ಅರ್ಧಕ್ಕೆ ನಿಂತ ಭಾರತ-ಆಸ್ಟ್ರೇಲಿಯಾ ಅಡಿಲೇಡ್ ಟೆಸ್ಟ್ ! ಈ ವಿಚಿತ್ರ ಕಾರಣದಿಂದ ಆಟಕ್ಕೆ ಅಡ್ಡಿ

India vs Australia Floodlight Failure: ದಿನದ ಮೂರನೇ ಸೆಷನ್‌ನಲ್ಲಿ ಆತಿಥೇಯ ತಂಡ ಬ್ಯಾಟಿಂಗ್ ಮಾಡುತ್ತಿದ್ದಂತೆಯೇ  ಪಂದ್ಯವನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ.

Written by - Ranjitha R K | Last Updated : Dec 6, 2024, 05:24 PM IST
  • ಪಂದ್ಯ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಎರಡನೇ ಟೆಸ್ಟ್
  • ಭಾರತ ತಂಡದ ಇನ್ನಿಂಗ್ಸ್ 180 ರನ್ ಗಳಿಗೆ ಅಂತ್ಯ
  • ಹತಾಶರಾಗಿ ಕಂಡು ಬಂದ ಹರ್ಷಿತ್ ರಾಣಾ
ಅರ್ಧಕ್ಕೆ ನಿಂತ ಭಾರತ-ಆಸ್ಟ್ರೇಲಿಯಾ ಅಡಿಲೇಡ್ ಟೆಸ್ಟ್ ! ಈ ವಿಚಿತ್ರ ಕಾರಣದಿಂದ ಆಟಕ್ಕೆ ಅಡ್ಡಿ  title=

India vs Australia Floodlight Failure : ಬಾರ್ಡರ್ ಗವಾಸ್ಕರ್ ಟ್ರೋಫಿಯ ಎರಡನೇ ಟೆಸ್ಟ್ ಪಂದ್ಯ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಅಡಿಲೇಡ್‌ನಲ್ಲಿ ನಡೆಯುತ್ತಿದೆ.ಈ ಡೇ-ನೈಟ್ ಪಿಂಕ್ ಬಾಲ್ ಟೆಸ್ಟ್ ಪಂದ್ಯದ ಮೊದಲ ದಿನ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಭಾರತ ತಂಡದ ಇನ್ನಿಂಗ್ಸ್ 180 ರನ್ ಗಳಿಗೆ ಅಂತ್ಯಗೊಂಡಿದೆ. ನಿತೀಶ್ ರೆಡ್ಡಿ ಅತ್ಯಧಿಕ 42 ರನ್ ಗಳಿಸಿದರು. ಆಸ್ಟ್ರೇಲಿಯಾದ ಸ್ಟಾರ್ ವೇಗಿ ಮಿಚೆಲ್ ಸ್ಟಾರ್ಕ್  6 ವಿಕೆಟ್ ಕಬಳಿಸುವ ಮೂಲಕ ಟೀಂ ಇಂಡಿಯಾದ ಬ್ಯಾಟಿಂಗ್ ವೇಗಕ್ಕೆ ಬ್ರೇಕ್ ಹಾಕಿದರು.  ದಿನದ ಮೂರನೇ ಸೆಷನ್‌ನಲ್ಲಿ ಆತಿಥೇಯ ತಂಡ ಬ್ಯಾಟಿಂಗ್ ಮಾಡುತ್ತಿದ್ದಂತೆಯೇ  ಪಂದ್ಯವನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ.

ನಿಂತು ಹೋದ ಆಟ : 
ಮೂರನೇ ಸೆಷನ್‌ನಲ್ಲಿ ಆಸ್ಟ್ರೇಲಿಯಾದ ಬ್ಯಾಟಿಂಗ್ ಸಮಯದಲ್ಲಿ, ಫ್ಲಡ್‌ಲೈಟ್‌ಗಳ ಅಸಮರ್ಪಕ ಕಾರ್ಯದಿಂದಾಗಿ ಆಟವನ್ನು ಸ್ವಲ್ಪ ಸಮಯದವರೆಗೆ ತಡೆಹಿಡಿಯಲಾಯಿತು. ಆಸ್ಟ್ರೇಲಿಯನ್ ಇನ್ನಿಂಗ್ಸ್‌ನ 18 ನೇ ಓವರ್‌ನಲ್ಲಿ ದೀಪಗಳು ಇದ್ದಕ್ಕಿದ್ದಂತೆ ಆಫ್ ಆದವು. ಎರಡು ನಿಮಿಷಗಳ ವಿಳಂಬದ ನಂತರ ದೀಪಗಳು ಮತ್ತೆ ಉರಿಯಲಾರಂಭಿಸಿತು. ಆದರೆ ಕೆಲವು ಬಾಲ್ ಗಳ ನಂತರ ಮತ್ತದೇ ಸಮಸ್ಯೆ ಮರುಕಳಿಸಿದೆ. 

