32ನೇ ವಯಸ್ಸಿನಲ್ಲಿಯೇ ಟೆಸ್ಟ್ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ ಬ್ಯಾಟ್ಸ್ ಮ್ಯಾನ್ : ಕ್ರಿಕೆಟ್ ಪ್ರೇಮಿಗಳಿಗೆ ದೊಡ್ಡ ಆಘಾತ

Heinrich Klaasen Retirement:ಭಾರತದ ವಿರುದ್ಧದ ಟೆಸ್ಟ್ ಸರಣಿಯಲ್ಲಿ, ಬ್ಯಾಟ್ಸ್‌ಮನ್ ಡೀನ್ ಎಲ್ಗರ್ ತಮ್ಮ ವೃತ್ತಿಜೀವನದ ಕೊನೆಯ ಪಂದ್ಯವನ್ನು ಆಡಿದ್ದರು. ಇದೀಗ ಕ್ಲಾಸೆನ್ ನಿವೃತ್ತಿ ಘೋಷಿಸಿದ್ದಾರೆ. 

Written by - Ranjitha R K | Last Updated : Jan 8, 2024, 03:13 PM IST
  • ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ
  • ಈ ದಿಢೀರ್ ನಿರ್ಧಾರದಿಂದ ಎಲ್ಲರೂ ಅಚ್ಚರಿ
  • ಕ್ಲಾಸೆನ್ ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಆಡುವುದನ್ನು ಮುಂದುವರಿಸಲಿದ್ದಾರೆ.
32ನೇ ವಯಸ್ಸಿನಲ್ಲಿಯೇ ಟೆಸ್ಟ್ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ ಬ್ಯಾಟ್ಸ್ ಮ್ಯಾನ್ : ಕ್ರಿಕೆಟ್ ಪ್ರೇಮಿಗಳಿಗೆ ದೊಡ್ಡ ಆಘಾತ title=

Heinrich Klaasen Retirement : ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಹೆನ್ರಿಚ್ ಕ್ಲಾಸೆನ್ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.ಅವರ ಈ ದಿಢೀರ್ ನಿರ್ಧಾರದಿಂದ ಎಲ್ಲರೂ ಅಚ್ಚರಿಗೊಂಡಿದ್ದಾರೆ.ಇತ್ತೀಚೆಗೆ, ಭಾರತದ ವಿರುದ್ಧದ ಟೆಸ್ಟ್ ಸರಣಿಯಲ್ಲಿ, ಬ್ಯಾಟ್ಸ್‌ಮನ್ ಡೀನ್ ಎಲ್ಗರ್ ತಮ್ಮ ವೃತ್ತಿಜೀವನದ ಕೊನೆಯ ಪಂದ್ಯವನ್ನು ಆಡಿದ್ದರು. ಇದೀಗ ಕ್ಲಾಸೆನ್ ನಿವೃತ್ತಿ ಘೋಷಿಸಿದ್ದು, ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ. ಆದರೆ, ಕ್ಲಾಸೆನ್ ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಆಡುವುದನ್ನು ಮುಂದುವರಿಸಲಿದ್ದಾರೆ.

Instagram ಪೋಸ್ಟ್ ಮೂಲಕ ಕ್ಲಾಸೆನ್ ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ.ನಾನು ಕೆಂಪು ಚೆಂಡು ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ.ಇದು ನಾನು ತೆಗೆದುಕೊಳ್ಳುವ ಕಠಿಣ ನಿರ್ಧಾರವಾಗಿದೆ. ಟೆಸ್ಟ್ ನನ್ನ ನೆಚ್ಚಿನ ಕ್ರಿಕೆಟ್ ಆಗಿದೆ.ಮೈದಾನದ ಒಳಗೆ ಮತ್ತು ಹೊರಗೆ ನಾನು ಎದುರಿಸಿದ ಕೆಲವು ಸನ್ನಿವೇಶಗಳು  ನನ್ನನ್ನು ಶ್ರೇಷ್ಠ ಕ್ರಿಕೆಟಿಗನನ್ನಾಗಿ ಮಾಡಿದೆ. ಇದೊಂದು ಅದ್ಭುತ ಪ್ರಯಾಣವಾಗಿದ್ದು,   ನಾನು ನನ್ನ ದೇಶವನ್ನು ಪ್ರತಿನಿಧಿಸುತ್ತಿರುವುದು ಸಂತಸ ತಂದಿದೆ ಎಂದು ಬರೆದಿದ್ದಾರೆ. ರೆಡ್ ಬಾಲ್ ವೃತ್ತಿಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದ್ದಾರೆ. 

