ನವದೆಹಲಿ: ಟೋಕಿಯೊ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದು ನೀರಜ್ ಚೋಪ್ರಾ(Neeraj Chopra)130 ಕೋಟಿ ಭಾರತೀಯರ ಕನಸು ನನಸು ಮಾಡಿದ್ದಾರೆ. 87.58 ಮೀ. ದೂರ ಜಾವೆಲಿನ್ ಎಸೆಯುವ ಮೂಲಕ ‘ಚಿನ್ನ’ಕ್ಕೆ ಗುರಿಯಿಟ್ಟ ನೀರಜ್ ‘ಬಂಗಾರದ ಮನುಷ್ಯ’ನಾಗಿ ಹೊಸ ಭಾಷ್ಯ ಬರೆದಿದ್ದಾರೆ. ಒಲಿಂಪಿಕ್ಸ್ ಟ್ರಾಕ್ ಮತ್ತು ಫೀಲ್ಡ್ ನಲ್ಲಿ ಭಾರತೀಯ ಅಥ್ಲೀಟ್ ಚಿನ್ನ ಗೆಲ್ಲುವ ಕನಸು ನನಸಾದಂತಾಗಿದೆ. ಟೋಕಿಯೊ ಕ್ರೀಡಾಂಗಣದಲ್ಲಿ ಭಾರತೀಯ ರಾಷ್ಟ್ರಗೀತೆ ಮೊಳಗಿದ ತಕ್ಷಣ ಇಡೀ ದೇಶದಲ್ಲಿಯೇ ಸಂಭ್ರಮಾಚರಣೆ ನಡೆಯಿತು. ದೇಶಾದ್ಯಂತ ಪಟಾಕಿ ಸಿಡಿಸಿ ಜರನು ಸಂಭ್ರಮಿಸಿದರು.
ಟೋಕಿಯೊ ಒಲಂಪಿಕ್ಸ್(Tokyo Olympics 2020)ನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾಗೆ ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ. ಅವರಿಗೆ ಬಹುಮಾನಗಳ ಸುರಿಮಳೆಯೇ ಹರಿದುಬಂದಿದೆ. ಈ ಮಧ್ಯೆ ಗುಜರಾತ್‌ನ ಭರೂಚ್ ನಲ್ಲಿ ನೀರಜ್ ಹೆಸರಿನವರಿಗೆ ಉಚಿತವಾಗಿ ಪೆಟ್ರೋಲ್ ನೀಡಲಾಗುತ್ತಿದೆ. ಹೌದು, ಭರೂಚ್ ನಲ್ಲಿರುವ ಪೆಟ್ರೋಲ್ ಬಂಕ್ ಮಾಲೀಕರೊಬ್ಬರು ನೀರಜ್ ಹೆಸರಿನವರಿಗೆ ಉಚಿತವಾಗಿ ಪೆಟ್ರೋಲ್ ನೀಡುವುದಾಗಿ ಘೋಷಿಸಿದ್ದಾರೆ. ಯಾವಾಗ ಭಾರತಕ್ಕೆ ಚಿನ್ನದ ಪದಕ ಬಂತೋ ಬಂಕ್ ಮಾಲೀಕರು ನೀರಜ್ ಹೆಸರಿನವರಿಗೆ 501 ರೂ. ಮೊತ್ತದ ಉಚಿತ ಪೆಟ್ರೋಲ್ ನೀಡುವುದಾಗಿ ಘೋಷಿಸಿದ್ದಾರೆ.
Gujarat | Ayuub Pathan, a petrol pump owner in Bharuch, offers free petrol, up to Rs 501, to people who share their names with Olympic gold medallist Neeraj Chopra.
"It is our 2-day scheme to honour him. We're entertaining all valid ID Card-holding namesakes of Chopra," he said. pic.twitter.com/PAc43jYw6Q
— ANI (@ANI) August 9, 2021
ಇದನ್ನೂ ಓದಿ: IND vs ENG ಮೊದಲ ಟೆಸ್ಟ್ ಮಳೆಯಿಂದಾಗಿ ಡ್ರಾ..!
