IND vs AUS: ಟಿ20ಗೂ ಮೊದಲೇ ಈ ತಂಡಕ್ಕೆ ಬಿಗ್ ಶಾಕ್, ಸ್ಟಾರ್ ಬ್ಯಾಟ್ಸ್‌ಮನ್ ಸರಣಿಯಿಂದ ಔಟ್

IND vs AUS: ವಿಶ್ವಕಪ್ ಪಂದ್ಯ ಮುಗಿದ ಬೆನ್ನಲ್ಲೇ ಇದೀಗ ಕ್ರಿಕೆಟ್ ಪ್ರಿಯರು ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವಿನ ಟಿ20 ಪಂದ್ಯಕ್ಕೆ ಕಾತುರರಾಗಿ ಕಾಯುತ್ತಿದ್ದಾರೆ. ಈ ಮಧ್ಯೆ, ಆಸಿಸ್ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದ್ದು, ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಸರಣಿಯಿಂದಲೇ ಔಟ್ ಆಗಿದ್ದಾರೆ. 

Written by - Yashaswini V | Last Updated : Nov 22, 2023, 07:27 AM IST
  • ನವೆಂಬರ್ 23 ರಿಂದ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ 5 ಟಿ20 ಪಂದ್ಯಗಳ ಸರಣಿ
  • ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವಿನ ಟಿ20 ಪಂದ್ಯಕ್ಕೂ ಮೊದಲೇ ಆಸ್ಟ್ರೇಲಿಯಾಕ್ಕೆ ಬಿಗ್ ಶಾಕ್
  • ಆಸ್ಟ್ರೇಲಿಯಾ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಸರಣಿಯಿಂದ ಔಟ್
IND vs AUS: ಟಿ20ಗೂ ಮೊದಲೇ ಈ ತಂಡಕ್ಕೆ ಬಿಗ್ ಶಾಕ್, ಸ್ಟಾರ್ ಬ್ಯಾಟ್ಸ್‌ಮನ್ ಸರಣಿಯಿಂದ ಔಟ್  title=

David Warner: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಆರಂಭವಾಗಲಿರುವ ಟಿ20 ಸರಣಿಗೆ ಇನ್ನೆರಡು ದಿನವಷ್ಟೇ ಬಾಕಿ ಉಳಿದಿದೆ. ನವೆಂಬರ್ 23ರಿಂದ ಟೀಂ ಇಂಡಿಯಾ vs ಆಸ್ಟ್ರೇಲಿಯಾ ನಡುವೆ 5 ಟಿ20 ಪಂದ್ಯಗಳ ಸರಣಿ ನಡೆಯಲಿದೆ. ಉಭಯ ತಂಡಗಳು ಈ ಸರಣಿಗಾಗಿ ತಂಡವನ್ನು ಪ್ರಕಟಿಸಿವೆ. ಈ ಮಧ್ಯೆ, ಆಸಿಸ್ ತಂಡ ಭಾರೀ ಹಿನ್ನಡೆಯನ್ನು ಅನುಭವಿಸಿದೆ. 

ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವಿನ ಟಿ20 ಪಂದ್ಯಕ್ಕೂ ಮೊದಲೇ ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಮ್ಯಾಚ್ ವಿನ್ನರ್ ಡೇವಿಡ್ ವಾರ್ನರ್  ಈ ಸರಣಿಯಿಂದ ಹೊರಗುಳಿದಿದ್ದಾರೆ. ಇವರ ಬದಲಿಗೆ 24ವರಶದ ಯುವ ಆಟಗಾರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. 

ನವೆಂಬರ್ 23 ರಿಂದ ಡಿಸೆಂಬರ್ 3 ರವರೆಗೆ ನಡೆಯಲಿರುವ ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ ಸರಣಿ ಆರಂಭಕ್ಕೂ ಮೊದಲೇ ಆಸ್ಟ್ರೇಲಿಯಾ ತಂಡದ  ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಈ ಸರಣಿಯಿಂದ ಹೊರಗುಳಿದಿದ್ದಾರೆ. ವಾರ್ನರ್ ಬದಲಿಗೆ 24 ವರ್ಷದ ಆರೋನ್ ಹಾರ್ಡಿ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.

ಇದನ್ನೂ ಓದಿ- ಕೋಚ್ ಸ್ಥಾನದಿಂದ ಕೆಳಗಿಳಿಯಲಿದ್ದಾರೆಯೇ ರಾಹುಲ್ ದ್ರಾವಿಡ್ ? ಮುಂದಿನ ಕೋಚ್ ಯಾರು ?

