Team India: ಈ ಸ್ಟಾರ್ ಆಟಗಾರನ ವೃತ್ತಿಜೀವನ ಬಹುತೇಕ ಅಂತ್ಯ..!

ಭಾರತ vs ಆಸ್ಟ್ರೇಲಿಯಾ: ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಟೀಂ ಇಂಡಿಯಾದ ಸ್ಟಾರ್ ವೇಗದ ಬೌಲರ್‌ಗೆ ಆಯ್ಕೆಗಾರರು ಅವಕಾಶ ನೀಡಿಲ್ಲ. ಈ ಆಟಗಾರ ಬಹಳ ದಿನಗಳಿಂದ ಟೀಂ ಇಂಡಿಯಾದಿಂದ ಹೊರಗುಳಿದಿದ್ದಾರೆ.

Written by - Puttaraj K Alur | Last Updated : Jan 14, 2023, 02:40 PM IST
  • ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಸ್ಟಾರ್ ವೇಗದ ಬೌಲರ್‍ಗೆ ಸಿಗದ ಅವಕಾಶ
  • ಭಾರತದ ಅನುಭವಿ ವೇಗದ ಬೌಲರ್ ಇಶಾಂತ್ ಶರ್ಮಾ ವೃತ್ತಿಜೀವನ ಬಹುತೇಕ ಅಂತ್ಯ?
  • ಯುವ ಆಟಗಾರರಿಗೆ ಅವಕಾಶ ನೀಡಿರುವ ಆಯ್ಕೆಗಾರರಿಂದ ಇಶಾಂತ್ ಶರ್ಮಾ ನಿರ್ಲಕ್ಷ್ಯ
Team India: ಈ ಸ್ಟಾರ್ ಆಟಗಾರನ ವೃತ್ತಿಜೀವನ ಬಹುತೇಕ ಅಂತ್ಯ..! title=
ಇಶಾಂತ್ ಶರ್ಮಾ ವೃತ್ತಿಜೀವನ ಅಂತ್ಯ?

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಮೊದಲ 2 ಟೆಸ್ಟ್ ಪಂದ್ಯಗಳಿಗೆ ಭಾರತ ತಂಡವನ್ನು ಆಯ್ಕೆಗಾರರು ಪ್ರಕಟಿಸಿದ್ದಾರೆ. ಇಶಾನ್ ಕಿಶನ್ ಮತ್ತು ಸೂರ್ಯಕುಮಾರ್ ಯಾದವ್ ಟೆಸ್ಟ್ ಸರಣಿಯಲ್ಲಿ ಅವಕಾಶ ಪಡೆದಿದ್ದಾರೆ. ಆಸ್ಟ್ರೇಲಿಯಾದ 4 ಟೆಸ್ಟ್‌ಗಳ ಸರಣಿಯು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಭಾಗವಾಗಿದೆ. ಈ ಪಂದ್ಯಗಳನ್ನು ಗೆಲ್ಲುವ ಮೂಲಕ ಟೀಂ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಅರ್ಹತೆ ಪಡೆಯಲು ಉತ್ಸುಕವಾಗಿದೆ. ಆದರೆ ಆಯ್ಕೆದಾರರು ಟೆಸ್ಟ್ ಪಂದ್ಯಗಳಲ್ಲಿ ಸ್ಟಾರ್ ಆಟಗಾರನೊಬ್ಬನಿಗೆ ಅವಕಾಶ ನೀಡಿಲ್ಲ. ಹೀಗಾಗಿ ಈ ಆಟಗಾರನ ವೃತ್ತಿಜೀವನವು ಅಪಾಯದ ಹಂತದಲ್ಲಿದೆ.   

ಈ ಆಟಗಾರನಿಗೆ ಸಿಗದ ಅವಕಾಶ!

ಭಾರತದ ಅನುಭವಿ ವೇಗದ ಬೌಲರ್ ಇಶಾಂತ್ ಶರ್ಮಾರನ್ನು ಟೆಸ್ಟ್ ಸರಣಿಗೆ ಆಯ್ಕೆಗಾರರು ಪರಿಗಣಿಸಿಲ್ಲ. ಜಸ್ಪ್ರೀತ್ ಬುಮ್ರಾ ಗಾಯದ ಕಾರಣ ತಂಡದಿಂದ ಹೊರಗುಳಿಯುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಇಶಾಂತ್ ವೇಗದ ಬೌಲಿಂಗ್ ವಿಭಾಗಕ್ಕೆ ಶಕ್ತಿ ತುಂಬಬಹುದಿತ್ತು. ಶರ್ಮಾ 2021ರಲ್ಲಿ ನ್ಯೂಜಿಲೆಂಡ್ ವಿರುದ್ಧ ತಮ್ಮ ಕೊನೆಯ ಟೆಸ್ಟ್ ಪಂದ್ಯ ಆಡಿದ್ದರು. ಅಂದಿನಿಂದ ಅವರು ತಂಡದಿಂದ ನಿರಂತರವಾಗಿ ಹೊರಗುಳಿಯುತ್ತಿದ್ದಾರೆ.

