ವಿಶ್ವಕಪ್ ಕ್ರಿಕೆಟ್ 2019: ಜೂನ್ 5 ರಂದು ಹರಿಣಗಳ ಜೊತೆ ಭಾರತದ ಮೊದಲ ಪಂದ್ಯ

   

Last Updated : Apr 24, 2018, 11:56 PM IST
ವಿಶ್ವಕಪ್ ಕ್ರಿಕೆಟ್ 2019: ಜೂನ್ 5 ರಂದು ಹರಿಣಗಳ ಜೊತೆ ಭಾರತದ ಮೊದಲ ಪಂದ್ಯ  title=

ಕೊಲ್ಕತ್ತಾ: ಜೂನ್ 5 ರಂದು ದಕ್ಷಿಣ ಆಫ್ರಿಕಾ ವಿರುದ್ಧ 2019 ರ ವಿಶ್ವಕಪ್ ಅಭಿಯಾನವನ್ನು ಭಾರತ ಆರಂಭಿಸಲಿದೆ. ಜೂನ್ 16 ರಂದು ಪಾಕಿಸ್ತಾನದ ವಿರುದ್ಧ ಸೆಣಸಲಿದೆ ಎಂದು ಬಿಸಿಸಿಐ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

2019 ರ ವಿಶ್ವಕಪ್  ಕ್ರಿಕೆಟ್ ಟೂರ್ನಿಯು ಮೇ 30 ರಿಂದ ಜುಲೈ 14 ರ ವರೆಗೆ ನಡೆಯಲಿದೆ. ಭಾರತದ ಆರಂಭಿಕ ಪಂದ್ಯವು  ಜೂನ್ 5 ರಂದು ನಡೆಯಲಿದೆ. ಲೋದಾ ಸಮಿತಿ ಶಿಫಾರಸ್ಸಿನ  ಪ್ರಕಾರ ಐಪಿಎಲ್ ಫೈನಲ್ ಮತ್ತು ಅಂತರರಾಷ್ಟ್ರೀಯ ಪಂದ್ಯಗಳ ನಡುವೆ ಕಡ್ಡಾಯವಾಗಿ 15 ದಿನಗಳ ಅಂತರವನ್ನು ಕಾಯ್ದುಕೊಳ್ಳಬೇಕು ಎನ್ನುವ ವಿಚಾರಗಳ ಕುರಿತಾಗಿ ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಸಭೆಯಲ್ಲಿ ಈ ವಿಷಯವನ್ನು ಚರ್ಚಿಸಲಾಗಿದೆ ಎನ್ನಲಾಗಿದೆ. 

2019 ರ ಮಾರ್ಚ್ 29 ರಿಂದ ಮೇ 19 ರ ನಡುವೆ 2019 ರ ಐಪಿಎಲ್ ನಡೆಯಲಿದೆ. ಆದರೆ 15 ದಿನಗಳ ಅಂತರದ ಅಂತರವನ್ನು ಕಾಪಾಡಿಕೊಳ್ಳಬೇಕಾಗಿರುವುದರಿಂದ ಮೇ 30ಕ್ಕೆ ವಿಶ್ವಕಪ್ ಆರಂಭವಾಗಲಿದೆ.  15 ದಿನಗಳ ಅಂತರವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ  ಜೂನ್ 5 ರಂದು ಮಾತ್ರ ಆಡಬಹುದಾಗಿದೆ. ಈ ಮೊದಲಿಗೆ ನಾವು ಜೂನ್ 2 ರಂದು ಎಂದು ನಿರ್ಧರಿಸಲಾಗಿತ್ತು  ಆದರೆ ಆ ದಿನವನ್ನು ಅಂತಿಮ ಗೊಳಿಸಲಿಲ್ಲ ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

Trending News