ಈ ಕುರಿತಂತೆ ಅಧಿಕೃತವಾಗಿ ಮಾಹಿತಿ ನೀಡಿರುವ ಕ್ರಿಕೆಟ್ ಆಸ್ಟ್ರೇಲಿಯಾ, "2023ರ ವಿಶ್ವಕಪ್ ಟ್ರೋಫಿ ಗೆಲುವಿನ ಬಳಿಕ ಡೇವಿಡ್ ವಾರ್ನರ್ ಮನೆಗೆ ಮರಳಲಿದ್ದಾರೆ. ಡೇವಿಡ್ ವಾರ್ನರ್ ಬದಲಿಗೆ  ಆರೋನ್ ಹಾರ್ಡಿ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಆಯ್ಕೆಗಾರರು ನಿರ್ಧರಿಸಿದ್ದಾರೆ" ಎಂದು ತಿಳಿಸಿದೆ. 

ಆಸ್ಟ್ರೇಲಿಯಾ ಆರಂಭಿಕ ಆಟಗಾರ ಡೇವಿಡ್ ವಾರ್ನರ್: 
ಇತ್ತೀಚೆಗೆ ಮುಕ್ತಾಯಗೊಂಡ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ಈ ವಿಶ್ವಕಪ್ ಟೂರ್ನಿಯಲ್ಲಿ ಅವರು 48.63 ಸರಾಸರಿಯೊಂದಿಗೆ 535 ರನ್ ಗಳಿಸಿದ್ದಾರೆ. ಈ ಮೂಲಕ ಇಡೀ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆರನೇ ಬ್ಯಾಟ್ಸ್‌ಮನ್ ಎಂಬ ಕೀರ್ತಿಗೂ ಪಾತ್ರರಾಗಿದ್ದಾರೆ. 

ಇದನ್ನೂ ಓದಿ- Jasprit Bumrah: ಭಾರತದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಆಸ್ತಿ ವಿವರ ತಿಳಿದರೆ ಶಾಕ್ ಆಗೋದು ಗ್ಯಾರಂಟಿ! 

ಟೀಂ ಇಂಡಿಯಾ vs ಆಸಿಸ್ ಟಿ20 ಸರಣಿಯ ವೇಳಾಪಟ್ಟಿ: 

  • 1ನೇ ಟಿ20 - 23 ನವೆಂಬರ್ (ವಿಶಾಖಪಟ್ಟಣಂ)
  • 2ನೇ ಟಿ20 - 26 ನವೆಂಬರ್ (ತಿರುವನಂತಪುರಂ)
  • 3ನೇ ಟಿ20 - 28 ನವೆಂಬರ್ (ಗುವಾಹಟಿ)
  • 4ನೇ ಟಿ20 - 1 ಡಿಸೆಂಬರ್ (ನಾಗ್ಪುರ)
  • 5ನೇ ಟಿ20 - 3 ಡಿಸೆಂಬರ್ (ಹೈದರಾಬಾದ್) ಈ ಎಲ್ಲಾ ಪಂದ್ಯಗಳು ಸಂಜೆ 7ಗಂಟೆಗೆ ನಡೆಯಲಿವೆ. 

ಟೀಂ ಇಂಡಿಯಾ vs ಆಸಿಸ್ ಟಿ20 ಸರಣಿಗಾಗಿ ಉಭಯ ತಂಡಗಳು ಈ ಕೆಳಕಂದಂತಿವೆ: 
ಟೀಂ ಆಸ್ಟ್ರೇಲಿಯಾ: 

ಮ್ಯಾಥ್ಯೂ ವೇಡ್ (ಕ್ಯಾಪ್ಟನ್), ಮ್ಯಾಥ್ಯೂ ಶಾರ್ಟ್, ಟಿಮ್ ಡೇವಿಡ್, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಆರನ್ ಹಾರ್ಡಿ, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಸೀನ್ ಅಬಾಟ್, ಜೋಶ್ ಇಂಗ್ಲಿಸ್, ತನ್ವಿರ್ ಸಂಘ, ನಾಥನ್ ಎಲ್ಲಿಸ್, ಜೇಸನ್ ಬೆಹ್ರೆಂಡಾರ್ಫ್, ಸ್ಪೆನ್ಸರ್ ಜಾನ್ಸನ್, ಆಡಮ್ ಝಂಪಾ.

ಟೀಂ ಇಂಡಿಯಾ: 
ಸೂರ್ಯಕುಮಾರ್ ಯಾದವ್ (ಕ್ಯಾಪ್ಟನ್), ರಿತುರಾಜ್ ಗಾಯಕ್ವಾಡ್ (ವೈಸ್ ಕ್ಯಾಪ್ಟನ್), ಇಶಾನ್ ಕಿಶನ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಅಕ್ಸರ್ ಪಟೇಲ್, ಶಿವಂ ದುಬೆ, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ ಅವೇಶ್ ಖಾನ್., ಮುಖೇಶ್ ಕುಮಾರ್. 

ಕೊನೆಯ ಎರಡು ಪಂದ್ಯಗಳಲ್ಲಿ ಶ್ರೇಯಸ್ ಅಯ್ಯರ್ ತಂಡದ ಉಪನಾಯಕರಾಗಿರುತ್ತಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News