20 ವರ್ಷಗಳ ಬಳಿಕ ಒಲಿಂಪಿಕ್ಸ್‌ನಲ್ಲಿ ಭಾರತೀಯ ಕುದುರೆ ಸವಾರಿ

Tokyo Olympic 2020:  20 ವರ್ಷಗಳಲ್ಲಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಮೊದಲ ಭಾರತೀಯ ಕುದುರೆ ಸವಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ ಈ ಆಟಗಾರ.

Last Updated : Jan 9, 2020, 11:34 AM IST
20 ವರ್ಷಗಳ ಬಳಿಕ ಒಲಿಂಪಿಕ್ಸ್‌ನಲ್ಲಿ ಭಾರತೀಯ ಕುದುರೆ ಸವಾರಿ title=

ನವದೆಹಲಿ: ಎರಡು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಒಲಿಂಪಿಕ್ ಕ್ರೀಡಾಕೂಟದಲ್ಲಿ ಒಬ್ಬ ಆಟಗಾರನು ಕುದುರೆ ಸವಾರಿಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಏಷ್ಯನ್ ಗೇಮ್ಸ್ ಬೆಳ್ಳಿ ಪದಕ ವಿಜೇತ ಫವಾದ್ ಮಿರ್ಜಾ ಟೋಕಿಯೊ ಒಲಿಂಪಿಕ್ಸ್ 2020 ರ ಸ್ಥಾನ ಪಡೆದಿದ್ದಾರೆ. ಅವರು 20 ವರ್ಷಗಳಲ್ಲಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಮೊದಲ ಭಾರತೀಯ ಕುದುರೆ ಸವಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಒಲಿಂಪಿಕ್ ಇಕ್ವೆಸ್ಟ್ರಿಯನ್‌ನಲ್ಲಿ ಭಾರತದ ಪರವಾಗಿ ಸ್ಥಾನ ಪಡೆದಿರುವುದು ಹೆಮ್ಮೆಯ ವಿಷಯ, ಇದು ನನಗೆ ಬಹಳ ಸಂತಸ ತಂದಿದೆ ಎಂದು ಫವಾದ್ ಮಿರ್ಜಾ ಹೇಳಿದ್ದಾರೆ. ಈ ಹಿಂದೆ ಅವರು ಏಷ್ಯನ್ ಕ್ರೀಡಾಕೂಟದಲ್ಲಿ 36 ವರ್ಷದ ಪದಕಗಳ ಬರವನ್ನು ಕೊನೆಗೊಳಿಸಿದ್ದರು.

ಫವಾದ್ ಮಿರ್ಜಾ ಕಳೆದ ವರ್ಷ ನವೆಂಬರ್‌ನಲ್ಲಿ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಆಡಲು ನಿರ್ಧರಿಸಲಾಗಿತ್ತು, ಆದರೆ ಅದನ್ನು ಅಧಿಕೃತವಾಗಿ ಘೋಷಿಸಲಾಗಿರಲಿಲ್ಲ. ಇದೀಗ ಅಂತಾರಾಷ್ಟ್ರೀಯ ಈಕ್ವಟೋರಿನ್ ಫೆಡರೇಶನ್ (ಎಫ್‌ಇಐ) ತನ್ನ ಶ್ರೇಯಾಂಕವನ್ನು ಬಿಡುಗಡೆ ಮಾಡಿದ್ದು, ಮಂಗಳವಾರ ಈ ಘೋಷಣೆ ಮಾಡಲಾಗಿದೆ. ಆಗ್ನೇಯ ಏಷ್ಯಾ-ಓಷಿಯಾನಿಯಾ ವಲಯದಲ್ಲಿ ಅತಿ ಹೆಚ್ಚು ಒಲಿಂಪಿಕ್ ಅರ್ಹತಾ ಅಂಕಗಳನ್ನು ಗಳಿಸಿದ ರೈಡರ್ ಆಗಿ ಫವಾದ್ ಹೊರಹೊಮ್ಮಿದರು.

ಫವಾದ್‌ಗೂ ಮೊದಲು, ಭಾರತದ ಇಬ್ಬರು ಅಶ್ವದಳದ ವಿಭಾಗದ ಕಮಾಂಡರ್‌ಗಳಾದ ಐಜೆ ಲಾಂಬಾ (1996) ಮತ್ತು ಇಮ್ತಿಯಾಜ್ ಅನೀಸ್ (2000) ಮಾತ್ರ ಈಕ್ವಟೋರಿಯನ್‌ನಲ್ಲಿ ಭಾರತಕ್ಕೆ ಒಲಿಂಪಿಕ್ ಕೋಟಾವನ್ನು ಪಡೆದಿದ್ದರು. ಇದೀಗ ಸ್ಥಾನ ಪಡೆದಿರುವ ಫವಾದ್ ಮಿರ್ಜಾ, 'ಈ ವರ್ಷ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಸ್ಥಾನ ಸಿಕ್ಕಿರುವುದು ನನಗೆ ಸಂತೋಷವಾಗಿದೆ. ಇದು ನನಗೆ ಹೆಮ್ಮೆಯ ವಿಷಯ. ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವುದು ಇಡೀ ಪ್ರಕ್ರಿಯೆಯ ಒಂದು ಭಾಗವಾಗಿದೆ' ಎಂದು ತಿಳಿಸಿದರು.

