ಲಂಡನ್: ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಆಟಗಾರರ ವಿರುದ್ಧ ಚೆಂಡು ವಿರೂಪ ಮಾಡಿರುವ ಆರೋಪ ಕೇಳಿಬಂದಿದೆ. ಟೀಂ ಇಂಡಿಯಾದ ವಿರುದ್ಧ ಗೆಲುವು ಸಾಧಿಸಲು ಆಂಗ್ಲರು ಆಟಗಾರರು ಬಾಲ್ ಟ್ಯಾಂಪರಿಂಗ್ ಮಾಡಿದ್ರಾ ಅನ್ನೋ ಪ್ರಶ್ನೆ ಮೂಡಿದೆ.
2ನೇ ಟೆಸ್ಟ್ ನ 4ನೇ ದಿನದ ಊಟದ ನಂತರದ ಅವಧಿಯಲ್ಲಿ ಇಂಗ್ಲೆಂಡ್ ತಂಡದ ಆಟಗಾರರಿಬ್ಬರು ಚೆಂಡನನ್ನು ವಿರೂಪಗೊಳಿಸಲು ತಮ್ಮ ಶೂನಲ್ಲಿರುವ ಮೊಳೆಗಳ ಬಳಕೆ ಮಾಡಿರುವುದು ಕಂಡುಬಂದಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಆದ ಬಳಿಕ ಸಖತ್ ವೈರಲ್ ಆಗುತ್ತಿದ್ದು, ಆಂಗ್ಲರ ಈ ನಡೆಗೆ ಅಭಿಮಾನಿಗಳು ಕಿಡಿಕಾರಿದ್ದಾರೆ.
Ball Tampering 👀 #INDvENG #IndvsEng #ENGvIND #ENGvsIND #BallTempering #IndiaAt75 pic.twitter.com/xXhXs8Bre8
— GurPreet ChAudhary (@GuriChaudhary77) August 15, 2021
ಪಂದ್ಯದ ಅಧಿಕೃತ ಬ್ರಾಡ್‌ಕಾಸ್ಟ್ ಟಿವಿಯೊಂದರ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಈ ವಿಡಿಯೋದಲ್ಲಿ ಒಬ್ಬ ಇಂಗ್ಲೆಂಡ್ ಆಟಗಾರನು ಇನ್ನೊಬ್ಬ ಆಟಗಾರನಿಗೆ ಚೆಂಡು ರವಾನಿಸುತ್ತಾನೆ. ಆತ ಚೆಂಡನ್ನು ನೆಲಕ್ಕೆ ಎಸೆದು ತನ್ನ ಶೂನಲ್ಲಿರುವ ಮೊಳೆಗಳಿಂದ ತುಳಿದುಹಾಕಿದ್ದಾನೆ. ಇಲ್ಲಿ ಇಂಗ್ಲೆಂಡ್ ಆಟಗಾರರು ಬಾಲ್ ಟ್ಯಾಂಪರಿಂಗ್ ಮಾಡಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ.
ಇದನ್ನೂ ಓದಿ: ENG vs IND 2 ನೇ ಟೆಸ್ಟ್: ಕೆಎಲ್ ರಾಹುಲ್ ಮೇಲೆ ಬಿಯರ್ ಕಾರ್ಕ್ ಎಸೆದ ಇಂಗ್ಲೆಂಡ್ ಫ್ಯಾನ್ಸ್!
ಟೀಂ ಇಂಡಿಯಾದ ಮಾಜಿ ಆಟಗಾರ ವಿರೇಂದ್ರ ಸೆಹವಾಗ್ ಕೂಡ ಈ ಘಟನೆಯ ಫೋಟೋಗಳನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ‘ಇದು ಬಾಲ್ ಟ್ಯಾಂಪರಿಂಗ್ ಅಥವಾ ಕೋವಿಡ್-19 ತಡೆಗಟ್ಟುವ ಕ್ರಮವೇ..? ಅಂತಾ ಪ್ರಶ್ನಿಸಿ ಪರೋಕ್ಷವಾಗಿ ಇಂಗ್ಲೆಂಡ್ ಆಟಗಾರರ ಕಾಲೆಳೆದಿದ್ದಾರೆ.
