ಟೆಸ್ಟ್ ಬೆನ್ನಲ್ಲೇ ಟಿ20ಗೆ ನೂತನ ನಾಯಕ! ಜಗತ್ತಿನ ಅತ್ಯುತ್ತಮ ವಿಕೆಟ್ ಕೀಪರ್’ಗೆ ಸಿಗುತ್ತಾ ಕ್ಯಾಪ್ಟನ್ಸಿ ಪಟ್ಟ?

Shahid Afridi Statement: ಮೊಹಮ್ಮದ್ ರಿಜ್ವಾನ್ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಗೆ ತಂಡದ ಭಾಗವಾಗಿದ್ದಾರೆ. ಎರಡು ಆರಂಭಿಕ ಟೆಸ್ಟ್ ಪಂದ್ಯಗಳಲ್ಲಿ ಪಾಕಿಸ್ತಾನವನ್ನು ಸೋಲಿಸುವ ಮೂಲಕ ಆಸ್ಟ್ರೇಲಿಯಾ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ. ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ 360 ರನ್‌’ಗಳ ಭರ್ಜರಿ ಜಯ ಸಾಧಿಸಿದರೆ, ಎರಡನೇ ಪಂದ್ಯದಲ್ಲಿ ಪಾಕಿಸ್ತಾನವನ್ನು 79 ರನ್‌ಗಳಿಂದ ಸೋಲಿಸಿತ್ತು.

Written by - Bhavishya Shetty | Last Updated : Jan 1, 2024, 03:18 PM IST
    • ಪಾಕ್ ಕ್ರಿಕೆಟ್ ತಂಡಕ್ಕೆ ಇಬ್ಬರು ಹೊಸ ನಾಯಕರು ಸಿಕ್ಕಿದ್ದರು.
    • ಶಾಹೀನ್ ಟಿ20 ನಾಯಕನಾಗಿರುವ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
    • ಪಾಕಿಸ್ತಾನಿ ವಾಹಿನಿಯೊಂದರಲ್ಲಿ ಮಾತನಾಡಿದ ಶಾಹಿದ್ ಅಫ್ರಿದಿ
ಟೆಸ್ಟ್ ಬೆನ್ನಲ್ಲೇ ಟಿ20ಗೆ ನೂತನ ನಾಯಕ! ಜಗತ್ತಿನ ಅತ್ಯುತ್ತಮ ವಿಕೆಟ್ ಕೀಪರ್’ಗೆ ಸಿಗುತ್ತಾ ಕ್ಯಾಪ್ಟನ್ಸಿ ಪಟ್ಟ? title=
test cricket

Shahid Afridi Statement: ವಿಶ್ವಕಪ್ 2023ರ ನಂತರ ಬಾಬರ್ ಅಜಮ್ ಪಾಕಿಸ್ತಾನ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿದರು. ಇದಾದ ನಂತರ ಪಾಕ್ ಕ್ರಿಕೆಟ್ ತಂಡಕ್ಕೆ ಇಬ್ಬರು ಹೊಸ ನಾಯಕರು ಸಿಕ್ಕಿದ್ದರು. ಯುವ ವೇಗದ ಬೌಲರ್ ಶಾಹೀನ್ ಶಾ ಆಫ್ರಿದಿಯನ್ನು ಟಿ20 ನಾಯಕರನ್ನಾಗಿ ಮಾಡಿದರೆ, ಶಾನ್ ಮಸೂದ್’ಗೆ ಟೆಸ್ಟ್ ತಂಡದ ನಾಯಕತ್ವವನ್ನು ನೀಡಲಾಯಿತು. ಆದರೆ ಇದೀಗ ಪಾಕಿಸ್ತಾನದ ಮಾಜಿ ಆಲ್‌ ರೌಂಡರ್ ಶಾಹಿದ್ ಅಫ್ರಿದಿ, ಶಾಹೀನ್ ಟಿ20 ನಾಯಕನಾಗಿರುವ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಶಾಹೀನ್ ಬದಲಿಗೆ ತಂಡದ ಮತ್ತೊಬ್ಬ ಆಟಗಾರನಿಗೆ ಕಮಾಂಡ್ ಹಸ್ತಾಂತರಿಸುವ ಕುರಿತು ಅವರು ಮಾತನಾಡಿದ್ದಾರೆ.

