ಟೀಂ ಇಂಡಿಯಾಕ್ಕೆ ಧೋನಿಯಂತಹ ಕ್ಯಾಪ್ಟನ್! ರೋಹಿತ್ ಅಲ್ಲ, ಈ ಯುವ ಆಟಗಾರ ಮುಂದಿನ ನಾಯಕ?

ಎಂ.ಎಸ್.ಧೋನಿಯಂತೆ ರಿಷಭ್ ಪಂತ್ ಕೂಡ ರಿವ್ಯೂ ತೆಗೆದುಕೊಳ್ಳುವಲ್ಲಿ ಪ್ರವೀಣರಾಗಿದ್ದಾರೆ, ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಪಂತ್ ಹಲವು ಬಾರಿ ನಾಯಕ ಕೊಹ್ಲಿಯನ್ನು ರಿವ್ಯೂ ತೆಗೆದುಕೊಳ್ಳುವಂತೆ ಮನವೊಲಿಸಿದ್ದರು.

Written by - Puttaraj K Alur | Last Updated : Oct 3, 2021, 10:05 AM IST
  • ವಿರಾಟ್ ಕೊಹ್ಲಿ ಬಳಿಕ ಯಾರಾಗಲಿದ್ದಾರೆ ಟೀಂ ಇಂಡಿಯಾದ ನೂತನ ಕ್ಯಾಪ್ಟನ್..?
  • ಅದ್ಭುತ ನಾಯಕತ್ವ ಗುಣಗಳಿಂದ ಗಮನ ಸಳೆದಿರುವ ಯುವ ಆಟಗಾರ ರಿಷಭ್ ಪಂತ್
  • ರೋಹಿತ್ ಶರ್ಮಾ ಬಿಟ್ಟರೆ ಭಾರತ ತಂಡದ ನಾಯಕನಾಗುವ ಸಾಮರ್ಥ್ಯ ಹೊಂದಿರುವ ರಿಷಭ್ ಪಂತ್
ಟೀಂ ಇಂಡಿಯಾಕ್ಕೆ ಧೋನಿಯಂತಹ ಕ್ಯಾಪ್ಟನ್! ರೋಹಿತ್ ಅಲ್ಲ, ಈ ಯುವ ಆಟಗಾರ ಮುಂದಿನ ನಾಯಕ? title=
ಟೀಂ ಇಂಡಿಯಾ ಕ್ಯಾಪ್ಟನ್ ಆಗ್ತಾರಾ ರಿಷಭ್ ಪಂತ್? (Photo Courtesy:@Zee News)

ನವದೆಹಲಿ: ಯುಎಇ ಮತ್ತು ಒಮಾನ್‌ನಲ್ಲಿ ಅಕ್ಟೋಬರ್ 17 ರಿಂದ 2021ರ ಐಸಿಸಿ ಟಿ-20 ವಿಶ್ವಕಪ್(ICC Men's T20 World Cup 2021) ಆರಂಭವಾಗಲಿದೆ. ರನ್ ಮಷಿನ್ ಖ್ಯಾತಿಯ ವಿರಾಟ್ ಕೊಹ್ಲಿ ಕೊನೆಯ ಬಾರಿಗೆ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಟಿ-20 ವಿಶ್ವಕಪ್ ಬಳಿಕ ನಾಯಕತ್ವ ಸ್ಥಾನದಿಂದ ಕೆಳಗಿಳಿಯುವುದಾಗಿ ಕೊಹ್ಲಿ ಈಗಾಗಲೇ ಘೋಷಿಸಿದ್ದಾರೆ. ಆದ್ದರಿಂದ ಈ ಪಂದ್ಯಾವಳಿ ತುಂಬಾ ಮಹತ್ವ ಪಡೆದುಕೊಂಡಿದೆ. ಒಂದು ವೇಳೆ ಟೀಂ ಇಂಡಿಯಾ ಈ ವರ್ಷ ಟಿ-20 ವಿಶ್ವಕಪ್ ಗೆಲ್ಲುವಲ್ಲಿ ವಿಫಲವಾದರೆ, ಕೊಹ್ಲಿ ಸೀಮಿತ ಓವರ್‌ಗಳ ನಾಯಕತ್ವದಿಂದಲೂ ಹೊರಗುಳಿಯಬಹುದು. ಅವರ ಸ್ಥಾನಕ್ಕೆ ಸದ್ಯ ರೋಹಿತ್ ಶರ್ಮಾ ಸೇರಿ ಕೆಲ ಆಟಗಾರರ ಹೆಸರು ಕೇಳಿಬರುತ್ತಿದೆ.

