಭದ ದಿನಾಂಕ ಪ್ರಕಟ.
  • ಸೆಪ್ಟೆಂಬರ್ 19 ರಿಂದ UAEನಲ್ಲಿ ನಡೆಯಲಿವೆ ಮುಂದಿನ ಪಂದ್ಯಗಳು.
  • ಅಕ್ಟೋಬರ್ 10 ರಂದು ಫೈನಲ್ ಪಂದ್ಯ.
IPL 2021: ಈ ದಿನಾಂಕದಿಂದ UAEಯಲ್ಲಿ IPL ಆರಂಭ! ಫೈನಲ್ ಡೇಟ್ ಕೂಡ ಫಿಕ್ಸ್ !    title=
IPL 2021 Restart(File Photo)

ನವದೆಹಲಿ: IPL 2021 - ಕೊರೊನಾ ವೈರಸ್ ನ ಎರಡನೇ ಅಲೆಯ ಹಿನ್ನೆಲೆ ಈ ಬಾರಿಯ IPL 2021 ನ್ನು (Indian Premier League)  ತಡೆಹಿಡಿಯಲಾಗಿತ್ತು. ಈ ಟೂರ್ನಿಯ ಅವಧಿಯಲ್ಲಿ ಬಯೋ ಬಬಲ್ ನಲ್ಲಿದ್ದ ಆಟಗಾರರು ನಿರಂತರವಾಗಿ ಕೊರೊನಾ ಸೋಂಕಿಗೆ ಗುರಿಯಾಗುತ್ತಿದ್ದರು. ಈ ಹಿನ್ನೆಲೆ ಟೂರ್ನಿಯಲ್ಲಿ ಅರ್ಧಕ್ಕೆ ನಿಲ್ಲಿಸುವ ದೊಡ್ಡ ನಿರ್ಣಯ ಕೈಗೊಳ್ಳಲಾಗಿತ್ತು. ಏತನ್ಮಧ್ಯೆ ಈ ಟೂರ್ನಿ ಮತ್ತೆ ಯಾವಾಗ ಆರಂಭಗೊಳ್ಳಲಿದೆ ಎಂಬ ಪ್ರಶ್ನೆಯೂ ಕೂಡ ಕೇಳಲಾಗುತ್ತಿತ್ತು.

ಈ ದಿನಾಂಕದಿಂದ (IPL 2021 Date) ಮತ್ತೆ ಆರಂಭವಾಗುತ್ತಿದೆ IPL 2021
ಮೇ 4 ರಂದು ಕೊರೊನಾ ಹಿನ್ನೆಲೆ ಸ್ಥಗಿತಗೊಂಡಿದ್ದ  IPL 2021 ಇದೀಗ ಸೆಪ್ಟೆಂಬರ್ ನಲ್ಲಿ ಮತ್ತೆ ಆರಂಭಗೊಳ್ಳುತ್ತಿದೆ ಹಾಗೂ ಇದರ ಫೈನಲ್ ಪಂದ್ಯ ಅಕ್ಟೋಬರ್ ತಿಂಗಳಿನಲ್ಲಿ ನಡೆಯಲಿದೆ. ಇಂಡಿಯಾ ಟುಡೇ ನಲ್ಲಿ ಪ್ರಕಟಗೊಂಡ ಒಂದು ವರದಿಯ ಪ್ರಕಾರ IPLನ ಉಳಿದ ಪಂದ್ಯಗಳು 19 ಅಥವಾ 20 ರಿಂದ UAEನಲ್ಲಿ ನಡೆಯಲಿವೆ. ಈ ದೊಡ್ಡ ಲೀಗ್ ನ ಫೈನಲ್ ಪಂದ್ಯ ಅಕ್ಟೋಬರ್ 10 ರಂದು ಆಯೋಜಿಸಲಾಗುತ್ತಿದೆ.

