India vs Australia: 5 ಭಾರತೀಯ ಕ್ರಿಕೆಟ್ ತಾರೆಯರ ಸ್ಪೂರ್ತಿದಾಯಕ ಕಥನಗಳು

ನಾಲ್ಕು ಟೆಸ್ಟ್ ಪಂದ್ಯಗಳ ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ 2-1 ಅಂತರದಲ್ಲಿ ಗೆಲುವನ್ನು ಸಾಧಿಸುವ ಮೂಲಕ ಮಂಗಳವಾರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ನಲ್ಲಿ ಅಗ್ರಸ್ಥಾನಕ್ಕೇರಿತು. ಭಾರತವು ಈಗ ಶೇ 71.7 ಅಂಕಗಳನ್ನು ಮತ್ತು 430 ರಷ್ಟು ಅಂಕಗಳನ್ನು ಗಳಿಸಿದೆ.

Last Updated : Jan 19, 2021, 10:45 PM IST
  • ಈ ಸರಣಿಯಲ್ಲಿ ಹಲವಾರು ಹಿರಿಯ ಆಟಗಾರರರು ಗಾಯಗೊಂಡು ಹೊರಗೆ ಉಳಿದರು, ಆದಾಗ್ಯೂ ಕೂಡ ಭಾರತ ತಂಡದ ಕಿರಿಯ ಸದಸ್ಯರು ಧೃತಿಗೆಡದೆ ಸರಣಿಯಲ್ಲಿ ಅದ್ಬುತ ಪ್ರದರ್ಶನ ನೀಡಿದರು.
  • ಸರಣಿ ಗೆಲುವಿನ ನಂತರ ಯಂಗ್ ಇಂಡಿಯಾ ಇದನ್ನು ಮಾಡಿದೆ ಎಂದು ಸುನೀಲ್ ಗವಾಸ್ಕರ್ ಹೇಳಿದರು.
  • ಅಷ್ಟೇ ಅಲ್ಲದೆ ಇದನ್ನು ಅವರು ಭಾರತೀಯ ಕ್ರಿಕೆಟ್ ಗೆ ಮಾಂತ್ರಿಕ ಕ್ಷಣ ಎಂದು ಕರೆದರು.
India vs Australia: 5 ಭಾರತೀಯ ಕ್ರಿಕೆಟ್ ತಾರೆಯರ ಸ್ಪೂರ್ತಿದಾಯಕ ಕಥನಗಳು  title=
Photo Courtesy: Twitter

ನವದೆಹಲಿ: ನಾಲ್ಕು ಟೆಸ್ಟ್ ಪಂದ್ಯಗಳ ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ 2-1 ಅಂತರದಲ್ಲಿ ಗೆಲುವನ್ನು ಸಾಧಿಸುವ ಮೂಲಕ ಮಂಗಳವಾರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ನಲ್ಲಿ ಅಗ್ರಸ್ಥಾನಕ್ಕೇರಿತು. ಭಾರತವು ಈಗ ಶೇ 71.7 ಅಂಕಗಳನ್ನು ಮತ್ತು 430 ರಷ್ಟು ಅಂಕಗಳನ್ನು ಗಳಿಸಿದೆ.

ಈ ಸರಣಿಯಲ್ಲಿ ಹಲವಾರು ಹಿರಿಯ ಆಟಗಾರರರು ಗಾಯಗೊಂಡು ಹೊರಗೆ ಉಳಿದರು, ಆದಾಗ್ಯೂ ಕೂಡ ಭಾರತ ತಂಡದ ಕಿರಿಯ ಸದಸ್ಯರು ಧೃತಿಗೆಡದೆ ಸರಣಿಯಲ್ಲಿ ಅದ್ಬುತ ಪ್ರದರ್ಶನ ನೀಡಿದರು, ಸರಣಿ ಗೆಲುವಿನ ನಂತರ ಯಂಗ್ ಇಂಡಿಯಾ ಇದನ್ನು ಮಾಡಿದೆ ಎಂದು ಸುನೀಲ್ ಗವಾಸ್ಕರ್ ಹೇಳಿದರು. ಅಷ್ಟೇ ಅಲ್ಲದೆ ಇದನ್ನು ಅವರು ಭಾರತೀಯ ಕ್ರಿಕೆಟ್ ಗೆ ಮಾಂತ್ರಿಕ ಕ್ಷಣ ಎಂದು ಕರೆದರು.