ಇದನ್ನೂ ಓದಿ: IND vs NZ: ಕೊನೆಗೊಂಡಿತು ಟೀಂ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ಕಂ ಬ್ಯಾಟ್ಸ್ ಮನ್ ಕ್ರಿಕೆಟ್ ಜೀವನ!

ಯುವ ಆಟಗಾರರಿಗೆ ಅವಕಾಶ  

ಇಶಾಂತ್ ಶರ್ಮಾ ಅವರಿಗೆ 34 ವರ್ಷ. ಇಂತಹ ಪರಿಸ್ಥಿತಿಯಲ್ಲಿ ಅವರ ವಯಸ್ಸಿನ ಪ್ರಭಾವವು ವೃತ್ತಿ ಜೀವನದ ಮೇಲೂ ಗೋಚರಿಸಿದೆ. ಕೆಟ್ಟ ಫಾರ್ಮ್‌ನೊಂದಿಗೆ ಹೋರಾಡುತ್ತಿದ್ದ ಅವರ ಸ್ಥಾನದಲ್ಲಿ ಯುವ ವೇಗಿಗಳಾದ ಉಮೇಶ್ ಯಾದವ್ ಮತ್ತು ಮೊಹಮ್ಮದ್ ಸಿರಾಜ್‍ಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ಇದೀಗ ಅವರು ಟೀಂ ಇಂಡಿಯಾಗೆ ಮರಳುವುದು ತುಂಬಾ ಕಷ್ಟಕರವಾಗಿದೆ. ಶರ್ಮಾ ಈಗಾಗಲೇ ಏಕದಿನ ಮತ್ತು ಟಿ-20 ಮಾದರಿಯ ಕ್ರಿಕೆಟ್‍ನಿಂದ ಹೊರಗುಳಿದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಸ್ವದೇಶಿ ಸರಣಿಯಲ್ಲಿ ಅವರನ್ನು ಆಯ್ಕೆ ಮಾಡಲಾಗಿಲ್ಲ. ಅವರಿಗೆ ಟೀಂ ಇಂಡಿಯಾದ ಬಾಗಿಲು ಬಹುತೇಕ ಮುಚ್ಚಿದೆ ಎಂಬುದು ಆಯ್ಕೆಗಾರರ ​​ಸ್ಪಷ್ಟ ಸೂಚನೆಯಾಗಿದೆ. 

ಎಲ್ಲಾ ಮಾದರಿಗಳಲ್ಲಿ ಆಡಿರುವ ಶರ್ಮಾ

ಇಶಾಂತ್ ಶರ್ಮಾ ಭಾರತದ ಪರ ಎಲ್ಲಾ 3 ಮಾದರಿಗಳಲ್ಲಿ ಕ್ರಿಕೆಟ್ ಆಡಿದ್ದಾರೆ. ಭಾರತದ ಪರ 105 ಟೆಸ್ಟ್ ಪಂದ್ಯಗಳಲ್ಲಿ 311 ವಿಕೆಟ್, 80 ಏಕದಿನ ಪಂದ್ಯಗಳಲ್ಲಿ 115 ವಿಕೆಟ್ ಮತ್ತು 14 ಟಿ-20 ಪಂದ್ಯಗಳಲ್ಲಿ 8 ವಿಕೆಟ್ ಪಡೆದಿದ್ದಾರೆ. ಅವರು 2007ರಲ್ಲಿ ಬಾಂಗ್ಲಾದೇಶದ ವಿರುದ್ಧ ಪದಾರ್ಪಣೆ ಮಾಡಿದರು. ಇದಾದ ಬಳಿಕ ಆಸ್ಟ್ರೇಲಿಯಾ ವಿರುದ್ಧ ಉತ್ತಮ ಪ್ರದರ್ಶನ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು.  

ಇದನ್ನೂ ಓದಿ: IND vs AUS: ಟೀಂ ಇಂಡಿಯಾಗೆ ಮತ್ತೆ ಟೆನ್ಷನ್: ಈ ಸ್ಟಾರ್ ಬೌಲರ್ ಆಸ್ಟ್ರೇಲಿಯಾ ಸರಣಿಯಿಂದ ಹೊರಗುಳಿಯುವ ಸಾಧ್ಯತೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News