Yeh kya ho raha hai.
Is it ball tampering by Eng ya covid preventive measures 😀 pic.twitter.com/RcL4I2VJsC— Virender Sehwag (@virendersehwag) August 15, 2021
ಇಷ್ಟೆಲ್ಲಾ ಬೆಳವಣಿಗೆಗಳ ಮಧ್ಯೆ ಇದು ಬಾಲ್ ಟ್ಯಾಂಪರಿಂಗ್ ಎಂದು ಇನ್ನೂ ದೃಢವಾಗಿಲ್ಲ. ಈ ಬಗ್ಗೆ ಭಾರತ ತಂಡದಿಂದ ಮ್ಯಾಚ್ ರೆಫರಿ ಕ್ರಿಸ್ ಬ್ರಾಡ್‌ಗೆ ಅಧಿಕೃತವಾಗಿ ದೂರು ನೀಡಿಲ್ಲ. ಓಲ್ಲಿ ರಾಬಿನ್ಸನ್ ಎಸೆದ ಭಾರತದ 2ನೇ ಇನ್ನಿಂಗ್ಸ್ ನ 35ನೇ ಓವರ್‌ನಲ್ಲಿ ಈ ಘಟನೆ ನಡೆದಿದೆ ಅಂತಾ ತಿಳಿದುಬಂದಿದೆ. ಈ ವಿಡಿಯೋದಲ್ಲಿ ಆಟಗಾರರ ಮುಖವನ್ನು ತೋರಿಸಿಲ್ಲ. ಹೀಗಾಗಿ ಈ ಬಗ್ಗೆ ಯಾರೂ ತಲೆ ಕೆಡಿಸಿಕೊಂಡಿಲ್ಲ ಮತ್ತು ಅಂಪೈರ್‌ಗಳು ಚೆಂಡನ್ನು ಬದಲಿಸಲಿಲ್ಲ.
ಇದನ್ನೂ ಓದಿ: IND vs ENG: ಕನ್ನಡಿಗ ಕೆ.ಎಲ್.ರಾಹುಲ್ ‘ಶತಕ’ಕ್ಕೆ ಮನಸೋತ ಗೆಳತಿ ಅಥಿಯಾ ಶೆಟ್ಟಿ..!
ಈ ಬಗ್ಗೆ ಉದ್ದೇಶಪೂರ್ವಕವಾಗಿ ಭಾರತೀಯ ಅಭಿಮಾನಿಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಸ್ಟುವರ್ಟ್ ಬ್ರಾಡ್ ಅವರನ್ನು ಕೇಳಿದ್ದಾರೆ. ಅದಕ್ಕೆ ಅವರು ‘ಖಂಡಿತ, ಇದು ಬಾಲ್ ಟ್ಯಾಂಪರಿಂಗ್ ಅಲ್ಲ’ ಅಂತಾ ಉತ್ತರಿಸಿದ್ದಾರೆ. ಈ ನಿರ್ದಿಷ್ಟ ಘಟನೆಯ ನಂತರ ಅಗತ್ಯವಿದ್ದಲ್ಲಿ ಚೆಂಡನ್ನು ಪರೀಕ್ಷಿಸಲು ಅಂಪೈರ್‌ಗಳು ನಿರ್ಧಾರ ತೆಗೆದುಕೊಳ್ಳಬೇಕು. ಚೆಂಡು ವಿರೂಪವಾಗಿದೆಯೇ ಎಂಬುದನ್ನುಅವರೇ ಪರೀಕ್ಷಿಸಿ ಹೇಳಬೇಕು ಅಂತಾ ಬ್ರಾಡ್ ವಿವರಣೆ ನೀಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