Boxing Day Test: ಬಾಕ್ಸಿಂಗ್ ಡೇ ಟೆಸ್ಟ್ ಗೆದ್ದ ಟೀಂ ಇಂಡಿಯಾಗೆ ದಂಡ, ಯಾಕೆ ಗೊತ್ತಾ..?

ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಭಾರತ ತಂಡ ನಿಧಾನಗತಿಯ ಬೌಲಿಂಗ್ ಮಾಡಿದ ಆರೋಪಕ್ಕೆ ಗುರಿಯಾಗಿದ್ದು, ಐಸಿಸಿ ಶಿಸ್ತು ಸಮಿತಿಯು ದಂಡ ಹೇರಿದೆ.

Written by - Puttaraj K Alur | Last Updated : Jan 1, 2022, 12:23 PM IST
  • ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದ ಭಾರತ ತಂಡಕ್ಕೆ ಶಾಕ್!
  • ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯಿಂದ ದಂಡಕ್ಕೆ ಗುರಿಯಾದ ಟೀಂ ಇಂಡಿಯಾ
  • ನಿಧಾನಗತಿಯ ಬೌಲಿಂಗ್ ಮಾಡಿದ ಆರೋಪಕ್ಕೆ ಪಂದ್ಯದ ಶೇ.20ರಷ್ಟು ದಂಡ
Boxing Day Test: ಬಾಕ್ಸಿಂಗ್ ಡೇ ಟೆಸ್ಟ್ ಗೆದ್ದ ಟೀಂ ಇಂಡಿಯಾಗೆ ದಂಡ, ಯಾಕೆ ಗೊತ್ತಾ..?  title=
ಟೀಂ ಇಂಡಿಯಾಗೆ ಶೇ.20ರಷ್ಟು ದಂಡ ವಿಧಿಸಲಾಗಿದೆ

ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧ 113 ರನ್ ಗಳ ಐತಿಹಾಸಿಕ ಜಯ ಸಾಧಿಸುವ ಮೂಲಕ ಟೀಂ ಇಂಡಿಯಾ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿದೆ. ಸೆಂಚುರಿಯನ್ ಕ್ರೀಡಾಂಗಣದಲ್ಲಿ ನಡೆದ ಈ ಬಾಕ್ಸಿಂಗ್ ಡೇ ಟೆಸ್ಟ್(Boxing Day Test) ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿ ಸಂಭ್ರಮಿಸಿದ ಭಾರತ ತಂಡವು ದಂಡಕ್ಕೆ ಗುರಿಯಾಗಿದೆ.

ಹೌದು, ಟೀಂ ಇಂಡಿಯಾ(Team India)ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ದಂಡ ಹೇರಿದೆ. ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಭಾರತ ತಂಡ ನಿಧಾನಗತಿಯ ಬೌಲಿಂಗ್ ಮಾಡಿದ ಆರೋಪಕ್ಕೆ ಗುರಿಯಾಗಿದ್ದು, ಐಸಿಸಿ(ICC) ಶಿಸ್ತು ಸಮಿತಿಯು ದಂಡ ಹೇರಿದೆ. ಪಂದ್ಯದ ಸಂಭಾವನೆಯ ಶೇ.20ರಷ್ಟು ದಂಡವನ್ನು ಐಸಿಸಿ ವಿಧಿಸಿದೆ.

ಇದನ್ನೂ ಓದಿ: ವಿರಾಟ್ ಕೊಹ್ಲಿಯ ಸುಳ್ಳು ಕೊನೆಗೂ ಬಯಲು?: ಏಕದಿನ ನಾಯಕತ್ವ ವಿವಾದಕ್ಕೆ ಬಿಸಿಸಿಐ ಮತ್ತೆ ಸೆಡ್ಡು!

ಸೆಂಚುರಿಯನ್ ಕ್ರೀಡಾಂಗಣದಲ್ಲಿ ಮುಕ್ತಾಯವಾದ ಮೊದಲ ಟೆಸ್ಟ್ ಪಂದ್ಯ(South Africa Tour)ದಲ್ಲಿ ಭಾರತ ನೀಡಿದ್ದ 305ರನ್ ಗಳ ಗುರಿ ಬೆನ್ನು ಹತ್ತಿದ ದಕ್ಷಿಣ ಆಫ್ರಿಕಾ ತಂಡ 191ರನ್ ಗಳಿಗೆ ಆಲೌಟ್ ಆಗಿ 113ರನ್ ಗಳ ಅಂತರದಲ್ಲಿ ಹೀನಾಯ ಸೋಲು ಕಂಡಿತು. ಅಂತೆಯೇ 3 ಪಂದ್ಯಗಳ ಸರಣಿಯಲ್ಲಿ ಕೊಹ್ಲಿ ಪಡೆ 1-0 ಮುನ್ನಡೆ ಸಾಧಿಸಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಸೆಂಚುರಿಯನ್ ಕ್ರೀಡಾಂಗಣದಲ್ಲಿ ಟೀಂ ಇಂಡಿಯಾ(Team india) ತನ್ನ ಮೊದಲ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ.

ದಕ್ಷಿಣ ಆಫ್ರಿಕಾ ಮತ್ತು ಭಾರತ ಕ್ರಿಕೆಟ್ ಸರಣಿ ವೇಳಾಪಟ್ಟಿ:

ಜನವರಿ 3 ರಿಂದ 7 ಜೋಹಾನ್ಸ್​ಬರ್ಗ್ ನ ವಾಂಡರರ್ಸ್ ನಲ್ಲಿ 2ನೇ ಟೆಸ್ಟ್ ಪಂದ್ಯ(Ind vs SA Test) ನಡೆಯಲಿದ್ದು, ಜನವರಿ 11 ರಿಂದ 15 ಕೇಪ್ ಟೌನ್ ನ ನ್ಯೂಲ್ಯಾಂಡ್ಸ್ ನಲ್ಲಿ 3ನೇ ಟೆಸ್ಟ್ ಪಂದ್ಯ ನಡೆಯಲಿದೆ.

ಏಕದಿನ ಸರಣಿ ವೇಳಾಪಟ್ಟಿ

1) ಜನವರಿ 19: ಬೋಲ್ಯಾಂಡ್ ಪಾರ್ಕ್, ಪಾರ್ಲ್

2) ಜ. 21: ಬೋಲ್ಯಾಂಡ್ ಪಾರ್ಕ್, ಪಾರ್ಲ್

3) ಜ. 23: ನ್ಯೂಲೆಂಡ್ಸ್, ಕೇಪ್ ಟೌನ್

ಇದನ್ನೂ ಓದಿ: Mohammed Shami ಬದಲಿಗೆ ಟೀಮ್ ಇಂಡಿಯಾಗೆ ಎಂಟ್ರಿ ನೀಡಿದ ಈ ಮಾರಕ ಬೌಲರ್!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News