7 ಪಂದ್ಯ, 7 ಶತಕ… ಕೇನ್ ವಿಲಿಯಮ್ಸನ್ ಆಟಕ್ಕೆ 92 ವರ್ಷಗಳ ಬಳಿಕ ಇತಿಹಾಸವೇ ಸೃಷ್ಟಿ, ದಾಖಲೆಗಳೆಲ್ಲಾ ಉಡೀಸ್

Kane Williamson: ಕೇನ್ ವಿಲಿಯಮ್ಸನ್ ಈಗ ಟೆಸ್ಟ್ ಕ್ರಿಕೆಟ್‌ನಲ್ಲಿ 32 ಶತಕಗಳನ್ನು ದಾಖಲಿಸಿದ್ದಾರೆ. ಈ ಸರಣಿಯ ಮೊದಲ ಪಂದ್ಯದಲ್ಲಿ ಡಾನ್ ಬ್ರಾಡ್ಮನ್ ದಾಖಲೆಯನ್ನು ಮುರಿದಿದ್ದರೆ, ಇದೀಗ ಸಚಿನ್ ತೆಂಡೂಲ್ಕರ್ ಅವರನ್ನೂ ಹಿಂದಿಕ್ಕಿದ್ದಾರೆ.

Written by - Bhavishya Shetty | Last Updated : Feb 16, 2024, 03:43 PM IST
    • ನ್ಯೂಜಿಲೆಂಡ್‌ ಮಾಜಿ ಟೆಸ್ಟ್ ನಾಯಕ ಮತ್ತು ಅನುಭವಿ ಬ್ಯಾಟ್ಸ್‌’ಮನ್ ಕೇನ್ ವಿಲಿಯಮ್ಸನ್
    • ಕಳೆದ ಏಳು ಟೆಸ್ಟ್‌ ಪಂದ್ಯ ಮತ್ತು 12 ಇನ್ನಿಂಗ್ಸ್‌’ಗಳಲ್ಲಿ ಅವರು 7 ಶತಕಗಳನ್ನು ಗಳಿಸಿದ್ದಾರೆ
    • ಕೇನ್ ವಿಲಿಯಮ್ಸನ್ ಈಗ ಟೆಸ್ಟ್ ಕ್ರಿಕೆಟ್‌ನಲ್ಲಿ 32 ಶತಕಗಳನ್ನು ದಾಖಲಿಸಿದ್ದಾರೆ
7 ಪಂದ್ಯ, 7 ಶತಕ… ಕೇನ್ ವಿಲಿಯಮ್ಸನ್ ಆಟಕ್ಕೆ 92 ವರ್ಷಗಳ ಬಳಿಕ ಇತಿಹಾಸವೇ ಸೃಷ್ಟಿ, ದಾಖಲೆಗಳೆಲ್ಲಾ ಉಡೀಸ್  title=
kane williamson

Kane Williamson Seven Centuries Last 7 Matches: ನ್ಯೂಜಿಲೆಂಡ್‌ ಮಾಜಿ ಟೆಸ್ಟ್ ನಾಯಕ ಮತ್ತು ಅನುಭವಿ ಬ್ಯಾಟ್ಸ್‌’ಮನ್ ಕೇನ್ ವಿಲಿಯಮ್ಸನ್ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಕಳೆದ ಒಂದೆರೆಡು ವರ್ಷಗಳಲ್ಲಿ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಕಿವೀಸ್ ತಾರೆ ಇದೀಗ ಮತ್ತೊಂದು ಶತಕ ಬಾರಿಸಿದ್ದಾರೆ.

ಕಳೆದ ಏಳು ಟೆಸ್ಟ್‌ ಪಂದ್ಯ ಮತ್ತು 12 ಇನ್ನಿಂಗ್ಸ್‌’ಗಳಲ್ಲಿ ಅವರು 7 ಶತಕಗಳನ್ನು ಗಳಿಸಿದ್ದಾರೆ. ಇಷ್ಟೇ ಅಲ್ಲ, ಹ್ಯಾಮಿಲ್ಟನ್’ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ವಿಲಿಯಮ್ಸನ್ ಎರಡನೇ ಇನ್ನಿಂಗ್ಸ್ ನಲ್ಲಿ 133 ರನ್ ಗಳ ಅಜೇಯ ಇನ್ನಿಂಗ್ಸ್ ಆಡಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದರು. ಆ ಸರಣಿಯಲ್ಲಿ ಅದು ಅವರ ಮೂರನೇ ಶತಕವಾಗಿತ್ತು. ಮೌಂಟ್ ಮೌಂಗನುಯಿಯಲ್ಲಿ ಎರಡೂ ಇನ್ನಿಂಗ್ಸ್‌’ಗಳಲ್ಲಿ ಶತಕಗಳನ್ನು ಗಳಿಸಿದ್ದು, ನ್ಯೂಜಿಲೆಂಡ್ 92 ವರ್ಷಗಳ ನಂತರ ಇತಿಹಾಸ ಸೃಷ್ಟಿಸಿದೆ.

