ಟಿ20 ವಿಶ್ವಕಪ್ ತಂಡದಲ್ಲಿ ಟೀಂ ಇಂಡಿಯಾದ ಈ ಸ್ಟಾರ್‌ ಆಟಗಾರನಿಗೆ ಸ್ಥಾನ ಸಿಗಲ್ಲ!

ಇನ್ನು ಭಾರತ ತಂಡದ ಕಮಾಂಡ್ ರೋಹಿತ್ ಶರ್ಮಾ ಕೈಯಲ್ಲಿದೆ. ಆದರೆ ಟೀಂ ಇಂಡಿಯಾದ ಅಪಾಯಕಾರಿ ಆಟಗಾರನೊಬ್ಬ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಅನುಮಾನ ವ್ಯಕ್ತಪಡಿಸಿದ್ದಾರೆ. 

Written by - Bhavishya Shetty | Last Updated : Jul 3, 2022, 10:04 AM IST
  • ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಭಾಗಿಯಾಗಲಿದೆ
  • ಈ ಪಂದ್ಯದಲ್ಲಿ ಸ್ಟಾರ್‌ ಆಟಗಾರನಿಗೆ ಸ್ಥಾನ ಸಿಗಲ್ಲ
  • ಬಿಸಿಸಿಐ ಅಧಿಕಾರಿಯೊಬ್ಬರಿಂದ ಮಾಹಿತಿ
ಟಿ20 ವಿಶ್ವಕಪ್ ತಂಡದಲ್ಲಿ ಟೀಂ ಇಂಡಿಯಾದ ಈ ಸ್ಟಾರ್‌ ಆಟಗಾರನಿಗೆ ಸ್ಥಾನ ಸಿಗಲ್ಲ!  title=
ravichandran ashwin

ಈ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ತಂಡ ಸಹ ಭಾಗವಹಿಸಲಿದೆ. 2007 ರಲ್ಲಿ ಕ್ಯಾಪ್ಟನ್‌ ಕೂಲ್‌ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಭಾರತ ವಿಶ್ವಕಪ್‌ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. ಅದಾದ ಬಳಿಕ ಟೀಂ ಇಂಡಿಯಾ ಪ್ರಶಸ್ತಿ ಗೆದ್ದಿಲ್ಲ. ಹೀಗಾಗಿ ಈ ಬಾರಿ ನಡೆಯಲಿರುವ ಟಿ20 ವಿಶ್ವಕಪ್‌ ಪಂದ್ಯದಲ್ಲಿ ಭಾರತ ತಂಡವು ಭರ್ಜರಿ ಪ್ರದರ್ಶನ ನೀಡಿ ಗೆಲುವಿನ ಹಾರ ಹಾಕಿಕೊಳ್ಳುವ ನಿರೀಕ್ಷೆಯಲ್ಲಿದೆ. 

ಇದನ್ನೂ ಓದಿ: Vegetable Price: ಇಂದಿನ ತರಕಾರಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ವಿವರ

ಇನ್ನು ಭಾರತ ತಂಡದ ಕಮಾಂಡ್ ರೋಹಿತ್ ಶರ್ಮಾ ಕೈಯಲ್ಲಿದೆ. ಆದರೆ ಟೀಂ ಇಂಡಿಯಾದ ಅಪಾಯಕಾರಿ ಆಟಗಾರನೊಬ್ಬ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಆಟಗಾರ ತನ್ನ ಮಾಂತ್ರಿಕ ಬೌಲಿಂಗ್‌ನಲ್ಲಿ ಪರಿಣಿತನಾಗಿದ್ದಾನೆ. ಈ ಆಟಗಾರ 2021ರಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡದ ಭಾಗವಾಗಿದ್ದ. ಈಗ ಈತನಿಗೆ ಟಿ20 ಜಗತ್ತಿನಲ್ಲಿ ಆಡಲು ಸಾಧ್ಯವಾಗದ ಕಾರಣ, ಅವರು ತಮ್ಮ ವೃತ್ತಿಜೀವನಕ್ಕೆ ಕೊಂಚ ಬ್ರೇಕ್ ನೀಡಿದ್ದಾರೆ. ಅವರು ಬೇರೆ ಯಾರೂ ಅಲ್ಲ, ರವಿಚಂದ್ರನ್‌ ಅಶ್ವಿನ್‌. 

ಭಾರತದ ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಇಂಗ್ಲೆಂಡ್ ಪ್ರವಾಸದಲ್ಲಿದ್ದಾರೆ. ಆದರೆ ಭಾರತದ ಏಕದಿನ ಮತ್ತು ಟಿ20 ತಂಡದಲ್ಲಿ ಅವರು ಸ್ಥಾನ ಪಡೆದಿಲ್ಲ. ಮಹೇಂದ್ರ ಸಿಂಗ್ ಧೋನಿ ಟೀಂ ಇಂಡಿಯಾದ ನಾಯಕರಾಗಿದ್ದಾಗ, ಟೀಂ ಇಂಡಿಯಾದ ಬೌಲಿಂಗ್ ದಾಳಿಯಲ್ಲಿ ಅಶ್ವಿನ್ ಪ್ರಮುಖ ಪಾತ್ರವಹಿಸಿದ್ದರು. ಆದರೆ ನಂತರ ಅವರನ್ನು ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಆಯ್ಕೆದಾರರು ನಿರ್ಲಕ್ಷಿಸಿದ್ದರು. ಅನೇಕ ಯುವ ಆಟಗಾರರು ಟೀಮ್ ಇಂಡಿಯಾದಲ್ಲಿ ಅವರ ಸ್ಥಾನವನ್ನು ಕಬಳಿಸಿಕೊಂಡರು. ಯುಜ್ವೇಂದ್ರ ಚಹಾಲ್, ರವಿ ಬಿಷ್ಣೋಯ್ ಮತ್ತು ರಾಹುಲ್ ಚಹಾರ್ ಅವರಂತಹ ಬೌಲರ್‌ಗಳು ಟೀಂ ಇಂಡಿಯಾಕ್ಕೆ ಆಗಮಿಸಿದ್ದಾರೆ. 