ಇದನ್ನೂ ಓದಿ: India vs England 2021: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತದ ತಂಡ ಪ್ರಕಟ..!

ಈ ಸರಣಿಯಲ್ಲಿ ಕೆಲವು ಆಟಗಾರರು ಸ್ಟಾರ್ ಆಟಗಾರರಾಗಿ ಹೊರಹೊಮ್ಮಿದ್ದಾರೆ. ಇನ್ನೊಂದು ವಿಶೇಷವೆಂದರೆ ಈ ಕೆಲವು ಆಟಗಾರು ಆಟಗಾರರು ಸಣ್ಣ ನಗರದ ಹಿನ್ನಲೆಯಿಂದ ಬಂದಂತವರು, ಅಂತಹ ಯುವಕರಲ್ಲಿ ಪ್ರಮುಖವಾಗಿ ಸಿರಾಜ್ ಅಲಿ, ನವದೀಪ್ ಸೈನಿ, ಟಿ ನಟಾರ್ಜನ್, ಶಾರ್ದುಲ್ ಠಾಕೂರ್ ಮತ್ತು ವಾಷಿಂಗ್ಟನ್ ಸೈನಿ ಅವರು ಪ್ರಮುಖ ಆಟಗಾರರಾಗಿದ್ದಾರೆ.

ಇದನ್ನೂ ಓದಿ: Australia vs India: 'ಭಾರತ ತಂಡವನ್ನು ಎಂದೆಂದಿಗೂ ಲಘುವಾಗಿ ಪರಿಗಣಿಸಬೇಡಿ'

ಸಿರಾಜ್ ಮೊಹಮ್ಮದ್:

ರಾಷ್ಟ್ರಗೀತೆ ಸಂದರ್ಭದಲ್ಲಿ ಕಣ್ಣೀರು ಸುರಿಸುವ ಚಿತ್ರಗಳು ವೈರಲ್ ಆದಾಗ ಈ ಯುವ ಬೌಲರ್ ಸಾಕಷ್ಟು ಸುದ್ದಿಯಾದರು. ಕಾರಣ ಅವರು ಆಸ್ಟ್ರೇಲಿಯಾದ ಪ್ರವಾಸಕ್ಕೆ ಬಂದಂತಹ ಸಂದರ್ಭದಲ್ಲಿ ಆವರ ತಂದೆ ನಿಧನರಾಗಿದ್ದರು.ಅಟೋ ಚಾಲಕರಾಗಿ ಕೆಲಸ ಮಾಡುತ್ತಿದ್ದ ಅವರು ಮಗನ ಟೆಸ್ಟ್ ಪಾದಾರ್ಪಣೆಯನ್ನು ನೋಡುವ ಮೊದಲೇ ಅಕಾಲಿಕ ಮರಣವನ್ನು ಹೊಂದಿದ್ದರು. ಆರಂಭಿಕ ಟೆಸ್ಟ್ ಸರಣಿಯಲ್ಲಿಯೇ ಐದು ವಿಕೆಟ್ ಗಳನ್ನು ಕಬಳಿಸುವ ಮೂಲಕ ತಾವೊಬ್ಬ ಪರಿಪೂರ್ಣ ಬೌಲರ್ ಎನ್ನುವುದನ್ನು ಆರಂಭದಲ್ಲಿಯೇ ಸಾಬೀತುಪಡಿಸಿದರು.

ಇದನ್ನೂ ಓದಿ: ಐತಿಹಾಸಿಕ ಟೆಸ್ಟ್ ಗೆಲುವಿನ ನಂತರ ದ್ರಾವಿಡ್ ಗೆ ಮೆಚ್ಚುಗೆಯ ಸುರಿಮಳೆ ಗೈಯುತ್ತಿರುವುದೇಕೆ?

