IPL 2020 DC vs RR: ಗೆಲುವಿನ ನಂತರ ಅವರ ಬೌಲರ್‌ಗಳನ್ನು ಹೊಗಳಿದ ಶ್ರೇಯಸ್ ಅಯ್ಯರ್

ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ದೆಹಲಿ ಕ್ಯಾಪಿಟಲ್ಸ್ ಹ್ಯಾಟ್ರಿಕ್ ಗೆಲುವನ್ನು ಸಾಧಿಸಿದೆ. ದೆಹಲಿ ಕ್ಯಾಪಿಟಲ್ಸ್ 46 ರನ್‌ಗಳಿಂದ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮಣಿಸಿತು. ಶಾರ್ಜಾದ ಮೈದಾನವು ಚಿಕ್ಕದಾಗಿದೆ, ಆದ್ದರಿಂದ 200 ರನ್‌ಗಳ ಸ್ಕೋರ್ ಅನ್ನು ಇಲ್ಲಿ ಅಷ್ಟು ಸುರಕ್ಷಿತವೆಂದು ಪರಿಗಣಿಸಲಾಗಿಲ್ಲ, ಆದರೆ ದೆಹಲಿ ಕ್ಯಾಪಿಟಲ್ಸ್ 184 ರನ್ ಗಳಿಸಿ ಐಪಿಎಲ್‌ನಲ್ಲಿ ಅಸಾಧ್ಯವಾದುದು ಏನೂ ಇಲ್ಲ ಎಂದು ತೋರಿಸಿದೆ.

Last Updated : Oct 10, 2020, 07:45 AM IST
  • ಐಪಿಎಲ್‌ 2020ರಲ್ಲಿ ದೆಹಲಿ ಕ್ಯಾಪಿಟಲ್ಸ್ 5ನೇ ಗೆಲುವು
  • ಪಾಯಿಂಟ್ ಟೇಬಲ್‌ನಲ್ಲಿ ಅಗ್ರಸ್ಥಾನದಲ್ಲಿರುವ ದೆಹಲಿ
  • 'ಮ್ಯಾನ್ ಆಫ್ ದಿ ಮ್ಯಾಚ್' ರವಿಚಂದ್ರನ್ ಅಶ್ವಿನ್
IPL 2020 DC vs RR: ಗೆಲುವಿನ ನಂತರ ಅವರ ಬೌಲರ್‌ಗಳನ್ನು ಹೊಗಳಿದ ಶ್ರೇಯಸ್ ಅಯ್ಯರ್ title=
Pic Courtesy: BCCI/IPL

ಶಾರ್ಜಾ: ಐಪಿಎಲ್‌ನ 23ನೇ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್ ರಾಜಸ್ಥಾನ್ ರಾಯಲ್ಸ್ ತಂಡವನ್ನು 46 ರನ್‌ಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು.  ದೆಹಲಿ ಕ್ಯಾಪಿಟಲ್ಸ್ 46 ರನ್‌ಗಳಿಂದ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮಣಿಸಿತು.  ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ (Rajasthan Royals) ವಿರುದ್ಧ ಜಯಗಳಿಸಿದ ನಂತರ ದೆಹಲಿ ಕ್ಯಾಪಿಟಲ್ಸ್ (ಡಿಸಿ) ನಾಯಕ ಶ್ರೇಯಸ್ ಅಯ್ಯರ್ (Shreyas Iyer) 185 ರನ್‌ಗಳ ಗುರಿ ಕಡಿಮೆ ಇರುತ್ತದೆ ಎಂದು ಭಾವಿಸಿದ್ದೇನೆ. ಆದರೆ ಬೌಲರ್‌ಗಳು ಉತ್ತಮ ಕೆಲಸ ಮಾಡಿದ್ದಾರೆ ಎಂದರು.

ಶಿಮ್ರಾನ್ ಹೆಟ್‌ಮಿಯರ್ ಅವರ 45 ಮತ್ತು ಮಾರ್ಕಸ್ ಸ್ಟೋನಿಸ್ ಅವರ 39 ರ ಸಹಾಯದಿಂದ ದೆಹಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 184 ರನ್ ಗಳಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ ರಾಜಸ್ಥಾನ್ ರಾಯಲ್ಸ್ ತಂಡವನ್ನು 19.4 ಓವರ್‌ಗಳಲ್ಲಿ 138 ರನ್‌ಗಳಿಗೆ ಇಳಿಸಲಾಯಿತು.

