ICC World Cup 2023: ಪಾಕ್ ವಿರುದ್ಧ ಭರ್ಜರಿ ಶತಕ, ಸಚಿನ್ ದಾಖಲೆ ಮುರಿದ ರಚಿನ್..!

ICC World Cup 2023: ಏಕದಿನ ವಿಶ್ವಕಪ್ ಟೂರ್ನಿಯಲ್ಲಿ 25 ವರ್ಷಕ್ಕೂ ಮುನ್ನ ಅತಿಹೆಚ್ಚು ಶತಕ ಗಳಿಸಿದ ಬ್ಯಾಟ್ಸ್‍ಮನ್‍ಗಳ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ರಚಿನ್ ರವೀಂದ್ರ ಅವರು ಮುರಿದು ವಿಶೇಷ ದಾಖಲೆ ನಿರ್ಮಿಸಿದ್ದಾರೆ.

Written by - Puttaraj K Alur | Last Updated : Nov 4, 2023, 04:17 PM IST
  • ಪಾಕಿಸ್ತಾನದ ವಿರುದ್ಧ ಮತ್ತೊಂದು ಅಮೋಘ ಶತಕ ಸಿಡಿಸಿ ಸಂಭ್ರಮಿಸಿದ ರಚಿನ್ ರವೀಂದ್ರ
  • ಏಕದಿನ ವಿಶ್ವಕಪ್‍ನಲ್ಲಿ 25 ವರ್ಷಕ್ಕೂ ಮುನ್ನ ಅತಿಹೆಚ್ಚು ಶತಕ ಗಳಿಸಿದ ಸಚಿನ್ ದಾಖಲೆ ಮುರಿದ ರಚಿನ್
  • ಪಾಕಿಸ್ತಾನಕ್ಕೆ 402 ರನ್‍ಗಳ ಬೃಹತ್ ಮೊತ್ತದ ಟಾರ್ಗೆಟ್ ನೀಡಿದ ನ್ಯೂಜಿಲ್ಯಾಂಡ್
ICC World Cup 2023: ಪಾಕ್ ವಿರುದ್ಧ ಭರ್ಜರಿ ಶತಕ, ಸಚಿನ್ ದಾಖಲೆ ಮುರಿದ ರಚಿನ್..! title=
ಸಚಿನ್ ದಾಖಲೆ ಮುರಿದ ರಚಿನ್ !

ಬೆಂಗಳೂರು: ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ 35ನೇ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ನ್ಯೂಜಿಲ್ಯಾಂಡ್‍ನ ರಚಿನ್ ರವೀಂದ್ರ ಭರ್ಜರಿ ಶತಕ ಸಿಡಿಸಿದ್ದಾರೆ.

ನ್ಯೂಜಿಲ್ಯಾಂಡ್‍ನ ಭರವಸೆಯ ಯುವ ಎಡಗೈ ಬ್ಯಾಟ್ಸ್ ಮನ್ ರಚಿನ್ ರವೀಂದ್ರ ಅವರು ಪಾಕ್ ವಿರುದ್ಧ ಅಮೋಘ ಶತಕ ಸಿಡಿಸುವ ಮೂಲಕ ಕ್ರಿಕೆಟ್ ದೇವರು ಖ್ಯಾತಿಯ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದಿದ್ದಾರೆ.  94 ಎಸೆತಗಳಲ್ಲಿ 15 ಬೌಂಡರಿ ಹಾಗೂ 1 ಸಿಕ್ಸರ್ ಇದ್ದ 108 ರನ್ ಗಳಿಸಿ ರಚಿನ್ ಮಿಂಚಿದರು.

ಏಕದಿನ ವಿಶ್ವಕಪ್ ಟೂರ್ನಿಯಲ್ಲಿ 25 ವರ್ಷಕ್ಕೂ ಮುನ್ನ ಅತಿಹೆಚ್ಚು ಶತಕ ಗಳಿಸಿದ ಬ್ಯಾಟ್ಸ್‍ಮನ್‍ಗಳ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ರಚಿನ್ ರವೀಂದ್ರ ಅವರು ಮುರಿದು ವಿಶೇಷ ದಾಖಲೆ ನಿರ್ಮಿಸಿದ್ದಾರೆ. 25 ವರ್ಷಕ್ಕೂ ಮುನ್ನ ಸಚಿನ್ ಅವರು 2 ಶತಕಗಳನ್ನು ಗಳಿಸಿದ್ದರು. ಆದರೆ ಚೊಚ್ಚಲ ವಿಶ್ವಕಪ್ ಆಡುತ್ತಿರುವ ರಚಿನ್ ಏಕದಿನ ವಿಶ್ವಕಪ್‍ನಲ್ಲಿ ಪಾಕ್ ವಿರುದ್ಧ ಇಂದು ಗಳಿಸಿದ ಶತಕ 3ನೇಯದ್ದಾಗಿದೆ.

