Indian Cricket Legends: ಟೀಂ ಇಂಡಿಯಾದ ಮಾಜಿ ಆಲ್ ರೌಂಡರ್ ಯುವರಾಜ್ ಸಿಂಗ್, ದಿಗ್ಗಜ ಸ್ಪಿನ್ನರ್ ಹರ್ಭಜನ್ ಸಿಂಗ್ ಹಾಗೂ ಮಾಜಿ ಬ್ಯಾಟ್ಸ್ ಮನ್ ಸುರೇಶ್ ರೈನಾ ಸಂಕಷ್ಟಕ್ಕೆ ಸಿಲುಕಿದ್ದಾರೆ. ವರ್ಲ್ಡ್ ಚಾಂಪಿಯನ್ಶಿಪ್ ಆಫ್ ಲೆಜೆಂಡ್ಸ್ 2024 ಪ್ರಶಸ್ತಿಯನ್ನು ಗೆದ್ದ ಜೋಶ್ನಲ್ಲಿ ಈ ಮೂವರು ಮಾಡಿದ ವೀಡಿಯೊದ ಬಗ್ಗೆ ಅಂಗವಿಕಲರು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಇಡೀ ರಾಷ್ಟ್ರದಿಂದ ವೀರರೆಂದು ಪರಿಗಣಿಸಲ್ಪಟ್ಟ ಜನರು ಈ ರೀತಿ ಕೆಳಮಟ್ಟಕ್ಕೆ ಇಳಿಯುತ್ತಾರೆಯೇ? ಎಂದು ಕಾಮೆಂಟ್ ಮಾಡುವ ತಮ್ಮ ಕೋಪ ಹೊರಹಾಕುತ್ತಿದ್ದಾರೆ.
ಸದ್ಯ ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ವರ್ಲ್ಡ್ ಚಾಂಪಿಯನ್ಶಿಪ್ ಆಫ್ ಲೆಜೆಂಡ್ಸ್ 2024 ಪ್ರಶಸ್ತಿಯನ್ನು ಗೆದ್ದ ನಂತರ, ಯುವರಾಜ್ ಸಿಂಗ್, ಹರ್ಭಜನ್ ಸಿಂಗ್ ಹಾಗೂ ಸುರೇಶ್ ರೈನಾ, ಬಾಲಿವುಡ್ ಚಲನಚಿತ್ರ 'ಬ್ಯಾಡ್ ನ್ಯೂಸ್' ನಿಂದ ತೌಬಾ ತೌಬಾ ಹುಕ್ ಹೆಜ್ಜೆಯನ್ನು ಅನುಕರಿಸುವ ರೀಲ್ ಮಾಡಿ ಹಂಚಿಕೊಂಡಿದ್ದರು. ಈ ವಿಡಿಯೋದಲ್ಲಿ ಸ್ಟಾರ್ ಆಟಗಾರರು ತಮ್ಮ ಸೊಂಟವನ್ನು ಹಿಡಿದುಕೊಂಡು ಕುಂಟುತ್ತಾ ನಡೆಯುತ್ತಿರುವುದು ಕಂಡುಬರುತ್ತದೆ.
ಇದನ್ನೂ ಓದಿ: ಪ್ಯಾರಿಸ್ ಒಲಿಂಪಿಕ್ಸ್ 2024: ಒಲಂಪಿಕ್ಸ್ ಕ್ರೀಡಾಪಟುಗಳಿಗೆ ಕೊಹ್ಲಿ ಖಡಕ್ ವಾರ್ನಿಂಗ್..!
ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.. '15 ದಿನಗಳ ಲೆಜೆಂಡ್ಸ್ ಕ್ರಿಕೆಟ್ ನಂತರ ನಮ್ಮ ದೇಹವೂ ತೌಬಾ ತೌಬಾ ಆಗಿಬಿಟ್ಟಿದೆ. ದೇಹದ ಪ್ರತಿಯೊಂದು ಭಾಗವೂ ನೋವಿನಿಂದ ಕೂಡಿದೆ. ಇದು ನಮ್ಮ ಆವೃತ್ತಿಯ 'ತೌಬಾ ತೌಬಾ'ಎಂಬ ಕ್ಯಾಪ್ಷನ್ನೊಂದಿಗೆ ಈ ವಿಡಿಯೋವನ್ನು ಬಾಲಿವುಡ್ ನಟರಾದ ವಿಕ್ಕಿ ಕೌಶಲ್ ಮತ್ತು ಕರಣ್ ಟ್ಯಾಗ್ ಮಾಡಿ ಹಂಚಿಕೊಳ್ಳಲಾಗಿದೆ. ಇದೀಗ ಈ ವಿಡಿಯೋ ವೈರಲ್ ಆಗಿದೆ.
ಈ ಬಗ್ಗೆ ಅಭಿಮಾನಿಗಳು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರೆ, ಅಂಗವಿಕಲರ ಹಕ್ಕುಗಳ ಹೋರಾಟಗಾರರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಇದು ಅಂಗವಿಕಲರ ಭಾವನೆಗೆ ಧಕ್ಕೆ ತಂದಿದೆ ಎಂದು ಟೀಕಿಸುತ್ತಿದ್ದಾರೆ. ಇಡೀ ದೇಶದಿಂದ ವೀರರೆಂದು ಪರಿಗಣಿಸಲ್ಪಟ್ಟಿರುವ ಜನರು ಇಂತಹ ಅಗೌರವದ ವರ್ತನೆಯನ್ನು ತೋರಿರುವುದನ್ನು ನಾವು ಬಲವಾಗಿ ಖಂಡಿಸುತ್ತೇವೆ.
ಇದು ಅವರ ಅಧಃಪತನಕ್ಕೆ ಸಾಕ್ಷಿ. ಹಲವರಿಗೆ ಮಾದರಿಯಾಗಬೇಕಾದವರು ವಿಕಲಚೇತನರನ್ನು ಗೇಲಿ ಮಾಡುತ್ತಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ. ಬಿಸಿಸಿಐ ಈ ಬಗ್ಗೆ ಕ್ರಮ ಕೈಗೊಳ್ಳಬೇಕು' ಎಂದು ಅಂಗವಿಕಲರ ಉದ್ಯೋಗ ಪ್ರಚಾರಕ್ಕಾಗಿ ರಾಷ್ಟ್ರೀಯ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕ ಅರ್ಮಾನ್ ಅಲಿ ಆಗ್ರಹಿಸಿದ್ದಾರೆ.
Winning celebrations from Yuvraj Singh, Harbhajan and Raina. 🤣🔥 pic.twitter.com/mgrcnd8GpH
— Mufaddal Vohra (@mufaddal_vohra) July 14, 2024
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