IND vs AUS: ಅಂದು ವಾಟರ್ ಬಾಯ್.. ಇಂದು ಶತಕವೀರ! ಟೆಸ್ಟ್ ಕ್ರಿಕೆಟ್’ನಲ್ಲಿ ಇತಿಹಾಸ ಬರೆದ ಈ ಸ್ಟಾರ್ ಕ್ರಿಕೆಟಿಗ

Usman Khawaja Century: ಭಾರತ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಈ ಆಟಗಾರ ತಾನು ಯಾರಿಗೂ ಕಡಿಮೆ ಇಲ್ಲ ಎಂಬುದನ್ನು ಜಗತ್ತಿಗೆ ತೋರಿಸಿದ್ದಾನೆ. ಅಹಮದಾಬಾದ್ ಟೆಸ್ಟ್‌ನಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಮಾಡಲು ನಿರ್ಧರಿಸಿತು.

Written by - Bhavishya Shetty | Last Updated : Mar 10, 2023, 04:23 PM IST
    • ಅಹಮದಾಬಾದ್ ಟೆಸ್ಟ್‌ನಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಮಾಡಲು ನಿರ್ಧರಿಸಿತು.
    • ಉಸ್ಮಾನ್ ಖವಾಜಾ ಅಹಮದಾಬಾದ್ ಟೆಸ್ಟ್ ನ ಮೊದಲ ದಿನವೇ ಶತಕ ಸಿಡಿಸಿದ್ದರು.
    • ಮೊದಲ ದಿನ ಖವಾಜಾ ಅಜೇಯ 104 ರನ್ ಗಳಿಸಿದ್ದರು
IND vs AUS: ಅಂದು ವಾಟರ್ ಬಾಯ್.. ಇಂದು ಶತಕವೀರ! ಟೆಸ್ಟ್ ಕ್ರಿಕೆಟ್’ನಲ್ಲಿ ಇತಿಹಾಸ ಬರೆದ ಈ ಸ್ಟಾರ್ ಕ್ರಿಕೆಟಿಗ title=
Usman Khawaja

Usman Khawaja Century: ಒಂದು ಕಾಲದಲ್ಲಿ ತಂಡದ ವಾಟರ್ ಬಾಯ್ ಆಗಿದ್ದ ಈ ಆಟಗಾರ ಟೆಸ್ಟ್ ನಲ್ಲಿ ಅದ್ಭುತವಾಗಿ ಬ್ಯಾಟ್ ಬೀಸಿದ್ದಾರೆ. ಭಾರತಕ್ಕೆ ಹಲವು ಬಾರಿ ಭೇಟಿ ನೀಡಿದ್ದರೂ ಸಹ ಈ ಆಟಗಾರನಿಗೆ ತಂಡದಲ್ಲಿ ಸ್ಥಾನ ಸಿಕ್ಕಿರಲಿಲ್ಲ. ಆದರೆ ಈಗ ಸಿಕ್ಕ ಅವಕಾಶವನ್ನು ಅದ್ಭುತವಾಗಿ ಬಳಸಿಕೊಂಡ ಅವರು ಶತಕವನ್ನೇ ಸಿಡಿಸಿದ್ದಾರೆ.

ಇದನ್ನೂ ಓದಿ: Slowest Train: ಇದು ಭಾರತದಲ್ಲಿ ಅತೀ ನಿಧಾನವಾಗಿ ಓಡೋ ರೈಲು! ವೇಗ ಕಡಿಮೆಯಾದರೂ ‘ಯುನೆಸ್ಕೋ’ ಪಟ್ಟಿ ಸೇರಿದೆ ಈ ಟ್ರೈನ್…

ಭಾರತ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಈ ಆಟಗಾರ ತಾನು ಯಾರಿಗೂ ಕಡಿಮೆ ಇಲ್ಲ ಎಂಬುದನ್ನು ಜಗತ್ತಿಗೆ ತೋರಿಸಿದ್ದಾನೆ. ಅಹಮದಾಬಾದ್ ಟೆಸ್ಟ್‌ನಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಮಾಡಲು ನಿರ್ಧರಿಸಿತು.