MI vs RR: ರಾಜಸ್ಥಾನ್ ರಾಯಲ್ಸ್ ತಂಡದ ಹ್ಯಾಟ್ರಿಕ್ ಸೋಲಿಗೆ ಕಾರಣವಾದ ಅಂಶಗಳಿವು

ದೆಹಲಿ ಕ್ಯಾಪಿಟಲ್ಸ್ (Delhi Capitals) ಪರ ಕಗಿಸೊ ರಬಾಡಾ 3 ವಿಕೆಟ್ ಪಡೆದರೆ, ರವಿಚಂದ್ರನ್ ಅಶ್ವಿನ್ ಮತ್ತು ಮಾರ್ಕಸ್ ಸ್ಟೊಯಿನಿಸ್ ತಲಾ 2–2 ವಿಕೆಟ್ ಪಡೆದರು. ಶಾರ್ಜಾದ ಮೈದಾನವು ಚಿಕ್ಕದಾಗಿದೆ, ಆದ್ದರಿಂದ 200 ರನ್‌ಗಳ ಸ್ಕೋರ್ ಅನ್ನು ಇಲ್ಲಿ ಅಷ್ಟು ಸುರಕ್ಷಿತವೆಂದು ಪರಿಗಣಿಸಲಾಗುವುದಿಲ್ಲ. ಮೊದಲ ಇನ್ನಿಂಗ್ಸ್ ನಂತರ ನಾವು ಪ್ರದರ್ಶಿಸಿದ ರೀತಿಗೆ ನನಗೆ ತುಂಬಾ ಸಂತೋಷವಾಗಿದೆ. ಬಹುಶಃ ಸ್ಕೋರ್ ಸ್ವಲ್ಪ ಕಡಿಮೆಯಾಗಬಹುದು ಎಂದು ನಾವು ಭಾವಿಸಿದ್ದೆವು ಆದರೆ ಬೌಲರ್‌ಗಳು ತಮ್ಮ ಕೆಲಸವನ್ನು ಮಾಡಿದರು ಎಂದು ಪಂದ್ಯದ ನಂತರ ಅಯ್ಯರ್ ಅವರ ಬೌಲರ್‌ಗಳನ್ನು ಹೊಗಳಿದರು.

ವಿಕೆಟ್‌ಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ವಿಕೆಟ್ ನಮಗೆ ಸ್ವಲ್ಪ ಆಶ್ಚರ್ಯವನ್ನುಂಟು ಮಾಡಿತು. ಏಕೆಂದರೆ ಅದು ಇಬ್ಬನಿಯಿಂದ ಸ್ವಲ್ಪ ವೇಗವಾಗಿರುತ್ತದೆ ಎಂದು ನಾವು ಭಾವಿಸಿದ್ದೇವೆ. ಆದರೆ ತಂತ್ರಗಾರಿಕೆಯ ಪ್ರಕಾರ ಬೌಲರ್‌ಗಳು ತಮ್ಮ ಕೆಲಸವನ್ನು ಮಾಡಿದ ಬಗ್ಗೆ ನನಗೆ ನಿಜಕ್ಕೂ ಸಂತೋಷವಾಗಿದೆ. ನಮ್ಮನ್ನು ಚೆನ್ನಾಗಿ ಸಿದ್ಧಪಡಿಸಿದ ಸಹಾಯಕ ಸಿಬ್ಬಂದಿಯ ಬಗ್ಗೆಯೂ ನನಗೆ ಸಂತೋಷವಾಗಿದೆ ಎಂದು ಶ್ರೇಯಸ್ ಅಯ್ಯರ್ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

Watch video: ಅಶ್ವಿನ್ ಆರನ್ ಫಿಂಚ್‌ಗೆ ಬೆದರಿಕೆ ಹಾಕಿದ್ದನ್ನು ಕಂಡು ರಿಂಕಿ ಪಾಂಟಿಂಗ್‌ಗೂ ನಗು ತಡೆಯಲಾಗಲಿಲ್ಲ!

ಇದು 6 ಪಂದ್ಯಗಳಲ್ಲಿ ದೆಹಲಿ ಕ್ಯಾಪಿಟಲ್ಸ್‌ನ ಐದನೇ ಗೆಲುವು, ಇದು ತಂಡವನ್ನು 10 ಅಂಕಗಳೊಂದಿಗೆ ಪಾಯಿಂಟ್ ಟೇಬಲ್‌ನಲ್ಲಿ ಅಗ್ರಸ್ಥಾನಕ್ಕೆ ಕೊಂಡೊಯ್ದಿತು. ಆದರೆ ಈ ಲಯದಲ್ಲಿ ತಂಡ ಮುಂದುವರಿಯಬೇಕೆಂದು ಬಯಸುವುದಾಗಿ ತಿಳಿಸಿದ ಅಯ್ಯರ್, ನಾವು ನಮ್ಮ ಮನೋಭಾವದಲ್ಲಿ ಸ್ಥಿರವಾಗಿರಬೇಕು. ನಮ್ಮ ಆಲೋಚನೆ ಹೀಗಿರಬೇಕು, ನಾವು ಯಾವುದನ್ನೂ ಲಘುವಾಗಿ ತೆಗೆದುಕೊಳ್ಳಬಾರದು ಎಂದು ಅಯ್ಯರ್ ತಮ್ಮ ತಂಡಕ್ಕೆ ಸಲಹೆ ನೀಡಿದ್ದಾರೆ.

Trending News