ಭಾರತ ತಂಡಕ್ಕೆ ಹೊಸ ನಾಯಕನಾಗಲು ಹಿಟ್ ಮ್ಯಾನ್(Rohit Sharma) ಅವರೇ ಅತಿದೊಡ್ಡ ಸ್ಪರ್ಧಿಯಾಗಿದ್ದಾರೆ. ಆದರೆ ಟೀಂ ಇಂಡಿಯಾಗೆ ನೂತನ ನಾಯಕನಾಗುವ ಸಂಪೂರ್ಣ ಸಾಮರ್ಥ್ಯವನ್ನು ಹೊಂದಿರುವ ಮತ್ತೊಬ್ಬ ಆಟಗಾರ ತಂಡದಲ್ಲಿದ್ದಾರೆ. ಹೀಗಾಗಿ ವಿರಾಟ್ ಕೊಹ್ಲಿ ನಂತರ ಭಾರತ ತಂಡದ ನಾಯಕ(Team India Captain) ಯಾರಾಗಬಹುದು ಎಂಬುದು ಭಾರೀ ಕುತೂಹಲ ಕೆರಳಿಸಿದೆ.

ಇದನ್ನೂ ಓದಿ: T20 World Cup 2021 : ಈ ಭಾರಿ ಟೀಂ ಇಂಡಿಯಾ ಗೆಲ್ಲುತ್ತೆ T20 ವಿಶ್ವಕಪ್ : ರೋಹಿತ್ ಶರ್ಮಾ

ಈ ಯುವ ಆಟಗಾರ ಟೀಂ ಇಂಡಿಯಾದ ನಾಯಕನಾಗಬಹುದು

ಟೀಂ ಇಂಡಿಯಾದ ಯುವ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಭ್ ಪಂತ್(Rishabh Pant) ಕೂಡ ನೂತನ ನಾಯಕನಾಗುವ ಸಂಪೂರ್ಣ ಸಾಮರ್ಥ್ಯ ಹೊಂದಿದ್ದಾರೆ. ಪಂತ್ ಅನೇಕ ಬಾರಿ ತಮ್ಮ ಅದ್ಭುತ ಆಟದ ಪ್ರದರ್ಶನದ ಮೂಲಕ ಪ್ರತಿಯೊಬ್ಬರ ಗಮನ ಸೆಳೆದಿದ್ದಾರೆ. ಆಯ್ಕೆಗಾರರು ಮಾಜಿ ನಾಯಕ ಎಂ.ಎಸ್.ಧೋನಿಯಂತೆ ಪಂತ್ ಅವರನ್ನು ಪರಿಗಣಿಸಬಹುದು ಎನ್ನಲಾಗುತ್ತಿದೆ. ಪಂತ್ ಕೂಡ ಧೋನಿಯಂತೆ ಪ್ರಸ್ತುತ ವಿಕೆಟ್ ಕೀಪರ್ ಆಗಿದ್ದಾರೆ. ಅವರು ವಿಕೆಟ್ ಕೀಪರ್ ಬ್ಯಾಟ್ಸಮನ್ ಆಗಿ ಸಾಕಷ್ಟು ಅನುಭವ ಕೂಡ ಹೊಂದಿದ್ದಾರೆ.   

