ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಏಕೈಕ ಆಟಗಾರ ವಿರಾಟ್ ಕೊಹ್ಲಿ

ಬಾರ್ಸಿಲೋನಾ ಮತ್ತು ಅರ್ಜಂಟೀನಾ ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಈ ಪಟ್ಟಿಯಲ್ಲಿದ್ದಾರೆ.  

Last Updated : Jun 12, 2019, 12:42 PM IST
ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಏಕೈಕ ಆಟಗಾರ ವಿರಾಟ್ ಕೊಹ್ಲಿ title=
Pic Courtesy: ANI(Filed image)

ನವದೆಹಲಿ: ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಏಕೈಕ ಆಟಗಾರರಾಗಿದ್ದಾರೆ. ಅವರ ಒಟ್ಟು ವಾರ್ಷಿಕ ಆದಾಯವು 2.5 ಮಿಲಿಯನ್ ಡಾಲರ್ ಆಗಿದೆ. 

ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಏಕೈಕ ಭಾರತೀಯ ಕೊಹ್ಲಿ 17 ಸ್ಥಾನ ಕುಸಿದಿದ್ದು 100 ನೇ ಸ್ಥಾನದಲ್ಲಿದ್ದಾರೆ. ಬಾರ್ಸಿಲೋನಾ ಮತ್ತು ಅರ್ಜಂಟೀನಾ ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಈ ಪಟ್ಟಿಯಲ್ಲಿದ್ದಾರೆ.

ಮಂಗಳವಾರ ಬಿಡುಗಡೆಯಾದ ಫೋರ್ಬ್ಸ್ ಪಟ್ಟಿ ಪ್ರಕಾರ, ಕೊಹ್ಲಿ ಜಾಹೀರಾತುಗಳಿಂದ $ 2.1 ಮಿಲಿಯನ್ ವೇತನ ಮತ್ತು ಗೆಲುವಿನಿಂದ ಗಳಿಸಿದ ಮೊತ್ತವು $ 4 ದಶಲಕ್ಷದಷ್ಟು ಆದಾಯ ಪಡೆದಿದ್ದಾರೆ. ಕಳೆದ 12 ತಿಂಗಳಲ್ಲಿ ಅವರ ಒಟ್ಟು ಗಳಿಕೆ $ 2.5 ಮಿಲಿಯನ್.

ಕಳೆದ ವರ್ಷ ಕೊಹ್ಲಿ ಈ ಪಟ್ಟಿಯಲ್ಲಿ 83 ನೇ ಸ್ಥಾನ ಪಡೆದಿದ್ದರು. ಆದರೆ ಈ ವರ್ಷ ಅವರು 100 ನೇ ಸ್ಥಾನಕ್ಕೆ ಇಳಿದಿದ್ದಾರೆ. ಆದಾಗ್ಯೂ, ಜಾಹೀರಾತಿನಿಂದ ಅವರ ಗಳಿಕೆಯು $ 1 ಮಿಲಿಯನ್ ಹೆಚ್ಚಾಗಿದೆ.
 

Trending News