Team India: ಶ್ರೀಲಂಕಾ ಸರಣಿಯ ಬಳಿಕ ಈ ಆಟಗಾರರ ಸ್ಥಾನಕ್ಕೆ ದೊಡ್ಡ ಗಂಡಾಂತರ..!

ಭಾರತ vs ಶ್ರೀಲಂಕಾ : ಭಾರತ ತಂಡ ಶ್ರೀಲಂಕಾ ವಿರುದ್ಧದ ಸರಣಿಯನ್ನು 2-1 ರಿಂದ ಗೆದ್ದುಕೊಂಡಿತು. ಆದರೆ ಶ್ರೀಲಂಕಾ ವಿರುದ್ಧ ಹಲವು ಸ್ಟಾರ್ ಆಟಗಾರರು ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದಾರೆ. ಈ ಆಟಗಾರರು ತಮ್ಮ ಹೆಸರಿಗೆ ತಕ್ಕಂತೆ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ.

Written by - Puttaraj K Alur | Last Updated : Jan 8, 2023, 02:48 PM IST
  • ಆರಂಭಿಕ ಆಟಗಾರರಾಗಿ ಶುಭಮನ್ ಗಿಲ್ ಮತ್ತು ಇಶಾನ್ ಕಿಶನ್ ಸಂಪೂರ್ಣ ವೈಫಲ್ಯ ಅನುಭವಿಸಿದರು
  • 2ನೇ ಪಂದ್ಯದಲ್ಲಿ ಅರ್ಷದೀಪ್ ಸಿಂಗ್ 5 ನೋ ಬಾಲ್ ಎಸೆಯುವ ಮೂಲಕ ತಂಡಕ್ಕೆ ಟೆನ್ಶನ್ ಹೆಚ್ಚಿಸಿದರು
  • ಉಮ್ರಾನ್ ಮಲಿಕ್ ಮತ್ತು ಯುಜ್ವೇಂದ್ರ ಚಹಾಲ್ ಅತ್ಯುತ್ತಮ ಬೌಲಿಂಗ್ ಮಾಡುವಲ್ಲಿ ವಿಫಲರಾದರು
Team India: ಶ್ರೀಲಂಕಾ ಸರಣಿಯ ಬಳಿಕ ಈ ಆಟಗಾರರ ಸ್ಥಾನಕ್ಕೆ ದೊಡ್ಡ ಗಂಡಾಂತರ..! title=
ಈ ಆಟಗಾರರ ಸ್ಥಾನಕ್ಕೆ ಗಂಡಾಂತರ!

ನವದೆಹಲಿ: ಪ್ರವಾಸಿ ಶ್ರೀಲಂಕಾ ವಿರುದ್ಧ ಅದ್ಭುತ ಪ್ರದರ್ಶನ ತೋರಿದ ಟೀಂ ಇಂಡಿಯಾ 2-1 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿದೆ. ಇದು ಶ್ರೀಲಂಕಾ ವಿರುದ್ಧ ಟಿ-20 ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾಗೆ 19ನೇ ಜಯವಾಗಿದೆ. ಸರಣಿಯಲ್ಲಿ ಹಲವು ಯುವ ಆಟಗಾರರು ಅತ್ಯುತ್ತಮ ಪ್ರದರ್ಶನ ತೋರಿದರು. ಆದರೆ ನಾಯಕ ಹಾರ್ದಿಕ್ ಪಾಂಡ್ಯ ಮತ್ತು ಕೋಚ್ ರಾಹುಲ್ ದ್ರಾವಿಡ್ ತಂಡದಲ್ಲಿ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಶ್ರೀಲಂಕಾ ಸರಣಿಯಲ್ಲಿ ಹಲವು ಆಟಗಾರರು ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದಾರೆ. ಇದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.  

ಆರಂಭಿಕ ಆಟಗಾರರ ಬಗ್ಗೆ ಟೆನ್ಶನ್!

ಶ್ರೀಲಂಕಾ ವಿರುದ್ಧದ ಟಿ-20 ಸರಣಿಯಲ್ಲಿ ರೋಹಿತ್ ಶರ್ಮಾ, ಕೆ.ಎಲ್.ರಾಹುಲ್ ಮತ್ತು ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಶುಭಮನ್ ಗಿಲ್ ಮತ್ತು ಇಶಾನ್ ಕಿಶನ್ ಓಪನಿಂಗ್ ಅವಕಾಶ ಪಡೆದರು. ಆದರೆ ಈ ಇಬ್ಬರೂ ಆಟಗಾರರಿಗೆ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ. ತಂಡಕ್ಕೆ ಬಲಿಷ್ಠ ಆರಂಭ ನೀಡುವುದು ಆರಂಭಿಕ ಜೋಡಿಯ ಕೆಲಸ. ಆದರೆ ಗಿಲ್-ಕಿಶನ್ ಜೋಡಿ ಆ ನಿಟ್ಟಿನಲ್ಲಿ ಸಂಪೂರ್ಣ ವಿಫಲವಾಗಿ ನಿರಾಸೆ ಮೂಡಿಸಿತು.

