Hardik Pandya And Rohit Sharma: IPL 2024 ರ MI vs GT ಪಂದ್ಯದ ವೀಕ್ಷಣೆಯ ಸಮಯದಲ್ಲಿ ಹಾರ್ದಿಕ್ ಪಾಂಡ್ಯ ಇಡೀ ಮೈದಾನದಲ್ಲಿ ರೋಹಿತ್ ಶರ್ಮಾ ಓಡಾಡುವಂತೆ ಮಾಡಿದ್ದಾರೆ. ಮೈದಾನದ ಮೂಲೆಯಲ್ಲಿ ಹಿಟ್‌ಮ್ಯಾನ್‌ಗೆ ನಿಲ್ಲುವಂತೆ ಸೂಚಿಸಿದ್ದಾರೆ. ಫೀಲ್ಡ್ ಹೊಂದಾಣಿಕೆ ಮಾಡಲು ರೋಹಿತ್ ಶರ್ಮಾ ಜೊತೆ ಹಾರ್ದಿಕ್ ಪಾಂಡ್ಯ ವರ್ತಿಸಿದ ರೀತಿ ನೆಟ್ಟಿಗರ ಅಸಮಾಧಾನಕ್ಕೆ ಕಾರಣವಾಗಿದೆ.
ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ 2024 ರ ಮೊದಲ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ 6 ರನ್‌ಗಳಿಂದ ಸೋಲುಂಡಿದೆ. ಈ ಪಂದ್ಯದ ಕೆಲವು ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ. ಪಂದ್ಯದ ಸಮಯದಲ್ಲಿ ನಡೆದ ಕೆಲವು ಘಟನೆಗಳ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಹಾರ್ದಿಕ್ ಫೀಲ್ಡಿಂಗ್ ಮಾಡಲು ರೋಹಿತ್ ಶರ್ಮಾ ಅವರನ್ನು ಮೈದಾನದ ಮೂಲೆಗೆ ಕಳಿಸುವ ವಿಡಿಯೋ ಟ್ರೋಲ್ʼಗೆ ಗುರಿಯಾಗಿದೆ.
Hardik Pandya is toying with him Changing his fielding position after every ball 😭🤣 https://t.co/Fff80v8yTg
— Wellu (@Wellutwt) March 24, 2024
ಐಪಿಎಲ್‌ನ 5ನೇ ಪಂದ್ಯದಲ್ಲಿ ಟಾಸ್ ಗೆದ್ದ ಪಾಂಡ್ಯ ಮೊದಲು ಬೌಲಿಂಗ್ ಮಾಡುವ ನಿರ್ಧಾರ ತೆಗೆದುಕೊಂಡಿದ್ದರು. ಈ ಪಂದ್ಯದಲ್ಲಿ ಚೆಂಡನ್ನು ಕೈಗೆತ್ತಿಕೊಂಡ ಹಾರ್ದಿಕ್ ಪಾಂಡ್ಯ ಮೊದಲ ಓವರ್ ಎಸೆಯುವ ಮೂಲಕ ಎಲ್ಲರ ಗಮನ ಸೆಳೆದರು. ಬೌಲಿಂಗ್ ಲೈನಪ್ ಮತ್ತು ಫೀಲ್ಡಿಂಗ್‌ನಲ್ಲೂ ಹಲವು ಪ್ರಯೋಗಗಳನ್ನು ಹಾರ್ದಿಕ್ ಪಾಂಡ್ಯ ಗುಜರಾತ್ ವಿರುದ್ಧದ ಮ್ಯಾಚ್‌ನಲ್ಲಿ ಮಾಡಿದ್ದಾರೆ.
ಇದನ್ನೂ ಓದಿ: IPL 2024: ಮುಂಬೈ ಇಂಡಿಯನ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ ಗೆ 6 ರನ್ ಗಳ ರೋಚಕ ಗೆಲುವು
ಪವರ್ ಪ್ಲೇ ಮುಕ್ತಾಯವಾಗುತ್ತಿದ್ದಂತೆ ರೋಹಿತ್ ಶರ್ಮಾ ಅವರನ್ನು ಹಾರ್ದಿಕ್ ಪಾಂಡ್ಯ ಬೌಂಡರಿ ಲೈನ್ ಕಡೆ ನಿಲ್ಲಿಸಿದರು. ಸಾಮಾನ್ಯವಾಗಿ ರೋಹಿತ್ ಸ್ಲಿಪ್ ಹಾಗೂ ಫ್ರಂಟ್ ಫೀಲ್ಡಿಂಗ್‌ನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದರು. ಆದರೆ ಈ ಪಂದ್ಯದಲ್ಲಿ ಪಾಂಡ್ಯ ಮಾತ್ರ ರೋಹಿತ್ ಶರ್ಮಾ ಅವರನ್ನು ಲಾಂಗ್ ಆನ್ ಕಡೆ ನಿಲ್ಲಿಸಿದರು.
