ದ.ಆಫ್ರಿಕಾ ಟಿ20 ಸರಣಿಗೆ ಮರಳಿದ ಪಾಂಡ್ಯ: ಈ ಆಟಗಾರನಿಗೆ ಎದುರಾಯ್ತು ಸಂಕಷ್ಟ!

ಜೂನ್ 9 ರಿಂದ ಜೂನ್ 19 ರವರೆಗೆ ಈ ಟೂರ್ನಿಯು ನಡೆಯಲಿದೆ. ಸರಣಿಯಲ್ಲಿ ದಿನೇಶ್ ಕಾರ್ತಿಕ್ ಮತ್ತು ಹಾರ್ದಿಕ್ ಪಾಂಡ್ಯ ತಂಡಕ್ಕೆ ವಾಪಸ್ ಬಂದಿದ್ದಾರೆ. ಪಾಂಡ್ಯ ಆಗಮನವು ತಂಡದ ಬಲಿಷ್ಠ ಆಟಗಾರನಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಲಿದೆ.  

Written by - Bhavishya Shetty | Last Updated : May 31, 2022, 10:54 AM IST
  • ಭಾರತ ಮತ್ತು ದಕ್ಷಿಣ ಆಫ್ರಿಕಾ ಟಿ 20 ಟೂರ್ನಿ
  • ತಂಡಕ್ಕೆ ಮರಳಿದ ಹಾರ್ದಿಕ್‌ ಪಾಂಡ್ಯ
  • ಭಾರತೀಯ ಕ್ರಿಕೆಟ್‌ ತಂಡದ ಆಟಗಾರನಿಗೆ ಕಹಿಯಾದ ಸುದ್ದಿ
 ದ.ಆಫ್ರಿಕಾ ಟಿ20 ಸರಣಿಗೆ ಮರಳಿದ ಪಾಂಡ್ಯ: ಈ ಆಟಗಾರನಿಗೆ ಎದುರಾಯ್ತು ಸಂಕಷ್ಟ!  title=
Hardik Pandya

ಐಪಿಎಲ್‌ 2022ರಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದ ಗುಜರಾತ್‌ ಟೈಟಾನ್ಸ್‌ ತಂಡವನ್ನು ನಾಯಕ ಹಾರ್ದಿಕ್‌ ಪಾಂಡ್ಯ ಯಶಸ್ವಿಯಾಗಿ ಮುನ್ನಡೆಸಿದ್ದರು. ಇದೀಗ ಲೀಗ್‌ನ ಬಳಿಕ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಐದು ಪಂದ್ಯಗಳ T20 ಸರಣಿಯಲ್ಲಿ ಭಾಗವಹಿಸಲಿದ್ದಾರೆ. ಈ ಸುದ್ದಿ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದ್ದರೆ, ಭಾರತೀಯ ಕ್ರಿಕೆಟ್‌ ತಂಡದ ಆಟಗಾರನೊಬ್ಬನಿಗೆ ಕಹಿ ಸುದ್ದಿಯಾಗಿ ಪರಿಣಮಿಸಿದೆ.  

ಜೂನ್ 9 ರಿಂದ ಜೂನ್ 19 ರವರೆಗೆ ಈ ಟೂರ್ನಿಯು ನಡೆಯಲಿದೆ. ದಿನೇಶ್ ಕಾರ್ತಿಕ್ ಮತ್ತು ಹಾರ್ದಿಕ್ ಪಾಂಡ್ಯ ತಂಡಕ್ಕೆ ವಾಪಸ್ ಬಂದಿದ್ದಾರೆ. ಆದರೆ ಪಾಂಡ್ಯ ಆಗಮನವು ತಂಡದ ಬಲಿಷ್ಠ ಆಟಗಾರನಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. 

ಇದನ್ನು ಓದಿ: 'ಹಾರ್ದಿಕ್ ಪಾಂಡ್ಯ ಭವಿಷ್ಯದ ಭಾರತ ಕ್ರಿಕೆಟ್ ತಂಡದ ನಾಯಕ'

2021 ರ ಟಿ20 ವಿಶ್ವಕಪ್ ನಂತರ ಹಾರ್ದಿಕ್ ಪಾಂಡ್ಯ ಮೊದಲ ಬಾರಿಗೆ ಟೀಮ್ ಇಂಡಿಯಾದ ಭಾಗವಾಗಿ ಆಡುತ್ತಿದ್ದಾರೆ. ಪಾಂಡ್ಯ ಗಾಯಗೊಂಡು ಕೆಲ ಸಮಯದವರೆಗೆ ರೆಸ್ಟ್‌ನಲ್ಲಿದ್ದರು. ಆ ಸಂದರ್ಭದಲ್ಲಿ ಪಾಂಡ್ಯರನ್ನು ಯುವ ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ ರಿಪ್ಲೇಸ್‌ ಮಾಡಿದ್ದರು. ಆದರೆ ಹಾರ್ದಿಕ್ ಇದೀಗ ತಂಡಕ್ಕೆ ಮರಳಿದ್ದು, ವೆಂಕಟೇಶ್ ಅಯ್ಯರ್ ಟೀಂ XI ನಲ್ಲಿ ಸ್ಥಾನ ಪಡೆಯುವುದು ಕಷ್ಟವಾಗಿದೆ.