ನವದೀಪ್ ಸೈನಿ:

ಹರಿಯಾಣದ ಕರ್ನಾಲ್ ನಗರದಲ್ಲಿ ಜನಿಸಿದ ಸೈನಿ (navdeep saini)  ಒಬ್ಬ ವಿನಮ್ರ ಮಧ್ಯಮ ವರ್ಗದ ಸಿಖ್ ಕುಟುಂಬದಿಂದ ಬಂದವನು,ಅವರ ತಂದೆ ಹರಿಯಾಣ ಸರ್ಕಾರದಲ್ಲಿ ಚಾಲಕರಾಗಿದ್ದರು. ಅವರ ಅಜ್ಜ ಸ್ವಾತಂತ್ರ್ಯ ಹೋರಾಟಗಾರರಾಗಿ ಭಾರತೀಯ ರಾಷ್ಟ್ರೀಯ ಸೇನೆಯ ಭಾಗವಾಗಿದ್ದರು. ತನ್ನ ತಂದೆಯಿಂದ ಚೆಂಡನ್ನು ಕೇಳಿದಾಗ ಐದನೇ ವಯಸ್ಸಿನಲ್ಲಿ ಕ್ರಿಕೆಟ್ ಮೇಲಿನ ಅವರ ಪ್ರೀತಿ ಅರಳಿತು. ಅವರ ಕ್ರಿಕೆಟಿಂಗ್ ವೃತ್ತಿಜೀವನದ ಬಗ್ಗೆ ಅವರ ಕುಟುಂಬವು ಹೆಚ್ಚು ಆಸಕ್ತಿ ಹೊಂದಿಲ್ಲದಿದ್ದರೂ ಸಹ ಅವರು ತಮ್ಮ ಶಾಲಾ ದಿನಗಳಲ್ಲಿ ತಮ್ಮ ಜಿಲ್ಲೆಯ ಸ್ಥಳೀಯ ತಂಡಗಳಿಗಾಗಿ ಅನೇಕ ಕ್ರಿಕೆಟ್ ಪಂದ್ಯಾವಳಿಗಳನ್ನು ಆಡಿದ್ದರು.

ಇದನ್ನೂ ಓದಿ: Australia vs India: ಭಾರತ ತಂಡದ ಐತಿಹಾಸಿಕ ಟೆಸ್ಟ್ ಗೆಲುವಿಗೆ Memes ಗಳ ಸುರಿಮಳೆ

ಶಾರ್ದುಲ್ ಠಾಕೂರ್:

ಬೊಜ್ಜು ಹೊಂದಿದ್ದ ಯುವಕನು  ಒಮ್ಮೆ ಸರಿಯಾದ ವ್ಯಕ್ತಿಗಳಿಂದ ಮಾರ್ಗದರ್ಶನ ನೀಡದಿದ್ದಲ್ಲಿ ಫಿಟ್ನೆಸ್ ಪರೀಕ್ಷೆಯನ್ನು ಯಾವುದೇ ರೀತಿಯಲ್ಲಿ ಪಾಸ್ ಮಾಡುತ್ತಿರಲಿಲ್ಲ ಎಂದು ಹೇಳಿಕೊಂಡಿದ್ದರು.

'ನನ್ನ ಹಿರಿಯರು ನನಗೆ ಸಾಕಷ್ಟು ಸಹಾಯ ಮಾಡಿದರು.ಅಭಿಷೇಕ್ ನಾಯರ್, ರೋಹಿತ್ ಶರ್ಮಾ, ಜಹೀರ್ ಖಾನ್, ವಾಸಿಮ್ ಜಾಫರ್ ಮತ್ತು ಸಚಿನ್ ತೆಂಡೂಲ್ಕರ್. ನಾನು ಅವರ ಸಲಹೆಯನ್ನು ಪಡೆದಾಗಲೆಲ್ಲಾ ಅವರು ನನಗೆ ಕಾಲಕಾಲಕ್ಕೆ ಮಾರ್ಗದರ್ಶನ ನೀಡಿದರು"ಎಂದು ಠಾಕೂರ್ ಒಮ್ಮೆ ಸಂದರ್ಶನವೊಂದರಲ್ಲಿ ಹೇಳಿದರು.ಒಮ್ಮೆ ಅವರ ಫಿಟ್ನೆಸ್ ಟ್ರ್ಯಾಕ್ನಲ್ಲಿದ್ದಾಗ, ಅವರನ್ನು ಮುಂಬೈ ಇಂಡಿಯನ್ಸ್ ತಂಡವು ಆಯ್ಕೆ ಮಾಡಿತು ಮತ್ತು ಮೈದಾನದಲ್ಲಿ ಅವರ ಅತ್ಯುತ್ತಮ ಪ್ರದರ್ಶನವು ತಂಡ ಭಾರತದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಸಹಾಯ ಮಾಡಿತು.

