ಪಾಕಿಸ್ತಾನ ಕ್ರಿಕೆಟ್ ನಲ್ಲಿ ಸುಧಾರಣೆ ತರಲಿದ್ದೇನೆ- ಇಮ್ರಾನ್ ಖಾನ್

ಐಸಿಸಿ ವಿಶ್ವಕಪ್ 2019 ರ ಆವೃತ್ತಿಯಲ್ಲಿ ಪಾಕ್ ತಂಡ ವಿಫಲವಾದ ಹಿನ್ನಲೆಯಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ವಾಷಿಂಗ್ಟನ್ ಡಿಸಿಯ ಕ್ಯಾಪಿಟಲ್ ಒನ್ ಅರೆನಾದಲ್ಲಿ ಪಾಕಿಸ್ತಾನ ಸಮುದಾಯದ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಪಾಕಿಸ್ತಾನ ಕ್ರಿಕೆಟ್ ಮಲ್ಲಿ ಸುಧಾರಣೆ ತರುವುದಾಗಿ ಹೇಳಿದರು.

Last Updated : Jul 22, 2019, 09:07 PM IST
ಪಾಕಿಸ್ತಾನ ಕ್ರಿಕೆಟ್ ನಲ್ಲಿ ಸುಧಾರಣೆ ತರಲಿದ್ದೇನೆ- ಇಮ್ರಾನ್ ಖಾನ್   title=
Photo courtesy: Facebook(Imran khan)

ನವದೆಹಲಿ:  ಐಸಿಸಿ ವಿಶ್ವಕಪ್ 2019 ರ ಆವೃತ್ತಿಯಲ್ಲಿ ಪಾಕ್ ತಂಡ ವಿಫಲವಾದ ಹಿನ್ನಲೆಯಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ವಾಷಿಂಗ್ಟನ್ ಡಿಸಿಯ ಕ್ಯಾಪಿಟಲ್ ಒನ್ ಅರೆನಾದಲ್ಲಿ ಪಾಕಿಸ್ತಾನ ಸಮುದಾಯದ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಪಾಕಿಸ್ತಾನ ಕ್ರಿಕೆಟ್ ಮಲ್ಲಿ ಸುಧಾರಣೆ ತರುವುದಾಗಿ ಹೇಳಿದರು.

"ವಿಶ್ವಕಪ್ ನಂತರ, ನಾನು ಈ ಪಾಕಿಸ್ತಾನ ತಂಡವನ್ನು ಸುಧಾರಿಸಲು ನಾನು ನಿರ್ಧರಿಸಿದ್ದೇನೆ. ಸಾಕಷ್ಟು ನಿರಾಶೆಯಾಗಿದೆ. ಮುಂದಿನ ವಿಶ್ವಕಪ್‌ನಲ್ಲಿ ನೀವು ಅತ್ಯಂತ ವೃತ್ತಿಪರ, ಅತ್ಯುತ್ತಮ ಪಾಕಿಸ್ತಾನ ತಂಡವನ್ನು ನೋಡುತ್ತೀರಿ. ನನ್ನ ಮಾತುಗಳನ್ನು ನೆನಪಿಡಿ" ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.

ಆದರೆ ಇಮ್ರಾನ್ ಖಾನ್ ಅವರು ಪಾಕಿಸ್ತಾನ ಕ್ರಿಕೆಟ್ ಅನ್ನು ಸುಧಾರಿಸುವ ಯೋಜನೆಗಳ ಬಗ್ಗೆ ವಿವರಗಳನ್ನು ಈ ಸಂದರ್ಭದಲ್ಲಿ ಬಹಿರಂಗಪಡಿಸಲಿಲ್ಲ. ಪಾಕಿಸ್ತಾನವು ತಂಡವು 1992 ರ ವಿಶ್ವಕಪ್ ವಿಜಯೋತ್ಸವಕ್ಕೆ ಹೋಲುವ ರೀತಿಯಲ್ಲಿ ತಮ್ಮ ವಿಶ್ವಕಪ್ 2019 ರ ಅಭಿಯಾನವನ್ನು ಪ್ರಾರಂಭಿಸಿತ್ತು, ಇದು ಕ್ರಿಕೆಟ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿತ್ತು.ಆದರೆ ದುರಾದೃಷ್ಟವಶಾತ್  ರನ್ ರೇಟ್ ಕಡಿಮೆ ಇದ್ದಿದ್ದರಿಂದಾಗಿ ಸೆಮಿಫೈನಲ್ ಘಟ್ಟ ತಲುಪವಲ್ಲಿ ವಿಫಲವಾಗಿತ್ತು.   

Trending News