ಪಂತ್ ಐಪಿಎಲ್‌ನಲ್ಲಿ ಯಶಸ್ವಿ ನಾಯಕ

2021ರ ಐಪಿಎಲ್ ಟೂರ್ನಿ(IPL 2021)ಯ ಮೊದಲಾರ್ಧದಲ್ಲಿ ಶ್ರೇಯಸ್ ಅಯ್ಯರ್ ಬದಲು ರಿಷಭ್ ಪಂತ್ ಅತ್ಯುತ್ತಮ ರೀತಿಯಲ್ಲಿ ದೆಹಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಿದರು. ಸದ್ಯ ದೆಹಲಿ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಈ ವರ್ಷ ಐಪಿಎಲ್ ಟ್ರೋಫಿ ಗೆಲ್ಲುವ ನೆಚ್ಚಿನ ತಂಡವಾಗಿದೆ. ಮೈದಾನದಲ್ಲಿ ಅನೇಕ ಬಾರಿ ಪಂತ್ ತುಂಬಾ ಚಟುವಟಿಕೆಯಿಂದ ಇರುವ ಮೂಲಕ ಗಮನ ಸೆಳೆದಿದ್ದಾರೆ. ಕೂಗುತ್ತಾ ಬೌಲರ್‌ಗಳಿಗೆ ಸರಿಯಾದ ದಿಕ್ಕಿನಲ್ಲಿ ಬೌಲಿಂಗ್ ಮಾಡಲು ಹೇಳುವುದು, ಸಹ ಆಟಗಾರರಿಗೆ ಉಪಯುಕ್ತ ಸಲಹೆ ನೀಡುವುದು, ಎದುರಾಳಿ ತಂಡವನ್ನು ಸೋಲಿಸಲು ತಂತ್ರ ರೂಪಿಸುವುದು ಹೀಗೆ ಪಂತ್ ಅತ್ಯಂತ ಚುರುಕುತನದಿಂದ ತಂಡವನ್ನು ಮುನ್ನೆಡೆಸುತ್ತಿದ್ದಾರೆ. ಮಾಜಿ ನಾಯಕ ಎಂ.ಎಸ್.ಧೋನಿ ಅವರ ತಂತ್ರಗಾರಿಕೆ ಪಂತ್ ಅಲ್ಲೂ ಕಂಡುಬರುತ್ತಿದೆ. ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪಂತ್ ತಮ್ಮ ಅದ್ಭುತ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದರು.

ಇದನ್ನೂ ಓದಿ: ಹೊಟ್ಟೆಪಾಡಿಗೆ ಪಾನಿಪೂರಿ ಮಾರುತ್ತಿದ್ದ ಹುಡುಗನ ಜೀವನವನ್ನೇ ಬದಲಿಸಿದ ಐಪಿಎಲ್..!

ರಿವ್ಯೂ ತೆಗೆದುಕೊಳ್ಳುವಲ್ಲಿ ಪಂತ್ ಕೂಡ ಪ್ರವೀಣ    

ಎಂಎಸ್‌ಡಿ ನಾಯಕತ್ವಕ್ಕೆ ದೇಶ-ವಿದೇಶದ ಆಟಗಾರರೇ ಮೆಚ್ಚುಗೆ ಸೂಚಿಸಿದ್ದಾರೆ. ಅವರ ತಂತ್ರಗಾರಿಕೆಯ ಭಾಗವಾಗಿ ‘ಧೋನಿ ರಿವ್ಯೂ ಸಿಸ್ಟಮ್‌’ ಎಂಬುದು ಕ್ರಿಕೆಟ್ ಅಂಗಳದಲ್ಲಿ ಖ್ಯಾತಿ ಪಡೆದುಕೊಂಡಿದೆ. ಅನೇಕ ಪಂದ್ಯಗಳಲ್ಲಿ ಧೋನಿ ರಿವ್ಯೂ ಸಿಸ್ಟಮ್‌ ಮುಂದೆ ಅಂಪೈರ್‌ಗಳ ನಿರ್ಧಾರಗಳೇ ತಪ್ಪು ಎಂಬುದು ಸಾಬೀತಾಗಿದೆ. ಎಂ.ಎಸ್.ಧೋನಿಯಂತೆ ರಿಷಭ್ ಪಂತ್ ಕೂಡ ರಿವ್ಯೂ ತೆಗೆದುಕೊಳ್ಳುವಲ್ಲಿ ಪ್ರವೀಣರಾಗಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಪಂತ್ ಹಲವು ಬಾರಿ ನಾಯಕ ಕೊಹ್ಲಿಯನ್ನು ರಿವ್ಯೂ ತೆಗೆದುಕೊಳ್ಳುವಂತೆ ಮನವೊಲಿಸಿದ್ದರು. ಈ ಪೈಕಿ ಬಹುತೇಕ ಸಕ್ಸಸ್ ಕೂಡ ಆಗಿದ್ದವು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News