ಇನ್‌ಸೈಡ್ ಸ್ಪೋರ್ಟ್ಸ್ ವರದಿ ಪ್ರಕಾರ, ತಂಡದಲ್ಲಿ ಎರಡನೇ ಸ್ಪಿನ್ನರ್‌ಗಾಗಿ ಸಾಕಷ್ಟು ಪೈಪೋಟಿ ಇದೆ. ನಾವು ರವಿಚಂದ್ರನ್‌ ಅಶ್ವಿನ್‌ಗಿಂತ ಬೇರೆ ಆಲ್‌ರೌಂಡರ್‌ಗಳನ್ನು ಹುಡುಕುತ್ತಿದ್ದೇವೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರವಿಚಂದ್ರನ್ ಅಶ್ವಿನ್ ಅವರಿಗಿಂತ ರವೀಂದ್ರ ಜಡೇಜಾ, ದೀಪಕ್ ಹೂಡಾ ಮತ್ತು ಇತರ ಸ್ಪಿನ್ನರ್‌ಗಳು ಉತ್ತಮ ಪ್ರದರ್ಶನ ನೀಡಿದ್ದಾರೆ. ಆದ್ದರಿಂದ ಅವರು ವೈಟ್-ಬಾಲ್ ಫಾರ್ಮ್ಯಾಟ್‌ಗಳ ಯೋಜನೆಯಲ್ಲಿಲ್ಲ. ರವಿಚಂದ್ರನ್ ಅಶ್ವಿನ್ ಬಹಳ ಸಮಯದಿಂದ ಕಳಪೆ ಫಾರ್ಮ್‌ನಲ್ಲಿ ಇದ್ದಾರೆ ಎಂದಿದ್ದಾರೆ. 

ರವಿಚಂದ್ರನ್ ಅಶ್ವಿನ್ ವಿಶ್ವದ ಅತ್ಯುತ್ತಮ ಸ್ಪಿನ್ನರ್ ಆಗಿರಬಹುದು. ಆದರೆ ಅವರು ತಮ್ಮ ನಿಧಾನಗತಿಯ ಬ್ಯಾಟಿಂಗ್‌ನಿಂದ ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಹಿಂದುಳಿದಿದ್ದಾರೆ. ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಅವರಂತೆ ಹಾರ್ಡ್ ಹಿಟ್ಟರ್ ಅಲ್ಲ. ಕೆಳ ಕ್ರಮಾಂಕದಲ್ಲಿ ಜಡೇಜಾ ಮತ್ತು ಪಟೇಲ್ ಸ್ಫೋಟಕ ಬ್ಯಾಟಿಂಗ್ ಮಾಡುತ್ತಾರೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ ತಂಡದಲ್ಲಿ ರವಿಚಂದ್ರನ್ ಅಶ್ವಿನ್ ಸಹ ಇದ್ದರು. ಅಲ್ಲಿ ಆಡಿದ 5 ಪಂದ್ಯಗಳಲ್ಲಿ 9 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಇನ್ಸೈಡ್ ಸ್ಪೋರ್ಟ್ಸ್ ಪ್ರಕಾರ, ರವಿಚಂದ್ರನ್ ಅಶ್ವಿನ್ ಟೆಸ್ಟ್‌ ಪಂದ್ಯಕ್ಕೆ ಸೂಕ್ತವಾಗಿದ್ದು, ಆ ಪಟ್ಟಿಯಲ್ಲಿ ಸೇರಿಸುವ ಯೋಜನೆಯಿದೆ ಎಂದು ಬಿಸಿಸಿಐ ಅಧಿಕಾರಿ ಹೇಳಿದ್ದಾರೆ. 

ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧ ಗೆಲ್ಲಬೇಕಾದ್ರೆ ಟೀಂ ಇಂಡಿಯಾ ಈ 2 ಕೆಲಸ ಮಾಡಲೇಬೇಕು!

ರವಿಚಂದ್ರನ್ ಅಶ್ವಿನ್ ಅವರು ಟೀಮ್ ಇಂಡಿಯಾಗಾಗಿ ಎಲ್ಲಾ ಮೂರು ಸ್ವರೂಪಗಳನ್ನು ಆಡಿದ್ದಾರೆ. ಅನೇಕ ಪಂದ್ಯಗಳಲ್ಲಿ ಟೀಂ ಇಂಡಿಯಾ ಗೆಲ್ಲಲು ಸ್ವಂತ ಪರಿಶ್ರಮ ಹಾಕಿದ್ದಾರೆ. ಅಶ್ವಿನ್ 86 ಟೆಸ್ಟ್ ಪಂದ್ಯಗಳಲ್ಲಿ 442 ವಿಕೆಟ್ ಪಡೆದಿದ್ದಾರೆ. ಜೊತೆಗೆ 112 ODIಗಳಲ್ಲಿ 151 ವಿಕೆಟ್‌ಗಳನ್ನು ಮತ್ತು 51 T20 ಪಂದ್ಯಗಳಲ್ಲಿ 61 ವಿಕೆಟ್‌ಗಳನ್ನು ಕಬಳಿಸಿದ್ದಾರೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News