ಇದನ್ನೂ ಓದಿ : ಇಂಗ್ಲೆಂಡ್ ಟೆಸ್ಟ್ ಸರಣಿಯಿಂದಲೂ ಹೊರಗುಳಿಯಲಿದ್ದಾರೆ ಟೀಂ ಇಂಡಿಯಾದ ಈ ವೇಗದ ಬೌಲರ್!

2019 ರಲ್ಲಿ ಪಾದಾರ್ಪಣೆ  :
ಈ ಬ್ಯಾಟ್ಸ್‌ಮನ್‌ನ ಟೆಸ್ಟ್ ವೃತ್ತಿಜೀವನದ ಕುರಿತು ಮಾತನಾಡುವುದಾದರೆ, ಕ್ಲಾಸೆನ್ 2019 ರಲ್ಲಿ ಚೊಚ್ಚಲ ಮ್ಯಾಚ್ ಆಡಿದ್ದಾರೆ. ಭಾರತದ ವಿರುದ್ಧ ಈ ಮಾದರಿಯಲ್ಲಿ ಚೊಚ್ಚಲ ಪಂದ್ಯವಾಡಿದ್ದಾರೆ. ಆದರೆ, ಅವರಿಗೆ ಹೆಚ್ಚು ಅವಕಾಶಗಳು ಸಿಗಲಿಲ್ಲ.ಅವರ ವೃತ್ತಿಜೀವನ ಕೇವಲ 4 ಪಂದ್ಯಗಳಿಗೆ ಸೀಮಿತವಾಗಿತ್ತು.ಅವರು 4 ಪಂದ್ಯಗಳಲ್ಲಿ 104 ರನ್ ಗಳಿಸಿದರು. ಈ ಪಂದ್ಯಗಳಲ್ಲಿ ಅವರ ಬ್ಯಾಟ್‌ನಿಂದ ಯಾವುದೇ ಶತಕ ಅಥವಾ ಅರ್ಧಶತಕ  ಸಿಡಿಯಲಿಲ್ಲ. 

ಅತ್ಯುತ್ತಮವಾಗಿವೆ  ಪ್ರಥಮ ದರ್ಜೆಯ ಅಂಕಿಅಂಶಗಳು  : 
ಹೆನ್ರಿಕ್ ಕ್ಲಾಸೆನ್ 85 ಪ್ರಥಮ ದರ್ಜೆ ಪಂದ್ಯಗಳಲ್ಲಿ 5347 ರನ್ ಗಳಿಸಿದ್ದಾರೆ. ಇವುಗಳಲ್ಲಿ ಅವರು 12 ಶತಕಗಳು ಮತ್ತು 24 ಅತ್ಯುತ್ತಮ ಅರ್ಧ ಶತಕಗಳನ್ನು ಗಳಿಸಿದ್ದಾರೆ.ದಕ್ಷಿಣ ಆಫ್ರಿಕಾ ಪರ 54 ODI ಪಂದ್ಯಗಳನ್ನು ಆಡಿರುವ ಅವರು ನಾಲ್ಕು ಶತಕಗಳೊಂದಿಗೆ 1723 ರನ್ ಗಳಿಸಿದ್ದಾರೆ. ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 43 ಪಂದ್ಯಗಳಲ್ಲಿ 722 ರನ್ ಗಳಿಸಿದ್ದಾರೆ.ಐಪಿಎಲ್‌ನಲ್ಲಿ  19 ಪಂದ್ಯಗಳಲ್ಲಿ 504 ರನ್ ಗಳಿಸಿದ್ದಾರೆ. ಈ ಲೀಗ್‌ನಲ್ಲಿ ಅವರ ಹೆಸರಿಗೆ ಶತಕವೂ ಇದೆ.  

ಇದನ್ನೂ ಓದಿ : Rohit Sharma: ರೋಹಿತ್ ಶರ್ಮಾಗೆ ಐಸಿಸಿ ನಿಷೇಧ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News