ದೇಶದ ಈ ಉದಯೋನ್ಮುಖ ಅಶ್ವಸೈನ್ಯವು ಏಷ್ಯನ್ ಕ್ರೀಡಾಕೂಟದಲ್ಲಿ ಸ್ಥಾನ ಪಡೆದ ನಂತರ ಒತ್ತಡ ಹೆಚ್ಚಾಗಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ 27 ವರ್ಷದ ಫವಾದ್, 'ಒಲಿಂಪಿಕ್ಸ್ ಪ್ರತಿಯೊಬ್ಬ ಆಟಗಾರನಿಗೂ ದೊಡ್ಡ ಪಂದ್ಯಾವಳಿ. ಖಂಡಿತವಾಗಿಯೂ ಒತ್ತಡ ಇರುತ್ತದೆ, ಆದರೆ ಒತ್ತಡವು ಒಳ್ಳೆಯದು ಎಂದು ನಾನು ಭಾವಿಸುತ್ತೇನೆ. ಅದು ನಿಮ್ಮನ್ನು ಕಷ್ಟಪಟ್ಟು ಕೆಲಸ ಮಾಡಲು ಉತ್ತೇಜಿಸುತ್ತದೆ. ಜೊತೆಗೆ ಗಮನ ಕೇಂದ್ರೀಕರಿಸಲು ಅನುವು ಮಾಡಿಕೊಡುತ್ತದೆ' ಎಂದರು.

ಒಲಿಂಪಿಕ್ಸ್‌ಗಾಗಿ ತಮ್ಮ ಸಿದ್ಧತೆಗಳೂ ವಿಭಿನ್ನವಾಗಿರುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಫವಾದ್, "ಹೌದು, ಸಿದ್ಧತೆಗಳಲ್ಲಿ ವ್ಯತ್ಯಾಸವಿರುತ್ತದೆ". ಒಲಿಂಪಿಕ್ ಕ್ರೀಡಾಕೂಟವು ಏಷ್ಯನ್ ಕ್ರೀಡಾಕೂಟಕ್ಕಿಂತ ಎರಡು ಮೂರು ಹಂತದ ಹೆಚ್ಚಿನ ಪಂದ್ಯಾವಳಿ. ಇದು ತುಂಬಾ ಕಷ್ಟ. ಅದಕ್ಕಾಗಿಯೇ ನನ್ನೊಂದಿಗೆ ಕುದುರೆಗಳ ತಯಾರಿಕೆಯು ತುಂಬಾ ವಿಭಿನ್ನವಾಗಿರುತ್ತದೆ.  ಇದೀಗ ನಾವು ಚಳಿಗಾಲದ ಸಾಮಾನ್ಯ ತರಬೇತಿಯನ್ನು ಮಾಡುತ್ತಿದ್ದೇವೆ. ಕುದುರೆಗಳನ್ನು ವಾತಾವರಣಕ್ಕೆ ಹೊಂದುವಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ಜೊತೆಗೆ ನಮ್ಮ ಮೂಲ ಫಿಟ್‌ನೆಸ್ ಅನ್ನು ಬಲಪಡಿಸುತ್ತಿದ್ದೇನೆ. ಈ ಋತುವಿನ ಮಧ್ಯದಲ್ಲಿ ನಾವು ಕೆಲವು ಪ್ರದರ್ಶನಗಳನ್ನು ಮಾಡುತ್ತೇವೆ ಮತ್ತು ಅದರ ನಂತರ ನಾವು ಪ್ರತಿಯೊಂದು ವಿಭಿನ್ನ ಕುದುರೆಗಳಿಗೆ ಹೊಸ ಕಾರ್ಯಕ್ರಮವನ್ನು ಮಾಡುತ್ತೇವೆ. ಪ್ರತಿ ಕುದುರೆಯು ಅದರ ಉತ್ತಮ ಸ್ಥಿತಿಯಲ್ಲಿರುವುದು ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸಲಿದೆ' ಎಂದು ಭರವಸೆ ನೀಡಿದರು.

Trending News