ನೇತ್ರಾಂಗ್ ಪಟ್ಟಣದ ಎಸ್ಪಿ ಪೆಟ್ರೋಲಿಯಂ ಮಾಲೀಕರಾದ ಅಯೂಬ್ ಪಠಾಣ್ ಅವರೇ ಉಚಿತ ಪೆಟ್ರೋಲ್(Free Fuel)ಘೋಷಿಸಿ ಸಂಭ್ರಮಿಸಿದ್ದಾರೆ. ಈ ಬಗ್ಗೆ ಮಾತನಾಡಿರವ ಅವರು, ಭರೂಚ್ ಪ್ರದೇಶದಲ್ಲಿರುವ ನೀರಜ್ ಹೆಸರಿನ ಎಲ್ಲರಿಗೂ ಉಚಿತವಾಗಿ 501 ರೂ. ಮೌಲ್ಯದ ಪೆಟ್ರೋಲ್ ನೀಡಲಾಗುವುದು. ನೀರಜ್ ಹೆಸರಿನವರು ತಮ್ಮ ಐಡಿ ಕಾರ್ಡ್ ತೋರಿಸುವ ಮೂಲಕ ಉಚಿತ ಪೆಟ್ರೋಲ್ ಪಡೆದುಕೊಳ್ಳಬಹುದು. ಸೋಮವಾರ ಸಂಜೆವರೆಗೆ ಈ ಆಫರ್ ನೀರಜ್ ಹೆಸರಿನವರಿಗೆ ಸಿಗಲಿದೆ ಅಂತಾ ತಿಳಿಸಿದ್ದಾರೆ.
ನೀರಜ್ ಚೋಪ್ರಾ(Neeraj Chopra)ಚಿನ್ನದ ಪದಕ ಗೆದ್ದು ಇಡೀ ದೇಶಕ್ಕೆ ಹೆಮ್ಮೆ ತಂದುಕೊಟ್ಟಿದ್ದಾರೆ. ಹೀಗಾಗಿ ನಾವು ಉಚಿತ ಪೆಟ್ರೋಲ್ ಘೋಷಿಸಿ ಸಂಭ್ರಮಾಚರಣೆ ಮಾಡುತ್ತಿದ್ದೇವೆ. ನೀರಜ್ ಹೆಸರಿನವರು ಎಷ್ಟು ಜನರು ಬೇಕಾದರೂ ನಮ್ಮ ಬಂಕ್ ಗೆ ಬಂದು ಉಚಿತ ಪೆಟ್ರೋಲ್ ಆಫರ್ ಪಡೆದುಕೊಳ್ಳಬಹುದು. ಬರುವಾಗ ನೀರಜ್ ಹೆಸರಿನ ಐಡಿ ಕಾರ್ಡ್ ತಂದರೆ ಸಾಕು ನಾವು 501 ರೂ. ಮೌಲ್ಯದ ಪೆಟ್ರೋಲ್ ಅನ್ನು ನೀಡುತ್ತೇವೆ ಅಂತಾ ಹೇಳಿದ್ದಾರೆ.
ಇದನ್ನೂ ಓದಿ: Video ನೋಡಿ: ಕಣ್ಣೀರಿಡುತ್ತಲೇ ಬಾರ್ಸಿಲೋನಾ ಎಫ್‌ಸಿ ತಂಡಕ್ಕೆ ಗುಡ್ ಬೈ ಹೇಳಿದ ಲಿಯೊನೆಲ್ ಮೆಸ್ಸಿ..!
ಇಲ್ಲಿಯವರೆಗೆ ಒಟ್ಟು 30 ಜನರು ಉಚಿತ ಪೆಟ್ರೋಲ್ ಪಡೆದುಕೊಂಡಿದ್ದಾರೆಂದು ಪೆಟ್ರೋಲ್ ಪಂಪ್ ಮಾಲೀಕರು ಹೇಳಿದ್ದಾರೆ. ‘ಮೊದಲು ಇದೊಂದು ಸುಳ್ಳು ಸುದ್ದಿ ಎಂದು ನಾನು ಭಾವಿಸಿದ್ದೆ. ಆದರೆ ಪಂಪ್ ತಲುಪಿದಾಗ ಅದು ನಿಜವೆಂದು ಕಂಡುಕೊಂಡೆ. 501 ರೂ. ಮೌಲ್ಯದ ಉಚಿತ ಪೆಟ್ರೋಲ್ ಲಾಭವನ್ನು ನಾನು ಪಡೆದುಕೊಂಡೆ’ ಅಂತಾ ನೀರಜ್ ಹೆಸರಿನ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