#chapri So called harpik landya showing zero respect to 5 times champion team’s captain hitman. I’m not a Rohit sharma’s fan but I really feel sorry for him. I’m emotional seeing him like this. #HardikPandya why ?😡#HardikPandya #RohitSharma #chapri pic.twitter.com/emi4Zfr1AT
— A T E L O P H O B I C (@imXIDDI) March 25, 2024
ಹಾರ್ದಿಕ್ ಪಾಂಡ್ಯ ಪಂದ್ಯದ ಮಧ್ಯೆಯೂ ಹಲವು ಬಾರಿ ರೋಹಿತ್ ಶರ್ಮಾ ಅವರ ಫೀಲ್ಡಿಂಗ್ ಬದಲಿಸಿದ್ದು, ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಒಮ್ಮೆ ಸ್ಲಿಪ್, ಮತ್ತೊಮ್ಮೆ ಲೆಗ್ ಸೈಡ್, ಇನ್ನೊಮ್ಮೆ ಲಾಂಗ್ ಆನ್, ಬಳಿಕ ಮಿಡ್ ವಿಕೆಟ್ ಹೀಗೆ ಇಡೀ ಮೈದಾನದ ತುಂಬಾ ರೋಹಿತ್ ಶರ್ಮಾ ಅವರನ್ನು ಓಡಾಡಿಸಿದ್ದಾರೆ. ರೋಹಿತ್ ಶರ್ಮಾ ಅವರನ್ನು ಪಾಂಡ್ಯ ನಡೆಸಿಕೊಂಡ ರೀತಿ ಅವರ ಫ್ಯಾನ್ಸ್ ಅಸಮಾಧಾನಕ್ಕೆ ಕಾರಣವಾಗಿದೆ.
Never saw Rohit fielding at boundaries
~He always fielded in the 30 Yards circleHardik Pandya, Sorry to say but you ain't a Thalason anymore!
Rohit Sharma deserves better tbvh. feel bad for Hitman #GTvsMI #RohitSharma𓃵#HardikPandya #IPL2024
https://t.co/npA2bwPBnI— Mohammed Aziz (@itsmeaziz07) March 24, 2024
Honestly, this guy deserves more 😭😭😭 #RohitSharma𓃵 pic.twitter.com/gKsT7TsP3e
— Mr.Software (@_mike_ross_) March 24, 2024
ವೈರಲ್ ಆದ ವಿಡಿಯೋದಲ್ಲಿ ಹಾರ್ದಿಕ್ ಫೀಲ್ಡ್ ಪೊಸಿಷನ್ ಬದಲಾಯಿಸುವಂತೆ ರೋಹಿತ್ ಶರ್ಮಾ ಅವರಿಗೆ ಸಿಗ್ನಲ್ ನೀಡುವುದನ್ನು ನೋಡಬಹುದು. ಈ ವೇಳೆ ಗೊಂದಲದಿಂದ ರೋಹಿತ್ ಶರ್ಮಾ ತಮ್ಮ ಹಿಂದೆ ನೋಡುತ್ತಾರೆ. ಲಾಂಗ್ ಆನ್ ನತ್ತ ತೆರಳುವಂತೆ ರೋಹಿತ್ ಶರ್ಮಾಗೆ ಪಾಂಡ್ಯ ಸೂಚಿಸಿದಾಗ, ಗೊಂದಲದಿಂದ ನಾನಾ ಎಂದು ಹಿಟ್‌ಮ್ಯಾನ್ ಕೇಳುತ್ತಾರೆ. ಹೌದು ನೀನೇ, ಬೌಂಡರಿ ಲೈನ್ ಕಡೆ ಹೋಗು ಎಂದು ಹಾರ್ದಿಕ್ ಪಾಂಡ್ಯ ಕೈ ಸನ್ನೆ ಮೂಲಕ ಹೇಳುತ್ತಾರೆ ಈ ವಿಡಿಯೋ ಭಾರೀ ವೈರಲ್ ಆಗಿದೆ.
ಇದನ್ನೂ ಓದಿ: RR Vs LSG : ಸ್ಯಾಮ್ಸನ್- ಪರಾಗ್ ಜೊತೆಯಾಟ, 20ರನ್ ಗಳ ಅಂತರದಿಂದ ಗೆಲುವು ಸಾಧಿಸಿದ ರಾಜಸ್ಥಾನ್
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಶುಭಮನ್ ಗಿಲ್ ನಾಯಕತ್ವದ ಗುಜರಾತ್ ಟೈಟಾನ್ಸ್ 6 ರನ್‌ಗಳಿಂದ ಗೆದ್ದಿದಲುವು ದಾಖಲಿಸಿತು. ಟಾಸ್ ಸೋತ ಗುಜರಾತ್ ಮೊದಲು ಬ್ಯಾಟಿಂಗ್ ಮಾಡಿ 20 ಓವರ್‌ಗಳಲ್ಲಿ 168/6 ರನ್ ಗಳಿಸಿತು. ಸಾಯಿ ಸುದರ್ಶನ್ ತಂಡಕ್ಕೆ 3 ಬೌಂಡರಿ ಮತ್ತು 1 ಸಿಕ್ಸರ್ ಸೇರಿದಂತೆ 45 (39 ಎಸೆತ) ರನ್ ನೀಡಿದರು. ನಂತರ ಗುರಿ ಬೆನ್ನತ್ತಲು ಬಂದ ಮುಂಬೈ ತಂಡ 20 ಓವರ್ ಗಳಲ್ಲಿ 162/9 ರನ್ ಗಳಿಸಲಷ್ಟೇ ಶಕ್ತವಾಯಿತು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.