ಇದನ್ನೂ ಓದಿ : ತಂದೆ ಇಲ್ಲ, ಕುಟುಂಬದ ಪ್ರೀತಿಯೂ ಸಿಕ್ಕಿಲ್ಲ! ಎಲ್ಲಾ ಇದ್ದೂ ಅನಾಥರಂತೆ ಬೆಳೆದ ಈತ ಇಂದು ಟೀಂ ಇಂಡಿಯಾದ ಬಲಗೈ ಬಂಟ... ಭಾರತ ಟಿ-20 ವಿಶ್ವಕಪ್ ಗೆದ್ಧಿದೇ ಈತನಿಂದ

ಹತಾಶರಾಗಿ ಕಂಡು ಬಂದ ಹರ್ಷಿತ್ ರಾಣಾ  : 
ಭಾರತದ ಯುವ ವೇಗದ ಬೌಲರ್ ಹರ್ಷಿತ್ ರಾಣಾ ಮೈದಾನದಲ್ಲಿ ಪದೇ ಪದೇ ವಿದ್ಯುತ್ ಕಡಿತದಿಂದ ಹತಾಶರಾಗುತ್ತಿರುವುದು ಕಂಡುಬಂದಿದೆ. 18ನೇ ಓವರ್ ಬೌಲಿಂಗ್ ಮಾಡುತ್ತಿದ್ದ ವೇಳೆ, ಇದ್ದಕ್ಕಿದ್ದಂತೆ ದೀಪಗಳು ಆಫ್ ಆದವು. ಮತ್ತೆ ದೀಪ ಸರಿಯಾದ ನಂತರ ಕೇವಲ ಎರಡು ಬಾಲ್ ಆಡಲಾಯಿತು. ನಂತರ ಮೈದಾನ ಮತ್ತೆ  ಕತ್ತಲೆಯಲ್ಲಿ ಮುಳುಗಿತ್ತು. 

180 ರನ್‌ಗಳಷ್ಟೇ ಗಳಿಸಿದ ಭಾರತ : 
ಎಡಗೈ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ 48 ರನ್ ನೀಡಿ 6 ವಿಕೆಟ್ ಪಡೆದರು. ಅವರ ಪ್ರದರ್ಶನದಿಂದ ಆಸ್ಟ್ರೇಲಿಯಾ ಅಡಿಲೇಡ್ ಟೆಸ್ಟ್‌ನ ಮೊದಲ ದಿನ ಭಾರತವನ್ನು 44.1 ಓವರ್‌ಗಳಲ್ಲಿ 180 ರನ್‌ಗಳಿಗೆ ಆಲೌಟ್ ಮಾಡಿದೆ. ನಿತೀಶ್ ರೆಡ್ಡಿ, ಮೂರು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳನ್ನು ಒಳಗೊಂಡಂತೆ ಗರಿಷ್ಠ 42 ರನ್ ಗಳಿಸಿದರು. ಇನಿಂಗ್ಸ್‌ನ ಆರಂಭದಲ್ಲಿ ಕೆಎಲ್ ರಾಹುಲ್ (37) ಮತ್ತು ಶುಭಮನ್ ಗಿಲ್ (31) ನಡುವೆ ಎರಡನೇ ವಿಕೆಟ್‌ಗೆ 69 ರನ್‌ಗಳ ಉತ್ತಮ ಜೊತೆಯಾಟವಿತ್ತು. ಯಶಸ್ವಿ ಜೈಸ್ವಾಲ್ ಅವರದ್ದು ಶೂನ್ಯ ಸಂಪಾದನೆ. ರಿಷಬ್ ಪಂತ್ 21 ರನ್ ಮತ್ತು ರವಿಚಂದ್ರನ್ ಅಶ್ವಿನ್ 22 ರನ್ ಕೊಡುಗೆ ನೀಡಿದರು. ವಿರಾಟ್ ಕೊಹ್ಲಿ (7) ಮತ್ತು ರೋಹಿತ್ ಶರ್ಮಾ (3) ರನ್ ಗಳಿಸಿದರು. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.  

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News