ಇದನ್ನೂ ಓದಿ: ತಾನು ಕಂಡಿದ್ದ ಈ ಎರಡು ಕನಸು ನನಸಾಗಲೇ ಇಲ್ಲ! ನೋವು ಹೊರಹಾಕಿದ ಶುಭಮನ್ ಗಿಲ್

ಪಾಕಿಸ್ತಾನಿ ವಾಹಿನಿಯೊಂದರಲ್ಲಿ ಮಾತನಾಡಿದ ಶಾಹಿದ್ ಅಫ್ರಿದಿ, 'ರಿಜ್ವಾನ್ ಅವರ ಕಠಿಣ ಪರಿಶ್ರಮ ಮತ್ತು ಫೋಕಸ್ ಮಟ್ಟವನ್ನು ನಾನು ಪ್ರಶಂಸಿಸುತ್ತೇನೆ. ನಾನು ಹೆಚ್ಚು ಇಷ್ಟಪಡುವ ಅವನ ಅತ್ಯುತ್ತಮ ಗುಣವೆಂದರೆ ಅವನಿಗೆ ಆಟದ ಮೇಲೆ ಇರುವ ಗಮನ. ಯಾರು ಏನು ಮಾಡುತ್ತಿದ್ದಾರೆ, ಏನು ಮಾಡುತ್ತಿಲ್ಲ ಎಂಬುದರ ಬಗ್ಗೆ ಆತ ಗಮನಹರಿಸಲ್ಲ. ಅವನು ನಿಜವಾಗಿಯೂ ಉತ್ತಮ ಆಟಗಾರ. ನಾನು ಆತನನ್ನು ಟಿ20 ನಾಯಕನಾಗಿ ನೋಡಲು ಬಯಸುತ್ತೇನೆ. ಆದರೆ ತಪ್ಪಾಗಿ ಶಾಹೀನ್ ನಾಯಕನಾಗಿದ್ದಾನೆ” ಎಂದು ಹೇಳಿದ್ದಾರೆ. ಇನ್ನು ಈಗಾಗಲೇ ಗೊಂದಲಮಯವಾಗಿರುವ ಪಾಕ್ ಸಮಿತಿ, ಅಫ್ರಿದಿ ಅಭಿಪ್ರಾಯವನ್ನು ಗಣನೆಗೆ ತೆಗೆದುಕೊಂಡು ಹೊಸ ನಾಯಕನನ್ನು ನೇಮಕ ಮಾಡುತ್ತಾ ಎಂಬುದು ಕೆಲವರ ಮಾತಾಗಿದೆ.

ಮೊಹಮ್ಮದ್ ರಿಜ್ವಾನ್ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಗೆ ತಂಡದ ಭಾಗವಾಗಿದ್ದಾರೆ. ಎರಡು ಆರಂಭಿಕ ಟೆಸ್ಟ್ ಪಂದ್ಯಗಳಲ್ಲಿ ಪಾಕಿಸ್ತಾನವನ್ನು ಸೋಲಿಸುವ ಮೂಲಕ ಆಸ್ಟ್ರೇಲಿಯಾ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ. ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ 360 ರನ್‌’ಗಳ ಭರ್ಜರಿ ಜಯ ಸಾಧಿಸಿದರೆ, ಎರಡನೇ ಪಂದ್ಯದಲ್ಲಿ ಪಾಕಿಸ್ತಾನವನ್ನು 79 ರನ್‌ಗಳಿಂದ ಸೋಲಿಸಿತ್ತು. ಸರಣಿಯ ಮೂರನೇ ಮತ್ತು ಕೊನೆಯ ಪಂದ್ಯವು ಜನವರಿ 3 ರಿಂದ ಸಿಡ್ನಿಯಲ್ಲಿ ನಡೆಯಲಿದೆ. ಈ ಟೆಸ್ಟ್ ಪಂದ್ಯದ ನಂತರ, ಪಾಕಿಸ್ತಾನವು ಜನವರಿ 12 ರಿಂದ ಶಾಹೀನ್ ಅಫ್ರಿದಿ ನಾಯಕತ್ವದಲ್ಲಿ ನ್ಯೂಜಿಲೆಂಡ್ ವಿರುದ್ಧ 5 ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ.

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ಪಾಕಿಸ್ತಾನ ತಂಡ

ಶಾಹೀನ್ ಅಫ್ರಿದಿ (ನಾಯಕ), ಬಾಬರ್ ಅಜಮ್, ಮೊಹಮ್ಮದ್ ರಿಜ್ವಾನ್, ಫಖರ್ ಜಮಾನ್, ಸಯೀಮ್ ಅಯೂಬ್, ಸಾಹಿಬ್ಜಾದಾ ಫರ್ಹಾನ್, ಹಸಿಬುಲ್ಲಾ ಖಾನ್, ಇಫ್ತಿಕರ್ ಅಹ್ಮದ್, ಅಜಮ್ ಖಾನ್, ಅಮೀರ್ ಜಮಾಲ್, ಅಬ್ಬಾಸ್ ಅಫ್ರಿದಿ, ಮೊಹಮ್ಮದ್ ವಾಸಿಂ ಜೂನಿಯರ್, ಮೊಹಮ್ಮದ್ ನವಾಜ್, ಹಾರಿಸ್ ರೌಫ್, ಜಮಾನ್ ಖಾನ್.

NZ-PAK T20 ವೇಳಾಪಟ್ಟಿ

  • ಜನವರಿ 12: ನ್ಯೂಜಿಲೆಂಡ್ ವಿರುದ್ಧ ಪಾಕಿಸ್ತಾನ - ಆಕ್ಲೆಂಡ್‌- 1 ನೇ T20I
  • ಜನವರಿ 14: ನ್ಯೂಜಿಲೆಂಡ್ vs ಪಾಕಿಸ್ತಾನ - ಹ್ಯಾಮಿಲ್ಟನ್‌- 2 ನೇ T20I
  • ಜನವರಿ 17: ನ್ಯೂಜಿಲೆಂಡ್ vs ಪಾಕಿಸ್ತಾನ - ಡ್ಯುನೆಡಿನ್‌- 3 ನೇ T20I
  • ಜನವರಿ 19: ನ್ಯೂಜಿಲೆಂಡ್ vs ಪಾಕಿಸ್ತಾನ - ಕ್ರೈಸ್ಟ್‌ ಚರ್ಚ್‌- 4 ನೇ T20I
  • ಜನವರಿ 21: ನ್ಯೂಜಿಲೆಂಡ್ vs ಪಾಕಿಸ್ತಾನ - ಕ್ರೈಸ್ಟ್‌ ಚರ್ಚ್- 5 ನೇ T20I

ಇದನ್ನೂ ಓದಿ: ಬಿಗ್ ಬಾಸ್ ಇತಿಹಾಸದಲ್ಲೇ ಮೊದಲ ಬಾರಿಗೆ... ಆ ಸ್ಪರ್ಧಿಯ ಮೇಲೆ ಪುಸ್ತಕ ಬರೆದ ಅಭಿಮಾನಿ!  

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News