ಇದನ್ನೂ ಓದಿ:  “ಸೂರ್ಯ ಉದಯಿಸುವುದು ತನ್ನದೇ ಸಮಯದಲ್ಲಿ...”- ಸರ್ಫರಾಜ್ ಖಾನ್ ತಂದೆಯ ಭಾವನಾತ್ಮಕ ಹೇಳಿಕೆ

ಕೇನ್ ವಿಲಿಯಮ್ಸನ್ ಈಗ ಟೆಸ್ಟ್ ಕ್ರಿಕೆಟ್‌ನಲ್ಲಿ 32 ಶತಕಗಳನ್ನು ದಾಖಲಿಸಿದ್ದಾರೆ. ಈ ಸರಣಿಯ ಮೊದಲ ಪಂದ್ಯದಲ್ಲಿ ಡಾನ್ ಬ್ರಾಡ್ಮನ್ ದಾಖಲೆಯನ್ನು ಮುರಿದಿದ್ದರೆ, ಇದೀಗ ಸಚಿನ್ ತೆಂಡೂಲ್ಕರ್ ಅವರನ್ನೂ ಹಿಂದಿಕ್ಕಿದ್ದಾರೆ. ಈ ಸರಣಿಗೂ ಮುನ್ನ ಅವರು 29 ಟೆಸ್ಟ್ ಶತಕಗಳನ್ನು ಗಳಿಸಿದ್ದರು. ಈಗ ಅವರ ಹೆಸರಿನಲ್ಲಿ ಒಟ್ಟು 32 ಟೆಸ್ಟ್ ಶತಕಗಳಿವೆ. ಇಷ್ಟೇ ಅಲ್ಲ, ವಿಲಿಯಮ್ಸನ್ ಅತ್ಯಂತ ವೇಗವಾಗಿ 32 ಶತಕ ಸಿಡಿಸಿದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಟೆಸ್ಟ್ ಕ್ರಿಕೆಟ್‌’ನಲ್ಲಿ ಅತಿ ವೇಗದ 32 ಶತಕಗಳು

  • ಕೇನ್ ವಿಲಿಯಮ್ಸನ್ - 172 ಇನ್ನಿಂಗ್ಸ್
  • ಸ್ಟೀವ್ ಸ್ಮಿತ್ - 174 ಇನ್ನಿಂಗ್ಸ್
  • ರಿಕಿ ಪಾಂಟಿಂಗ್- 176 ಇನ್ನಿಂಗ್ಸ್
  • ಸಚಿನ್ ತೆಂಡೂಲ್ಕರ್- 179 ಇನ್ನಿಂಗ್ಸ್
  • ಯೂನಿಸ್ ಖಾನ್- 193 ಇನ್ನಿಂಗ್ಸ್

ಹೆಚ್ಚು ಶತಕಗಳನ್ನು ಗಳಿಸಿದ ಸಕ್ರಿಯ ಕ್ರಿಕೆಟಿಗರು

ಕೇನ್ ವಿಲಿಯಮ್ಸನ್ ಈಗ ಸ್ಟೀವ್ ಸ್ಮಿತ್ ಜೊತೆಗೆ ಅತಿ ಹೆಚ್ಚು ಟೆಸ್ಟ್ ಶತಕಗಳನ್ನು ಗಳಿಸಿದ ಸಕ್ರಿಯ ಕ್ರಿಕೆಟಿಗರಾಗಿದ್ದಾರೆ. ಅಂದಹಾಗೆ ಸಚಿನ್ ತೆಂಡೂಲ್ಕರ್ ಅತಿ ಹೆಚ್ಚು 51 ಶತಕಗಳನ್ನು ಹೊಂದಿದ್ದಾರೆ. ಸಕ್ರಿಯ ಕ್ರಿಕೆಟಿಗರಲ್ಲಿ ವಿಲಿಯಮ್ಸನ್ ಈಗ ಜಿಗಿತ ಕಂಡಿದ್ದಾರೆ. ವಿರಾಟ್ ಕೊಹ್ಲಿ ಆಡದ ಕಾರಣ ಈ ಪಟ್ಟಿಯಲ್ಲಿ ಹಿಂದುಳಿದಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಹೆಚ್ಚಿನ ಶತಕಗಳು (ಸಕ್ರಿಯ ಕ್ರಿಕೆಟಿಗರು)

  • ಕೇನ್ ವಿಲಿಯಮ್ಸನ್ - 32 ಶತಕ
  • ಸ್ಟೀವ್ ಸ್ಮಿತ್ - 32 ಶತಕ
  • ಜೋ ರೂಟ್ - 30 ಶತಕ
  • ವಿರಾಟ್ ಕೊಹ್ಲಿ- 29 ಶತಕ
  • ಚೇತೇಶ್ವರ ಪೂಜಾರ- 19 ಶತಕ

ಇದನ್ನೂ ಓದಿ: 30 ವರ್ಷ ಹಳೆಯ ಶ್ರೇಷ್ಠ ದಾಖಲೆ ಮುರಿದ ಧ್ರುವ್ ಜುರೆಲ್: ಚೊಚ್ಚಲ ಟೆಸ್ಟ್’ನಲ್ಲೇ ಇತಿಹಾಸ ಸೃಷ್ಟಿ

ನ್ಯೂಜಿಲೆಂಡ್‌’ಗೆ ಮೊದಲ ಟೆಸ್ಟ್ ಸರಣಿ ಗೆಲುವು

ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಕೇನ್ ವಿಲಿಯಮ್ಸನ್ ತಂಡ 2-0 ಅಂತರದಲ್ಲಿ ವಶಪಡಿಸಿಕೊಂಡಿದ್ದಾರೆ. ಕಿವೀಸ್ ತಂಡ 92 ವರ್ಷಗಳ ನಂತರ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯನ್ನು ಗೆದ್ದಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News