ಐಪಿಎಲ್ 2022ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಪರ ಆಡಿದ್ದ ವೆಂಕಟೇಶ್ ಅಯ್ಯರ್ ಕಳಪೆ ಫಾರ್ಮ್‌ನಲ್ಲಿದ್ದರು. ವೆಂಕಟೇಶ್ ಅಯ್ಯರ್ ಐಪಿಎಲ್ 2022 ರಲ್ಲಿ ಆಡಿದ 12 ಪಂದ್ಯಗಳಲ್ಲಿ 16.55 ಸರಾಸರಿಯಲ್ಲಿ ಕೇವಲ 182 ರನ್ ಗಳಿಸಿದರು. ಅಷ್ಟೇ ಅಲ್ಲದೆ, ಕೇವಲ 1 ಅರ್ಧಶತಕ ಬಾರಿಸಿದ್ದರು. ವೆಂಕಟೇಶ್ ಅಯ್ಯರ್ ಟೀಂ ಇಂಡಿಯಾ ಪರ 2 ಒಡಿಐ ಮತ್ತು 9 ಟಿ20 ಪಂದ್ಯಗಳನ್ನು ಆಡಿದ್ದಾರೆ. ಈ ODIಗಳಲ್ಲಿ ಅವರು 12.00 ಸರಾಸರಿಯಲ್ಲಿ 24 ರನ್ ಗಳಿಸಿದ್ದಾರೆ. ಇನ್ನು ಟಿ 20 ನಲ್ಲಿ 133 ರನ್ ಗಳಿಸಿ, 5 ವಿಕೆಟ್‌ಳನ್ನು ಪಡೆದಿದ್ದಾರೆ.

ಇದನ್ನು ಓದಿ: ಐಪಿಎಲ್ ಟ್ರೋಫಿ ನಂತರ ಈಗ ವಿಶ್ವಕಪ್ ಮೇಲೆ ಕಣ್ಣಿಟ್ಟಿರುವ ಹಾರ್ದಿಕ್ ಪಾಂಡ್ಯ

ಗುಜರಾತ್‌ ಚಾಂಪಿಯನ್‌: 
ಹಾರ್ದಿಕ್ ಪಾಂಡ್ಯ ನಾಯಕನಾಗಿ ಗುಜರಾತ್‌ ಟೈಟಾನ್ಸ್‌ ತಂಡವನ್ನು ಮುನ್ನಡೆಸಿದ್ದಲ್ಲದೆ, ಚಾಂಪಿಯನ್‌ ಪಟ್ಟ ದಕ್ಕಿಸಿಕೊಟ್ಟಿದ್ದಾರೆ. ಚೊಚ್ಚಲ ಬಾರಿ ಸೀಸನ್‌ಗೆ ಪ್ರವೇಶ ಪಡೆದ ಟೈಟಾನ್ಸ್‌ ತಂಡವು ಮೊದಲ ಬಾರಿಯೇ ಚಾಂಪಿಯನ್‌ಗಳಾಗಿ ಹೊರಹೊಮ್ಮಿದೆ. ಈ ಸೀಸನ್‌ನಲ್ಲಿ ಹಾರ್ದಿಕ್‌ 131 ಸ್ಟ್ರೈಕ್ ರೇಟ್‌ನಲ್ಲಿ 487 ರನ್ ಗಳಿಸಿದ್ದಾರೆ. ಜೊತೆಗೆ 8 ವಿಕೆಟ್‌ಗಳನ್ನು ಪಡೆದಿದ್ದಾರೆ. ಅಂತಿಮ ಪಂದ್ಯದಲ್ಲೂ ಹಾರ್ದಿಕ್ ಸ್ವಂತ ಬಲದಿಂದ ತಂಡಕ್ಕೆ ಜಯ ತಂದುಕೊಟ್ಟಿದ್ದಾರೆ. ಈ ಪಂದ್ಯದಲ್ಲಿ ಅವರು ನಾಲ್ಕು ಓವರ್‌ಗಳಲ್ಲಿ 17 ರನ್‌ಗಳಿಗೆ 3 ವಿಕೆಟ್‌ಗಳನ್ನು ಪಡೆದಿದ್ದರು.  

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News