ಇದನ್ನೂ ಓದಿ-ಜಾಗತಿಕ ಕ್ರಿಕೆಟ್ ಗೆ ಭಾರತದ ಅಗತ್ಯವಿದೆ- ರಿಚರ್ಡ್ ಹ್ಯಾಡ್ಲಿ

ಇಂಗ್ಲೆಂಡ್ ವಿರುದ್ಧದ ಸರಣಿಯ ಬಳಿಕ IPL ಪುನರಾರಂಭ
ಇಂಡಿಯಾ ಟುಡೆ ವರದಿಯ ಪ್ರಕಾರ, ಇಂಗ್ಲೆಂಡ್ ವಿರುದ್ಧದ ಭಾರತದ ಸರಣಿ ಮುಗಿದ ನಂತರ BCCI, ಐಪಿಎಲ್ (IPL2021) ಅನ್ನು ಆಯೋಜಿಸುತ್ತದೆ. ಈ ಸರಣಿಯು 14 ರಂದು ಕೊನೆಗೊಳ್ಳಲಿದೆ. ಅದರ ನಂತರ ಎಲ್ಲಾ ಆಟಗಾರರು 15 ರವರೆಗೆ ಕ್ವಾರಂಟೀನ್ನಲ್ಲಿ ಉಳಿಯಲಿದ್ದಾರೆ. ಇಂಗ್ಲೆಂಡ್ ಮತ್ತು ಭಾರತದ 5 ಪಂದ್ಯಗಳ ಸರಣಿಯಲ್ಲಿ ಕೆಲವು ಬದಲಾವಣೆಗಳಾಗಬೇಕು ಎಂದು BCCI ಮತ್ತು ECB ನಡುವೆ ಮಾತುಕತೆ ನಡೆಯುತ್ತಿದೆ, ಆದರೆ ಎರಡು ಮಂಡಳಿಗಳೂ ಯಾವುದೇ ಅಧಿಕೃತ ಹೇಳಿಕೆಯನ್ನು ಇದುವರೆಗೆ ನೀಡಿಲ್ಲ.

ಇದನ್ನೂ ಓದಿ-Sushil Kumar : ರೆಸ್ಲರ್ ಸುಶೀಲ್ ಕುಮಾರ್ ಕೆಲಸದಿಂದ ಅಮಾನತು ಮಾಡಿದ ರೈಲ್ವೆ ಇಲಾಖೆ!

ಕೊರೊನಾಗೆ ಸೋತಿತ್ತು IPL 14
ದೇಶಾದ್ಯಂತ ಹೆಚ್ಚಾಗುತ್ತಿರುವ ಕರೋನಾ ವೈರಸ್ ಪ್ರಕೋಪದ ಹಿನ್ನೆಲೆ  ಐಪಿಎಲ್ 2021 (IPL 2021) ಅನ್ನು ಇದೇ  ತಿಂಗಳ 4 ನೆ ತಾರೀಖಿಗೆ ಮುಂದೂಡಲಾಗಿತ್ತು. ತಂಡಗಳ ಬಯೋ ಬಬಲ್ ನಲ್ಲಿ ಆಟಗಾರರು ಮತ್ತು ಸಿಬ್ಬಂದಿ ಸದಸ್ಯರು ಈ ಸಾಂಕ್ರಾಮಿಕ ರೋಗದ ಸೋಂಕಿಗೆ ನಿರಂತರವಾಗಿ ಒಳಗಾಗುತ್ತಿದ್ದರು. ಭಾರತದಲ್ಲಿಯೂ, ಕರೋನಾದಿಂದ ಬಳಲುತ್ತಿರುವವರ ಸಂಖ್ಯೆ 4 ಲಕ್ಷ ದಾಟಿದೆ, ಆದರೆ ಇದೆ ಮೊದಲ ಬಾರಿಗೆ ಪರಿಹಾರದ ಸುದ್ದಿಯೊಂದು ಪ್ರಕಟವಾಗಿದ್ದು, 40 ದಿನಗಳಲ್ಲಿ ಮೊದಲ ಬಾರಿಗೆ ದೇಶದಲ್ಲಿ 2 ಲಕ್ಷಕ್ಕಿಂತ ಕಡಿಮೆ ಕರೋನಾ ಪ್ರಕರಣಗಳು ವರದಿಯಾಗಿವೆ.

ಇದನ್ನೂ ಓದಿ- Virat-Anushka: ಚಿಕಿತ್ಸೆಗಾಗಿ 16 ಕೋಟಿ ಒದಗಿಸಿ ಮುಗ್ಧ ಮಗುವಿನ ಜೀವ ಉಳಿಸಿದ ವಿರುಷ್ಕಾ ದಂಪತಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News