IND vs AUS 1st Test : ದ್ವಿಶತಕ ಸಿಡಿಸಿದ ಈ ಆಟಗಾರನಿಗೆ ಟೀಂನಲ್ಲಿ ಸ್ಥಾನ ನೀಡದೆ ಅನ್ಯಾಯ!

Nagpur Test : ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿ ಆರಂಭವಾಗಿದೆ. ಈ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಟೆಸ್ಟ್ ಪಂದ್ಯ ನಾಗ್ಪುರದಲ್ಲಿ ನಡೆಯುತ್ತಿದೆ. ಬಾರ್ಡರ್ ಗವಾಸ್ಕರ್ ಟ್ರೋಫಿ ಅಡಿಯಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಟಾಸ್ ಸೋತು ಬೌಲ್ಡ್ ಆದರು.

Written by - Channabasava A Kashinakunti | Last Updated : Feb 9, 2023, 11:16 AM IST
  • ಟೀಂ ಇಂಡಿಯಾ vs ಆಸ್ಟ್ರೇಲಿಯಾ
  • ನಾಗ್ಪುರ ಟೆಸ್ಟ್
  • 507 ರನ್ ಗಳಿಸಿದ ಈ ಆಟಗಾರ
IND vs AUS 1st Test : ದ್ವಿಶತಕ ಸಿಡಿಸಿದ ಈ ಆಟಗಾರನಿಗೆ ಟೀಂನಲ್ಲಿ ಸ್ಥಾನ ನೀಡದೆ ಅನ್ಯಾಯ! title=

Nagpur Test Match : ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿ ಆರಂಭವಾಗಿದೆ. ಈ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಟೆಸ್ಟ್ ಪಂದ್ಯ ನಾಗ್ಪುರದಲ್ಲಿ ನಡೆಯುತ್ತಿದೆ. ಬಾರ್ಡರ್ ಗವಾಸ್ಕರ್ ಟ್ರೋಫಿ ಅಡಿಯಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಟಾಸ್ ಸೋತು ಬೌಲ್ಡ್ ಆದರು. ಅದೇ ಹೊತ್ತಿಗೆ ಮೊದಲ ಟೆಸ್ಟ್ ಪಂದ್ಯದಲ್ಲಿಯೇ ನಾಯಕ ರೋಹಿತ್ ಶರ್ಮಾ ಪ್ಲೇಯಿಂಗ್ ಇಲೆವೆನ್ ನಲ್ಲಿ ತಮ್ಮ ಒಬ್ಬ ಆಟಗಾರನಿಗೆ ಸ್ಥಾನ ನೀಡದಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಆಟಗಾರ ಇತ್ತೀಚೆಗಷ್ಟೇ ತಮ್ಮ ಬ್ಯಾಟಿಂಗ್ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದರು. ಹಾಗಿದ್ರೆ, ಈ ಆಟಗಾರ ಯಾರು? ಯಾಕೆ ಸ್ಥಾನ ಸಿಗಲಿಲ್ಲ? ಇಲ್ಲಿದೆ ಸಂಪೂರ್ಣ ಮಾಹಿತಿ ಇಲ್ಲಿದೆ..

ಟೀಂ ಇಂಡಿಯಾ vs ಆಸ್ಟ್ರೇಲಿಯಾ

ರೋಹಿತ್ ಶರ್ಮಾ (ಸಿ), ಕೆಎಲ್ ರಾಹುಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೀಕರ್ ಭರತ್ (ವಿಕೆ), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ನಾಗ್ಪುರ ಟೆಸ್ಟ್‌ಗೆ ಪ್ಲೇಯಿಂಗ್ XI ನಲ್ಲಿ ಸ್ಥಾನ ಪಡೆದಿದ್ದಾರೆ. ಶುಭಮನ್ ಗಿಲ್, ಇಶಾನ್ ಕಿಶನ್, ಕುಲದೀಪ್ ಯಾದವ್, ಜಯದೇವ್ ಉನದ್ಕತ್ ಮತ್ತು ಉಮೇಶ್ ಯಾದವ್ ಪ್ಲೇಯಿಂಗ್ XI ನಿಂದ ಹೊರಗಿಡಲಾಗಿದೆ.

ನಾಗ್ಪುರ ಟೆಸ್ಟ್

ಇಶಾನ್ ಕಿಶನ್ ಇತ್ತೀಚೆಗಷ್ಟೇ ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ್ದ ಕಾರಣ ಇಶಾನ್ ಕಿಶನ್ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆಯದೇ ಇರುವುದಕ್ಕೆ ಸಾಕಷ್ಟು ಚರ್ಚೆಯಾಗುತ್ತಿದೆ. ಅವರ ಅದ್ಭುತ ಬ್ಯಾಟಿಂಗ್ ಆಧಾರದ ಮೇಲೆ, ಇಶಾನ್ ಟೀಮ್ ಇಂಡಿಯಾದಲ್ಲಿ ತಮ್ಮದೇ ಆದ ಗುರುತನ್ನು ಹೊಂದಿದ್ದಾರೆ. ಆದಾಗ್ಯೂ, ಇಶಾನ್ ಕಿಶನ್ ಇನ್ನೂ ಟೆಸ್ಟ್ ಪದಾರ್ಪಣೆಗಾಗಿ ಕಾಯುತ್ತಿದ್ದಾರೆ.

507 ರನ್ ಗಳಿಸಿದ ಈ ಆಟಗಾರ

ಇಶಾನ್ ಕಿಶನ್ ಇದುವರೆಗೆ 13 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 507 ರನ್ ಗಳಿಸಿದ್ದಾರೆ. ಇದರಲ್ಲಿ 3 ಅರ್ಧಶತಕಗಳು ಸೇರಿವೆ. ಅದೇ ಸಮಯದಲ್ಲಿ, ಅವರು ಟಿ20 ಪಂದ್ಯಗಳಲ್ಲಿ ಭಾರತಕ್ಕಾಗಿ 27 ಪಂದ್ಯಗಳನ್ನು ಆಡಿದ್ದಾರೆ ಮತ್ತು 653 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರು 4 ಅರ್ಧ ಶತಕಗಳನ್ನು ಗಳಿಸಿದ್ದಾರೆ. ODI ಕ್ರಿಕೆಟ್‌ನಲ್ಲಿ ಅವರ ಸರಾಸರಿ 46.09 ಆಗಿದೆ. ಮತ್ತು ಟಿ20 ಕ್ರಿಕೆಟ್‌ನಲ್ಲಿ ಅವರ ಸರಾಸರಿ 25.12 ಆಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News