ಆಸ್ಟ್ರೇಲಿಯಾ ಪರ ಓಪನಿಂಗ್ ಮಾಡಲು ಬಂದಿದ್ದ ಉಸ್ಮಾನ್ ಖವಾಜಾ ಅಹಮದಾಬಾದ್ ಟೆಸ್ಟ್ ನ ಮೊದಲ ದಿನವೇ ಶತಕ ಸಿಡಿಸಿದ್ದರು. ಮೊದಲ ದಿನ ಖವಾಜಾ ಅಜೇಯ 104 ರನ್ ಗಳಿಸಿದ್ದರು. ಉಸ್ಮಾನ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಖವಾಜಾ ಇದುವರೆಗಿನ ಸರಣಿಯಲ್ಲಿ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್ ಆಗಿದ್ದಾರೆ. ಇದು ಸರಣಿಯಲ್ಲಿ ಆಸ್ಟ್ರೇಲಿಯಾದ ಮೊದಲ ಶತಕವಾಗಿದೆ. ಖವಾಜಾ ಭಾರತಕ್ಕೆ ಹಲವು ಬಾರಿ ಭೇಟಿ ನೀಡಿದರೂ ತಂಡದಲ್ಲಿ ಸ್ಥಾನ ಪಡೆದಿಲ್ಲ ಎಂಬ ಕಾರಣಕ್ಕೆ ಈ ಶತಕ ಅವರಿಗೆ ವಿಶೇಷವಾಗಿದೆ. ಆಸ್ಟ್ರೇಲಿಯಾದ ಈ ಸರಣಿಯಲ್ಲಿ ಉಸ್ಮಾನ್ ಮಾತ್ರ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್ ಎಂದು ಕಾಣಿಸಿಕೊಂಡಿದ್ದಾರೆ. ಈ ಶತಕದ ಜೊತೆಗೆ ತಮ್ಮ ಹೆಸರಲ್ಲಿ ದೊಡ್ಡ ದಾಖಲೆಯನ್ನು ಬರೆದಿದ್ದಾರೆ.

ಪಂದ್ಯದ ಮೊದಲ ದಿನ ಉಸ್ಮಾನ್ ಖವಾಜಾ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ್ದರು. ಮೊದಲ ದಿನದ ಕೊನೆಯ ಓವರ್ ನಲ್ಲಿ ಬೌಂಡರಿ ಬಾರಿಸುವ ಮೂಲಕ ಶತಕ ಪೂರೈಸಿದರು. ಮೊದಲ ದಿನ 104 ರನ್ ಗಳಿಸಿ ಉಸ್ಮಾನ್ ಅಜೇಯರಾಗಿ ಮರಳಿದರು. ಇದರೊಂದಿಗೆ ಅವರ ಹೆಸರಿನಲ್ಲಿ ದೊಡ್ಡ ದಾಖಲೆಯೂ ಸೇರ್ಪಡೆಗೊಂಡಿದೆ. ಭಾರತದಲ್ಲಿ ಇಡೀ ದಿನ ಬ್ಯಾಟಿಂಗ್ ಮಾಡಿದ ಎರಡನೇ ವಿದೇಶಿ ಆಟಗಾರ ಎನಿಸಿಕೊಂಡಿದ್ದಾರೆ. ಅವರಿಗಿಂತ ಮೊದಲು, ಈ ಪಂದ್ಯದಲ್ಲಿ ತಂಡದ ನಾಯಕರಾಗಿದ್ದ ಸ್ಟೀವ್ ಸ್ಮಿತ್ ಅವರು 2017 ರಲ್ಲಿ 5 ಸೆಷನ್‌ಗಳಿಗೆ ಬ್ಯಾಟಿಂಗ್ ಮಾಡಿದ್ದರು. ಸ್ಮಿತ್ 178 ರನ್ ಗಳ ದೊಡ್ಡ ಇನಿಂಗ್ಸ್ ಆಡಿದರು.

ಇದನ್ನೂ ಓದಿ: ಕಾರ್ಮಿಕರ ಮುಷ್ಕರ: ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಗಳು ಸ್ಥಗಿತ

ಇದುವರೆಗಿನ ಪಂದ್ಯದ ಅಪ್ಡೇಟ್ಸ್:

ಮೊದಲ ದಿನದಾಟದಲ್ಲಿ ಆಸ್ಟ್ರೇಲಿಯಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ 4 ವಿಕೆಟ್ ನಷ್ಟಕ್ಕೆ 255 ರನ್ ಗಳಿಸಿದೆ. ಮೊದಲ ದಿನವೇ ಉಸ್ಮಾನ್ ಖವಾಜಾ ಭರ್ಜರಿ ಶತಕ ಸಿಡಿಸಿದ್ದರು. ಖವಾಜಾ 104 ರನ್ ಗಳಿಸಿ ಅಜೇಯರಾಗುಳಿದರು. ಇದಲ್ಲದೇ, ಕ್ಯಾಮರೂನ್ ಗ್ರೀನ್ ಕೂಡ ತಮ್ಮ ಅರ್ಧಶತಕದಿಂದ 1 ರನ್ ದೂರದಲ್ಲಿದ್ದಾರೆ. 49 ರನ್ ಗಳಿಸಿ ಅಜೇಯರಾಗಿದ್ದಾರೆ. ಭಾರತದ ಪರ ಮೊಹಮ್ಮದ್ ಶಮಿ 2 ವಿಕೆಟ್ ಪಡೆದರೆ, ಅಶ್ವಿನ್ ಮತ್ತು ಜಡೇಜಾ ತಲಾ ಒಂದೊಂದು ವಿಕೆಟ್ ಪಡೆದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News