ಇದನ್ನೂ ಓದಿ: IND vs SL: ಸರಣಿ ಗೆದ್ದು, ಪಾಕ್ ಹಿಂದಿಕ್ಕಿ ದಾಖಲೆ ಸೃಷ್ಟಿಸಿದ ಭಾರತ: ಇಂಗ್ಲೆಂಡ್ ರೆಕಾರ್ಡ್ ಸರಿಗಟ್ಟಿದ ಟೀಂ ಇಂಡಿಯಾ

ಮೊದಲ ಪಂದ್ಯದಲ್ಲಿ ಈ ಜೋಡಿ 27 ರನ್ ಸೇರಿಸಿತ್ತು. 2ನೇ ಪಂದ್ಯದಲ್ಲಿ ಈ ಜೋಡಿ ಕೇವಲ 12 ರನ್ ಸೇರಿಸಲಷ್ಟೇ ಶಕ್ತವಾಯಿತು. 3ನೇ ಪಂದ್ಯದಲ್ಲಿಯೂ ಈ ಜೋಡಿ ಎರಡಂಕಿ ತಲುಪಲು ಸಾಧ್ಯವಾಗಲಿಲ್ಲ. ಈ ಸರಣಿಯಲ್ಲಿ ಈ ಜೋಡಿಯ ಒಟ್ಟು ರನ್‌ಗಳನ್ನು ನೋಡಿದರೆ ಕೇವಲ 42 ರನ್‌ಗಳಷ್ಟೇ. ಇದು ಆರಂಭಿಕ ಜೋಡಿಯ ಪ್ರದರ್ಶನದ ಬಗ್ಗೆ ಟೆನ್ಶನ್ ಹೆಚ್ಚಿಸಿದೆ.

ಡೆತ್ ಓವರ್‌ಗಳಲ್ಲಿ ಅತ್ಯಂತ ಕಳಪೆ ಬೌಲಿಂಗ್!

ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಹೆಚ್ಚಿನ ಯುವ ಬೌಲರ್‌ಗಳಿಗೆ ಅವಕಾಶ ಸಿಕ್ಕಿತ್ತು. 2ನೇ ಟಿ-20 ಪಂದ್ಯದಲ್ಲಿ ಅರ್ಷದೀಪ್ ಸಿಂಗ್ 5 ನೋ ಬಾಲ್ ಎಸೆದಿದ್ದರು. ಅದೇ ರೀತಿ ಉಮ್ರಾನ್ ಮಲಿಕ್ ವಿಕೆಟ್ ಪಡೆದರೂ ತುಂಬಾ ದುಬಾರಿಯಾದರು. ಇದು ಟಿ-20 ಕ್ರಿಕೆಟ್‍ನಲ್ಲಿ ಅತ್ಯಂತ ಕಳಪೆ ಬೌಲಿಂಗ್ ಪ್ರದರ್ಶನವಾಗಿದೆ. ಯುಜ್ವೇಂದ್ರ ಚಹಾಲ್ ಸಹ ಹೆಸರಿಗೆ ತಕ್ಕಂತೆ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಆದರೆ ತಂಡದಲ್ಲಿರುವ ಸ್ಟಾರ್ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಒಂದೇ ಒಂದು ಪಂದ್ಯದಲ್ಲಿ ಅವಕಾಶ ಪಡೆಯಲಿಲ್ಲ. ಡೆತ್ ಓವರ್‌ಗಳಲ್ಲಿ ಅತ್ಯಂತ ಕಳಪೆ ಬೌಲಿಂಗ್ ಪ್ರದರ್ಶನವೂ ಟೀಂ ಇಂಡಿಯಾಗೆ ದೊಡ್ಡ ತಲೆನೋವಾಗಿದೆ.  

ಇದನ್ನೂ ಓದಿ: Suryakumar Yadav: ಎದ್ದು-ಬಿದ್ದು ಸಿಕ್ಸರ್ ಬಾರಿಸಿದ ಸೂರ್ಯ: ಬಿರುಸಿನ ಆಟದ ಸೀಕ್ರೆಟ್ ರಿವೀಲ್ ಮಾಡಿದ್ರು ಮಿಸ್ಟರ್ 360

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News