ಗಂಭೀರ್‌ ಮುಖ್ಯ ಕೋಚ್‌ ಆಗಿ ಮುಂದುವರೆಯುವುದು ದೊಡ್ಡ ಟಾಸ್ಕ್‌: ಶಾಕಿಂಗ್‌ ಹೇಳಿಕೆ ಕೊಟ್ಟ ರವಿಶಾಸ್ತ್ರಿ...

Ravi Shastri on Gautam Gambhir: ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಅಧಿಕಾರ ವಹಿಸಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ. ಅವರ ಅಧಿಕಾರದಲ್ಲಿ ಟೀಂ ಇಂಡಿಯಾ ಉತ್ತಮ ಫಲಿತಾಂಶಗಳನ್ನು ಸಾಧಿಸಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ. ಆದರೆ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಮುಂದೆ ಇರುವ ದೊಡ್ಡ ಕೆಲಸವೆಂದರೆ ಆಟಗಾರರನ್ನು ಸಮನ್ವಯಗೊಳಿಸುವುದು ಎಂದು ರವಿಶಾಸ್ತ್ರಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.   

Written by - Zee Kannada News Desk | Last Updated : Jul 27, 2024, 07:55 AM IST
  • ಗಂಭೀರ್ ಅವರ ಕೋಚಿಂಗ್ ತುಂಬಾ ಸರಳವಾಗಿದೆ. ಅವರಿಗೆ ತಮ್ಮದೇ ಆದ ಆಲೋಚನೆಗಳಿವೆ.
  • ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಮುಂದೆ ಇರುವ ದೊಡ್ಡ ಕೆಲಸವೆಂದರೆ ಆಟಗಾರರನ್ನು ಸಮನ್ವಯಗೊಳಿಸುವುದು ಎಂದು ರವಿಶಾಸ್ತ್ರಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
  • ರವಿಶಾಸ್ತ್ರಿ ಅವರು 2021 ರ ಟಿ20 ವಿಶ್ವಕಪ್ ವರೆಗೆ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಿದ್ದಾರೆ.
ಗಂಭೀರ್‌ ಮುಖ್ಯ ಕೋಚ್‌ ಆಗಿ ಮುಂದುವರೆಯುವುದು ದೊಡ್ಡ ಟಾಸ್ಕ್‌: ಶಾಕಿಂಗ್‌ ಹೇಳಿಕೆ ಕೊಟ್ಟ ರವಿಶಾಸ್ತ್ರಿ... title=

Ravi Shastri on Gautam Gambhir: ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಅಧಿಕಾರ ವಹಿಸಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ. ಅವರ ಅಧಿಕಾರದಲ್ಲಿ ಟೀಂ ಇಂಡಿಯಾ ಉತ್ತಮ ಫಲಿತಾಂಶಗಳನ್ನು ಸಾಧಿಸಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ. ಆದರೆ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಮುಂದೆ ಇರುವ ದೊಡ್ಡ ಕೆಲಸವೆಂದರೆ ಆಟಗಾರರನ್ನು ಸಮನ್ವಯಗೊಳಿಸುವುದು ಎಂದು ರವಿಶಾಸ್ತ್ರಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

"ಗೌತಮ್ ಗಂಭೀರ್ ತಂಡದಲ್ಲಿರುವ ಹಲವರ ಸಮಕಾಲೀನ. ಅವರು ಐಪಿಎಲ್‌ನಲ್ಲಿ ಮೆಂಟರ್ ಆಗಿ ಯಶಸ್ಸನ್ನು ಗಳಿಸಿದವರು,ಇನ್ನೂ ಯುವಕನಾಗಿರುವ ಅವರು ಹೊಸ ಆಲೋಚನೆಗಳೊಂದಿಗೆ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಗಂಭೀರ್ ಭಾರತ ತಂಡದ ಹಲವು ಆಟಗಾರರೊಂದಿಗೆ ಸಂಪರ್ಕ ಹೊಂದಿದ್ದಾರೆ. ತಂಡದ ಎಲ್ಲಾ ಆಟಗಾರರು ಐಪಿಎಲ್ ಆಡುತ್ತಿದ್ದಾರೆ."

ಇದನ್ನೂ ಓದಿ: Hardik Pandya: ನಾಯಕತ್ವದ ಬೆನ್ನು ಬಿದ್ದವನ ಬೆನ್ನು ಮೂಳೆಯನ್ನೇ ಮುರಿದುಬಿಟ್ಟರು..!

ಗಂಭೀರ್ ಅವರ ಕೋಚಿಂಗ್ ತುಂಬಾ ಸರಳವಾಗಿದೆ. ಅವರಿಗೆ ತಮ್ಮದೇ ಆದ ಆಲೋಚನೆಗಳಿವೆ. ಆದರೆ ಕೋಚ್ ಆಗಿ ಆಟಗಾರರನ್ನು ಸಮನ್ವಯಗೊಳಿಸುವುದು ಬಹಳ ಮುಖ್ಯ. ಇದಕ್ಕೆ ಗಂಭೀರ್ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಆಟಗಾರರ ಸಾಮರ್ಥ್ಯ, ದೌರ್ಬಲ್ಯ ಮತ್ತು ವ್ಯಕ್ತಿತ್ವವನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಅದು ಗಂಭೀರ್‌ ಮುಂದಿರುವ ಮಹತ್ವದ ಕೆಲಸ ಎಂದು ನಾನು ಭಾವಿಸುತ್ತೇನೆ. ಈ ಕಾರ್ಯವು ಅವರಿಗೆ ತುಂಬಾ ಕಷ್ಟಕರವಾಗಿರುವುದಿಲ್ಲ" ಎಂದು ರವಿಶಾಸ್ತ್ರಿ ಹೇಳಿದ್ದಾರೆ.

ರವಿಶಾಸ್ತ್ರಿ ಅವರು 2021 ರ ಟಿ20 ವಿಶ್ವಕಪ್ ವರೆಗೆ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಈ ಪಂದ್ಯಾವಳಿಯು ರವಿಶಾಸ್ತ್ರಿ ಹಾಗೂ ವಿರಾಟ್ ಕೊಹ್ಲಿಯ ನಾಯಕತ್ವದ ವೃತ್ತಿಜೀವನವನ್ನು ಕೊನೆಗೊಳಿಸಿತು. ಬಳಿಕ ರಾಹುಲ್ ದ್ರಾವಿಡ್ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡರು. T20 ವಿಶ್ವಕಪ್ 2024 ಗೆಲುವಿನೊಂದಿಗೆ ಅವರ ಅಧಿಕಾರಾವಧಿಯು ಕೊನೆಗೊಂಡಿತು. ಬಿಸಿಸಿಐ ಹೊಸ ಕೋಚ್ ಆಗಿ ಗಂಭೀರ್ ಅವರನ್ನು ಆಯ್ಕೆ ಮಾಡಿದೆ. ಶ್ರೀಲಂಕಾ ಭೇಟಿಯೊಂದಿಗೆ ಅವರು ತಮ್ಮ ಕರ್ತವ್ಯವನ್ನು ವಹಿಸಿಕೊಳ್ಳಲಿದ್ದಾರೆ. ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟಿ20 ಜುಲೈ 27 ರಂದು ನಡೆಯಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News