ಇದನ್ನೂ ಓದಿ: IPL Auction 2024: ಡಿಸೆಂಬರ್ 19ರಂದು ದುಬೈನಲ್ಲಿ ಐಪಿಎಲ್ ಹರಾಜು..!

ರಚಿನ್ ರವೀಂದ್ರ ಅದ್ಭುತ ಪ್ರದರ್ಶನ

ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ರಚಿನ್ ರವೀಂದ್ರ ತಾವಾಡಿದ 8 ಪಂದ್ಯಗಳಲ್ಲಿ 3 ಶತಕ ಮತ್ತು 2 ಅರ್ಧಶತಕ ಬಾರಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ ಅಜೇಯ 123, ನೆದರ್‍ಲ್ಯಾಂಡ್ ವಿರುದ್ಧ 51, ಭಾರತದ ವಿರುದ್ಧ 75, ಆಸ್ಟ್ರೇಲಿಯಾ ವಿರುದ್ಧ 116 ಮತ್ತು ಪಾಕಿಸ್ತಾನದ ವಿರುದ್ಧ 108 ರನ್ ಗಳಿಸಿದ್ದಾರೆ.

ಪಾಕಿಸ್ತಾನಕ್ಕೆ ಬೃಹತ್ ಮೊತ್ತದ ಟಾರ್ಗೆಟ್

ಇಂದಿನ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ನ್ಯೂಜಿಲ್ಯಾಂಡ್ ಬೃಹತ್ ಮೊತ್ತದ ಟಾರ್ಗೆಟ್ ನೀಡಿದೆ. ಟಾಸ್ ಗೆದ್ದ ಪಾಕಿಸ್ತಾನ ಫೀಲ್ಡಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲ್ಯಾಂಡ್ ನಿಗದಿತ 50 ಓವರ್‍ಗಳಲ್ಲಿ 6 ವಿಕೆಟ್ ಕಳೆದುಕೊಂಡು 401 ರನ್‍ ಗಳಿಸಿತು. ನ್ಯೂಜಿಲ್ಯಾಂಡ್ ಪರ ರಚಿನ್ ರವೀಂದ್ರ(108), ಕೇನ್ ವಿಲಿಯಮ್ಸನ್(95), ಗ್ಲೆನ್ ಫಿಲಿಪ್ಸ್(45), ಮಾರ್ಕ್ ಚಾಪ್ಮನ್(39), ಡೆವೊನ್ ಕಾನ್ವೇ(35), ಡೇರಿಲ್ ಮಿಚೆಲ್(29) ಮತ್ತು ಮಿಚೆಲ್ ಸ್ಯಾಂಟ್ನರ್(26) ರನ್ ಗಳಿಸಿದರು.

ಇದನ್ನೂ ಓದಿ: ವಿಶ್ವಕಪ್’ನಲ್ಲಿ ಧೂಳೆಬ್ಬಿಸ್ತಿರೋ ರಚಿನ್ ರವೀಂದ್ರ ಗರ್ಲ್ ಫ್ರೆಂಡ್ ಕೂಡ ಭಾರತೀಯಳೇ…! ಯಾರು ಗೊತ್ತಾ ಆ ಸುಂದರಿ?

ಪಾಕಿಸ್ತಾನ ಪರ ಬೌಲಿಂಗ್‍ನಲ್ಲಿ ಮೊಹಮ್ಮದ್ ವಾಸಿಂ ಜೂ 3 ವಿಕೆಟ್ ಕಬಳಿಸಿ ಮಿಂಚಿದರು. ಹಸನ್ ಅಲಿ, ಇಫ್ತಿಕರ್ ಅಹಮದ್ ಮತ್ತು ಹಾರಿಸ್ ರೌಫ್ ತಲಾ ಒಂದೊಂದು ವಿಕೆಟ್ ಪಡೆದರು. ಸದ್ಯದ ಮಾಹಿತಿ ಪ್ರಕಾರ 402 ರನ್‍ಗಳ ಟಾರ್ಗೆಟ್ ಬೆನ್ನತ್ತಿರುವ ಪಾಕಿಸ್ತಾನ 10 ಓವರ್ ಗಳಲ್ಲಿ 1 ವಿಕೆಟ್ ಕಳೆದುಕೊಂಡು 75 ರನ್ ಗಳಿಸಿದೆ. ಫಖರ್ ಜಮಾನ್(43) ಮತ್ತು ನಾಯಕ ಬಾಬರ್ ಅಜಮ್(25) ಬ್ಯಾಟಿಂಗ್ ಮಾಡುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News