ಇದನ್ನೂ ಓದಿ: Ind vs Aus: ಟೆಸ್ಟ್‌ ಗೆದ್ದ 'ಟೀಮ್‌ ಇಂಡಿಯಾಗೆ' ಬಿಸಿಸಿಐನಿಂದ ಭರ್ಜರಿ ಗಿಫ್ಟ್..!

ಟಿ ನಟರಾಜನ್:

ಬಡತನದ ವಿರುದ್ಧ ಹೋರಾಡುವಾಗ ತಮಿಳುನಾಡಿನ ಸೇಲಂ ಬಳಿಯ ಚಿನ್ನಪಂಪಟ್ಟಿ ಎಂಬ ಹಳ್ಳಿಯಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಆಡುವುದರಿಂದ ಹಿಡಿದು ಭಾರತದ 232 ನೇ ಏಕದಿನ ಅಂತಾರಾಷ್ಟ್ರೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2020 ರ ಡಿಸೆಂಬರ್‌ನಲ್ಲಿ ಕ್ಯಾನ್‌ಬೆರಾದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಪಂದ್ಯದಲ್ಲಿ ಭಾರತ ಏಕದಿನ ಪಂದ್ಯಕ್ಕೆ ಪದಾರ್ಪಣೆ ಮಾಡಿದರು. ಅವರ ತಂದೆ ತಂಗರಾಸು ಎಲೆಕ್ಟ್ರಿಕ್ ಕೆಲಸಗಾರ ಮತ್ತು ತಾಯಿ ಶಾಂತಾ ಅವರು ರಸ್ತೆಯ ಪಕ್ಕದ ಅಂಗಡಿಯೊಂದನ್ನು ನಡೆಸುತ್ತಿದ್ದರು.

ಇದನ್ನೂ ಓದಿ: Ind vs Aus, Test Series: ಐತಿಹಾಸಿಕ ವಿಜಯದೊಂದಿಗೆ ದಾಖಲೆ ನಿರ್ಮಿಸಿದ ಭಾರತ

ವಾಷಿಂಗ್ಟನ್ ಸುಂದರ್:

ಕೆಲವು ವರ್ಷಗಳ ಹಿಂದೆ ಐಪಿಎಲ್ ಪರ ಆಡಿದಾಗಿನಿಂದ ಅವರ ಹೆಸರು ಸಾಕಷ್ಟು ಗಮನ ಸೆಳೆಯಿತು. ಅವರ ತಂದೆಯ ಕ್ರಿಕೆಟ್‌ನಲ್ಲಿನ ಆಸಕ್ತಿಯನ್ನು ಪಿಡಿ ವಾಷಿಂಗ್ಟನ್ ಎಂಬ ನೆರೆಯ ಮನೆಯವರು ಮೆಚ್ಚಿದರು, ಅವರು ಅವನಿಗೆ ಸಮವಸ್ತ್ರವನ್ನು ಖರೀದಿಸುತ್ತಿದ್ದರು, ಶುಲ್ಕವನ್ನು ಪಾವತಿಸುತ್ತಿದ್ದರು ಮತ್ತು ಅವನಿಗೆ ಸಾಧ್ಯವಿರುವ ಪ್ರತಿಯೊಂದು ಸಣ್ಣ ಮಾರ್ಗವನ್ನೂ ಪ್ರೋತ್ಸಾಹಿಸಿದರು.ಇವರಿಬ್ಬರು ಪ್ರೀತಿಯ ಬಂಧವನ್ನು ಹೊಂದಿದ್ದರು ಮತ್ತು ವಾಷಿಂಗ್ಟನ್ ನಿಧನರಾದಾಗ, ಸುಂದರ್ ಅವರ ತಂದೆ ತನ್ನ ಮಗನಿಗೆ ಅವರ ಹೆಸರನ್ನು ಇಡಲು ನಿರ್ಧರಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News